Wednesday, Feb 26 2020 | Time 09:18 Hrs(IST)
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಅತ್ಯಾಚಾರ ಅಪರಾಧಿಗಳ ಗಲ್ಲು ಶಿಕ್ಷೆಯ ನೀತಿ ಬದಲಿಸುವಂತೆ ಸುಪ್ರೀಂಗೆ ಕೇಂದ್ರ ಮನವಿ

ನವದೆಹಲಿ, ಜ 22 (ಯುಎನ್‌ಐ) ನಿರ್ಭಯಾ ಪ್ರಕರಣದ ವಿವಾದದ ಹಿನ್ನೆಲೆಯಲ್ಲಿ, ಮರಣದಂಡನೆಗೆ ಸಂಬಂಧಿಸಿದ 2014 ರ ಜನವರಿಯ ತೀರ್ಪಿನಲ್ಲಿ ಮಾರ್ಪಾಡು ಮಾಡಬೇವಂತೆ ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ಅತ್ಯಾಚಾರ ಪ್ರಕರಣ ಸಂಬಂಧ ಮರುಪರಿಶೀಲನಾ ಮತ್ತು ಕ್ಷಮಾದಾನ ಅರ್ಜಿಗಳ ಸಲ್ಲಿಕೆ ಕುರಿತು ಮಾರ್ಗಸೂಚಿಗಳನ್ನು ರಚಿಸಬೇಕು. ವಂತೆ ಸರ್ಕಾರ ಮನವಿ ಮಾಡಿದೆ.ಮೇಲ್ಮನವಿಗಳನ್ನು ತಿರಸ್ಕರಿಸಿದ ನಂತರ ಮರಣದಂಡನೆ ಶಿಕ್ಷೆಗೊಳಗಾಗುವ ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸಲು ಸಮಯದ ಮಿತಿಯನ್ನು ನಿಗದಿಪಡಿಸಬೇಕು ಎಂದು ಗೃಹ ಸಚಿವಾಲತಯ ತನ್ನ ಅರ್ಜಿಯಲ್ಲಿ ಕೋರಿದೆ.
ಡೆತ್ ವಾರಂಟ್ ಜಾರಿಗೊಳಿಸಿದ ಏಳು ದಿನಗಳಲ್ಲಿ ಕ್ಷಮಾದಾನ ಅರ್ಜಿ ಸಲ್ಲಿಸಬೇಕು. ಮತ್ತು ಅದನ್ನು ನ್ಯಾಯಾಲಯ ತಿರಸ್ಕರಿಸಿದ 14 ದಿನಗಳ ನಂತರ ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಎಂಬ ಮಾರ್ಗಸೂಚಿ ರೂಪಿಸುವಂತೆ ಗೃಹ ಸಚಿವಾಲಯ ಮನವಿ ಮಾಡಿದೆ.
ಅರ್ಜಿಯನ್ನು ಸಲ್ಲಿಸಬೇಕು ಎಂದು ಉನ್ನತ ನ್ಯಾಯಾಲಯವು ನಿರ್ದೇಶನ ನೀಡಬೇಕು ಎಂದು ಹೇಳಿದೆ.
ಮರಣದಂಡನೆ ಶಿಕ್ಷೆ ಕರುಣೆ ಮನವಿಯನ್ನು ವಜಾಗೊಳಿಸಿದ 14 ದಿನಗಳ ನಂತರ ಗಲ್ಲಿಗೇರಿಸಬೇಕು ಎಂದು ಎಂಎಚ್‌ಎ ಸಲ್ಲಿಸಿದೆ.
ಯುಎನ್ಐ ಎಸ್ಎಚ್ 1841