Monday, Jun 1 2020 | Time 01:16 Hrs(IST)
Entertainment Share

ಅಕ್ಕಪಕ್ಕದ ಕಿರಾಣಿ ಅಂಗಡಿಗಳಲ್ಲಿ ಖರೀದಿಸಿ: ವಿಜಯಲಕ್ಷ್ಮಿ ಟ್ವೀಟ್

ಬೆಂಗಳೂರು, ಮೇ 21(ಯುಎನ್ಐ) ಕೊರೊನಾ ಲಾಕ್​ಡೌನ್ ನಿಂದಾಗಿ ಎಲ್ಲಾ
ಉದ್ಯಮಗಳು ತೊಂದರೆ ಅನುಭವಿಸುತ್ತಿದ್ದು, ಸಣ್ಣ-ಪುಟ್ಟ ಉದ್ಯಮಗಳು ಬದುಕುಳಿಯುವುದು ಕಷ್ಟ ಆಗಿದೆ.
ಈ ವಿಚಾರವನ್ನಿಟ್ಟುಕೊಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಕಿರಾಣಿ ವ್ಯಾಪಾರಿಗಳ ಪರ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.
ಕೊರೊನಾ ಕಾಟದಿಂದ ಸಣ್ಣ ವ್ಯಾಪಾರಿಗಳಿಗೆ ನಷ್ಟ ಉಂಟಾಗುತ್ತಿದೆ. ಒಂದೇ ಒಂದು ತಿಂಗಳು ಬಂದ್ ಆಗಿದ್ದಕ್ಕೆ ಅವರ ವ್ಯಾಪಾರವೇ ಮುಚ್ಚಿ ಹೋಗುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಸಾರ್ವಜನಿಕರು ತರಕಾರಿಗಳನ್ನು ಸ್ಥಳೀಯ ಅಂಗಡಿಗಳಿಂದ ಖರೀದಿಸಿ, ಸಮೀಪದ ದರ್ಶಿನಿಗಳಲ್ಲಿ ಫಿಲ್ಟರ್ ಕಾಫಿ ಕುಡಿಯಿರಿ. ಅಮೆಜಾನ್, ಪಿಜ್ಜಾ, ಕೆಎಫ್‌ಸಿ, ಮ್ಯಾಕ್ ಡೊನಾಲ್ಡ್ ಲಾಕ್ ಡೌನ್ ಜಾರಿಯಲ್ಲಿದ್ದರೂ ಬದುಕುತ್ತವೆ. ಆದರೆ, ಸಣ್ಣ ವ್ಯಾಪಾರಿಗಳ ಕಷ್ಟವನ್ನು ಹೇಳಿ ಮುಗಿಸುವುದಕ್ಕೆ ಆಗುವುದಿಲ್ಲ. ಆದ್ದರಿಂದ ಅಕ್ಕಪಕ್ಕದ ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ. ಇದರಿಂದ ಅವರ ಬದುಕಿಗೆ ಸಹಾಯ ಆಗುತ್ತದೆ ಎಂದು ಅವರು ಟ್ವೀಟ್ ಮಾಡುವ ಮೂಲಕ ಸಾರ್ವಜನಿಕರಿಗೆ ಕೋರಿದ್ದಾರೆ.
ಯುಎನ್ಐ ಪಿಕೆ ಎಎಚ್ 1610