Monday, Sep 16 2019 | Time 06:44 Hrs(IST)
Entertainment Share

ಅಕ್ಷಯ್ ಜೊತೆ ನಟಿಸುತ್ತಿದ್ದಕ್ಕೆ ಖುಷ್ ಆದ ಕತ್ರಿನಾ

ಮುಂಬೈ, ಜುಲೈ 10 (ಯುಎನ್ಐ) ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಬಾರ್ಬಿ ಗರ್ಲ್ ಕತ್ರಿನಾ ಕೈಫ್ ಫುಲ್ ಖುಷ್ ಆಗಿದ್ದಾರಂತೆ.
ಇದೇ ಮೊದಲ ಬಾರಿಗೆನೂ ಕತ್ರಿನಾ ಅಕ್ಷಯ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿಲ್ಲ. ಆದರೆ, ಬರೋಬ್ಬರಿ ಹತ್ತು ವರ್ಷದ ನಂತರ ಮತ್ತೊಮ್ಮೆ ಒಟ್ಟಿಗೆ ನಟಿಸುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶೆಟ್ಟಿ ನಿರ್ದೇಶಿಸುತ್ತಿರುವ 'ಸೂರ್ಯವಂಶಿ' ಚಿತ್ರದಲ್ಲಿ ಅಕ್ಷಯ್-ಕತ್ರಿನಾ ಅಭಿನಯಿಸುತ್ತಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕತ್ರಿನಾ, ಅಕ್ಷಯ್ ಅವರೊಂದಿಗೆ 'ಸೂರ್ಯವಂಶಿ' ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ತುಂಬಾ ಸಂತಸವಾಗಿದ್ದು, ತವರು ಮನೆಗೆ ವಾಪಸ್ಸಾಗಿದ್ದೇನೆ ಎಂದೆನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಮಾರು 10 ವರ್ಷಗಳ ನಂತರವು ಅಕ್ಷಯ್ ಹಾಗೂ ನನ್ನ ನಡುವೆ ಯಾವುದೇ ಬದಲಾವಣೆಗಳಾಗಿಲ್ಲ. ಅವರು ಅದ್ಭುತವಾದ ನಟ. ತಮ್ಮ ವೃತ್ತಿಯನ್ನು ತುಂಬಾ ಇಷ್ಟಪಡುತ್ತಾರೆ ಎಂದಿದ್ದಾರೆ.
ಈಗಾಗಲೇ ಅಕ್ಷಯ್ ಹಾಗೂ ಕತ್ರಿನಾ ಜೋಡಿಯಲ್ಲಿ 'ವೆಲ್ ಕಮ್', 'ಸಿಂಗ್ ಈಜ್ ಕಿಂಗ್', 'ನಮಸ್ತೆ ಲಂಡನ್', 'ತೀಸ್ ಮಾರ್ ಖಾನ್' ಹಾಗೂ 'ದೇ ದನಾ ದನ್' ದಂತಹ ಚಿತ್ರಗಳು ಹೊರಬಂದಿವೆ.
ಯುಎನ್ಐ ಪಿಕೆ ಎಸ್ಎಚ್ 1646
More News

ಯೂಟ್ಯೂಬ್ ಚಾನೆಲ್ ಗೆ ದಿಶಾ ಪಟಾನಿ ಚಾಲನೆ

14 Sep 2019 | 6:42 PM

 Sharesee more..
ಮೇಕಪ್ ಇಲ್ಲದ ಸಮಂತಾ ಫೋಟೋಗೆ ಅಭಿಮಾನಿಗಳು ಫಿದಾ

ಮೇಕಪ್ ಇಲ್ಲದ ಸಮಂತಾ ಫೋಟೋಗೆ ಅಭಿಮಾನಿಗಳು ಫಿದಾ

14 Sep 2019 | 5:11 PM

ಬೆಂಗಳೂರು, ಸೆ 14 (ಯುಎನ್ಐ) ಕೆಲವು ತಿಂಗಳುಗಳ ಹಿಂದಷ್ಟೇ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ತಮ್ಮ ಮೇಕಪ್ ಇಲ್ಲದ ಫೋಟೋ ಒಂದನ್ನು ಶೇರ್ ಮಾಡಿ, ಅಭಿಮಾನಿಗಳ ಮನಗೆದ್ದಿದ್ದರು.

 Sharesee more..