Sunday, Sep 27 2020 | Time 00:38 Hrs(IST)
Parliament Share

ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ 1023 ತ್ವರಿತ ನ್ಯಾಯಾಲಯ ಸ್ಥಾಪನೆ

ನವದೆಹಲಿ, ಡಿ 6 (ಯುಎನ್ಐ) ಅತ್ಯಚಾರ ಪ್ರಕರಣಗಳು ಮತ್ತು ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ ಕಾಯ್ದೆಗಳಡಿಯ ಪ್ರಕರಣಗಳ ಶೀಘ್ರ ವಿಚಾರಣೆ ಹಾಗೂ ಇತ್ಯರ್ಥಕ್ಕಾಗಿ 1023 ತ್ವರಿತ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.

ಶುಕ್ರವಾರ ಪ್ರಶ್ನಾವಳಿ ವೇಳೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಈ ಕುರಿತು ಲಿಖಿತ ಮಾಹಿತಿ ನೀಡಿದ್ದಾರೆ. ಈ ನ್ಯಾಯಾಲಯಗಳಿಗಾಗಿ 767.25 ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದ್ದು, ಇದರಲ್ಲಿ 474 ಕೋಟಿ ರೂ. ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ 218 ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಸ್ತಾಪನೆಯಿದೆ. ಈ ಸಂಬಂಧ ರಾಜ್ಯ ಸರ್ಕಾರದ ನಿರ್ಧಾರವನ್ನು ಪರಿಶೀಲಿಸಿ ನಿರ್ಧಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೇಂದ್ರ ಸರ್ಕಾರದ ಪ್ರಾಯೋತಕತ್ವದ ಯೋಜನೆಯಡಿ ನ್ಯಾಯಾಂಗ, ಕಾನೂನು ಸಚಿವಾಲಯ ಇವುಗಳ ಸ್ಥಾಪನೆಯ ಪ್ರಸ್ತಾವನೆ ಮುಂದಿಟ್ಟಿದೆ ಎಂದು ಅವರು ಮಾಹಿತಿ ನೀಡಿದರು.

ಯುಎನ್ಐ ಎಸ್ಎಚ್ 2006
More News

ಲೋಕಸಭೆಯಲ್ಲಿ ಶೇ 167 ಉತ್ಪಾದಕತೆ: ಓಂ ಬಿರ್ಲಾ

23 Sep 2020 | 10:20 PM

 Sharesee more..
ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್

ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್

23 Sep 2020 | 8:29 PM

ನವದೆಹಲಿ, ಸೆ 23 (ಯುಎನ್ಐ) ರಾಜ್ಯಸಭೆ ಬುಧವಾರ ಎರಡು ಧನವಿನಿಯೋಗ ಮಸೂದೆಗಳನ್ನು ವಾಪಸ್ ಕಳುಹಿಸಿದೆ. ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಧನವಿನಿಯೋಗ (ಸಂಖ್ಯೆ 3) ಮಸೂದೆ-2020 ಮತ್ತು ಧನವಿನಿಯೋಗ (ಸಂಖ್ಯೆ 4) ಮಸೂದೆ-2020ನ್ನು ರಾಜ್ಯಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಧ್ವನಿಮತದಿಂದ ಅಖೈರುಗೊಳಿಸಲಾಯಿತು.

 Sharesee more..
58 ದೇಶಗಳು  517 ಕೋಟಿ    ಇದು ಪ್ರಧಾನಿ ಮೋದಿ  ವಿದೇಶ ಪ್ರವಾಸ ವೆಚ್ಚ!

58 ದೇಶಗಳು 517 ಕೋಟಿ ಇದು ಪ್ರಧಾನಿ ಮೋದಿ ವಿದೇಶ ಪ್ರವಾಸ ವೆಚ್ಚ!

23 Sep 2020 | 4:32 PM

ನವದೆಹಲಿ, ಸೆ 23(ಯುಎನ್ಐ) ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿದೇಶ ಪ್ರವಾಸ ವೆಚ್ಚ ಬೆಚ್ಚಿ ಬೀಳಿಸುತ್ತದೆ. 2015 ರಿಂದ ಈವರೆಗೆ ಒಟ್ಟು 58 ದೇಶಗಳಿಗೆ ಅವರು ಭೇಟಿ ನೀಡಿದ್ದಾರೆ. ಈ ಭೇಟಿಗಳಿಗಾಗಿ ಒಟ್ಟು 517 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ.

 Sharesee more..