Friday, Feb 28 2020 | Time 07:27 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
International Share

ಅಕ್ರಮ ಹಣ ವರ್ಗಾವಣೆ ಆರೋಪ: ಸೆರೆವಾಸಿ ರಷ್ಯನ್ ನಾಗರಿಕ ಆಸ್ಪತ್ರೆಗೆ ದಾಖಲು

ಅಥೆನ್ಸ್, ಜ 24 (ಯುಎನ್‍ಐ) ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ 2017 ರಲ್ಲಿ ಗ್ರೀಸ್‌ನಲ್ಲಿ ಬಂಧಿಸಲ್ಪಟ್ಟಿದ್ದ ರಷ್ಯಾದ ಪ್ರಜೆ ಅಲೆಕ್ಸಾಂಡರ್ ವಿನ್ನಿಕ್‌ನನ್ನು ಅಥೆನ್ಸ್ ನಿಂದ ಫ್ರಾನ್ಸ್‌ಗೆ ಸಾಗಿಸಲಾಗಿದ್ದು, ಪ್ರಸ್ತುತ ಪ್ಯಾರಿಸ್‌ನ ಆಸ್ಪತ್ರೆಯಲ್ಲಿದ್ದಾರೆ ಎಂದು ವಕೀಲ ಜೊಯಿ ಕಾನ್‌ಸ್ಟಾಂಟೊಪೌಲೊ ಹೇಳಿದ್ದಾರೆ.
ಗುರುವಾರ, ವಿನ್ನಿಕ್ ಅವರನ್ನು ಗ್ರೀಕ್ ಆಸ್ಪತ್ರೆಯಿಂದ ಅಪರಿಚಿತ ಸ್ಥಳಕ್ಕೆ ಕರೆದೊಯ್ಯಲಾಯಿತು ಎಂದು ಅವರ ವಕೀಲರು ತಿಳಿಸಿದ್ದಾರೆ. ವಿನ್ನಿಕ್ ಅವರನ್ನು ಅಮೆರಿಕ ಮತ್ತು ಫ್ರಾನ್ಸ್‌ಗೆ ಹಸ್ತಾಂತರಿಸುವ ನಿರ್ಧಾರದ ವಿರುದ್ಧ ರಕ್ಷಣಾ ತಂಡದ ದೂರನ್ನು ವಜಾಗೊಳಿಸುವುದಾಗಿ ಗ್ರೀಸ್‌ನ ಸುಪ್ರೀಂ ಅಡ್ಮಿನಿಸ್ಟ್ರೇಟಿವ್ ಕೋರ್ಟ್ ಘೋಷಿಸಿದ ಬೆನ್ನಲ್ಲೇ ಇದು ಸಂಭವಿಸಿದೆ.
"ಅಲೆಕ್ಸಾಂಡರ್ ಪ್ರಸ್ತುತ ಪ್ಯಾರಿಸ್ನ ಹೋಟೆಲ್ ಡೈಯು ಆಸ್ಪತ್ರೆಯಲ್ಲಿದ್ದಾರೆ, ಫ್ರೆಂಚ್ ಸಹೋದ್ಯೋಗಿಯೊಬ್ಬರು ನನಗೆ ಹೇಳಿದಂತೆ, ಗ್ರೀಕ್ ಅಧಿಕಾರಿಗಳು ಸತ್ಯವನ್ನು ಮರೆಮಾಚುತ್ತಿದ್ದಾರೆ ಮತ್ತು ಅವರು ಅದರ ಬಗ್ಗೆ ತಿಳಿದಿಲ್ಲ ಎಂದು ಹೇಳುತ್ತಾರೆ. ಅವರನ್ನು ಭೇಟಿಯಾಗಲು ಅನುಮತಿ ನೀಡಿಲ್ಲ. ಆರೋಪಿಯು ದಣಿದಿದ್ದು, ಸಂವಹನ ಮತ್ತು ಮಾಹಿತಿಯ ಕೊರತೆಯಿದೆ! ನಾಳೆ ವಿಚಾರಣೆಯನ್ನು ಮುಂದೂಡಬೇಕೆಂದು ನಾನು ಈಗಾಗಲೇ ಬೇಡಿಕೆಯನ್ನು ಕಳುಹಿಸಿದ್ದೇನೆ ”ಎಂದು ವಕೀಲರು ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.
ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ವಿನ್ನಿಕ್ 4 ಬಿಲಿಯನ್ ಮೌಲ್ಯದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಅಮೆರಿಕ ಆರೋಪಿಸಿದೆ. ಆದರೆ ಯಾವುದೇ ಕ್ರಿಮಿನಲ್ ಅಥವಾ ಆಡಳಿತಾತ್ಮಕ ಅಪರಾಧ ಆರೋಪವನ್ನು ವಿನ್ನಿಕ್ ನಿರಾಕರಿಸಿದ್ದಾರೆ.

ಯುಎನ್‍ಐ ಎಸ್‍ಎ ವಿಎನ್ 0741
More News
ದಕ್ಷಿಣ ಕೊರಿಯಾದಲ್ಲಿ ಕೊರೊನ ವೈರಸ್ ನ 505 ಹೊಸ ಪ್ರಕರಣ ದೃಢ: ಒಟ್ಟು ಪ್ರಕರಣಗಳ ಸಂಖ್ಯೆ 1,766ಕ್ಕೆ ಏರಿಕೆ

ದಕ್ಷಿಣ ಕೊರಿಯಾದಲ್ಲಿ ಕೊರೊನ ವೈರಸ್ ನ 505 ಹೊಸ ಪ್ರಕರಣ ದೃಢ: ಒಟ್ಟು ಪ್ರಕರಣಗಳ ಸಂಖ್ಯೆ 1,766ಕ್ಕೆ ಏರಿಕೆ

27 Feb 2020 | 5:09 PM

ಸಿಯೋಲ್, ಫೆ 27 (ಕ್ಸಿನ್ಹುವಾ) ದಕ್ಷಿಣ ಕೊರಿಯಾದಲ್ಲಿ ಕೊರೊನವೈರಸ್ (ಕೊವಿದ್-19)ನ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 1,766 ಕ್ಕೆ ಏರಿದೆ.

 Sharesee more..