Sunday, Aug 9 2020 | Time 14:37 Hrs(IST)
 • ಸುಶಾಂತ್‌ ಪ್ರಕರಣ; ರಿಯಾ ಸಹೋದರನನ್ನು 18 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ
 • ಕನ್ನಡಿಗರು-ತಮಿಳರನ್ನು ಬೆಸೆದ ಸರ್ವಜ್ಞ,ತಿರುವಳ್ಳುವರ್ : ಡಿಸಿಎಂ ಅಶ್ವತ್ಥ್ ನಾರಾಯಣ್
 • ತಿರುಪತಿ ತಿಮ್ಮಪ್ಪನ ವಾರ್ಷಿಕ ಬಜೆಟ್ ೩,೨೦೦ ಕೋಟಿ
 • ಕೋವಿಡ್‌; ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ರಾಹುಲ್‌ ಗಾಂಧಿ
 • ಕೃಷಿ ವಲಯದ 1 ಲಕ್ಷ ಕೋಟಿ ರೂ ಮೊತ್ತದ ಯೋಜನೆಗೆ ಮೋದಿ ಚಾಲನೆ; ಪಿಎಂ-ಕಿಸಾನ್‌ 6ನೇ ಕಂತಿನ ಬಿಡುಗಡೆ
 • ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಹಣ ಬಿಡುಗಡೆ : ಹಾಸನದ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಜೊತೆ ಪ್ರಧಾನಿ ಸಂವಾದ
 • ಆಯೋಧ್ಯೆ ಮಾದರಿಯಲ್ಲಿ ನೇಪಾಳದಲ್ಲೂ ಶ್ರೀರಾಮ ಮಂದಿರ !
 • ಕೇರಳದ 7 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್ ಘೋಷಣೆ
 • ಮುಖ್ಯಕಾರ್ಯದರ್ಶಿಗೆ ಕರೆ ಮಾಡಿ ಅತಿವೃಷ್ಠಿ,ಪ್ರವಾಹದ ಮಾಹಿತಿ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ
 • ಶ್ರೀಲಂಕಾ ಪ್ರಧಾನಿಯಾಗಿ ಮಹೀಂದ್ರ ರಾಜಪಕ್ಷ ಪ್ರಮಾಣವಚನ ಸ್ವೀಕಾರ
 • ಅಮಿತ್‌ ಶಾ ಕೋವಿಡ್‌ ವರದಿ ನೆಗೆಟೀವ್‌; ಮನೋಜ್ ತಿವಾರಿ ಟ್ವೀಟ್
 • ಕಳೆದ ವರ್ಷದ ಅತಿವೃಷ್ಟಿ ಹಾನಿ, ಪರಿಹಾರದ ವಿವರ ಕೇಳಿದ ಸಿದ್ದರಾಮಯ್ಯ
 • ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ 21 5 ಲಕ್ಷಕ್ಕೆ ಏರಿಕೆ
 • ಉತ್ತರ ಪ್ರದೇಶ ಎಸ್‍ಟಿಎಫ್‍ ಪಡೆಯಿಂದ ಮಾಫಿಯಾ ಶಾರ್ಪ್-ಶೂಟರ್ ನ ಗುಂಡಿಕ್ಕಿ ಹತ್ಯೆ
 • ಕ್ವಿಟ್ ಇಂಡಿಯಾ ಚಳವಳಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಮುಖ್ಯಮಂತ್ರಿ ಗೌರವ ನಮನ
Karnataka Share

ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಆಯುಷ್ ಇಲಾಖೆ ವೈದ್ಯರು :ತುರ್ತು ಸಭೆ ಕರೆದ ಆರೋಗ್ಯ ಸಚಿವರು

ಬೆಂಗಳೂರು,ಮೇ 23(ಯುಎನ್ಐ)ಸಮಾನ ಕೆಲಸಕ್ಕಾಗಿ ಸಮಾನ ವೇತನ ನಿಯಮ ಜಾರಿಗೆ ಒತ್ತಾಯಿಸಿ ಮೇ 23 ರಿಂದ ಆಯುಷ್ ಇಲಾಖೆ ವೈದ್ಯರು ಅನಿರ್ದಿಷ್ಟಾವಧಿ ಹೋರಾಟಕ್ಕೆ ಕೈಗೊಂಡಿದ್ದಾರೆ.

ಇಂದಿನಿಂದ ರಾಜ್ಯದ 2000 ಸರ್ಕಾರಿ ವೈದ್ಯರು ಹಾಗೂ 27000 ಖಾಸಗಿ ವೈದ್ಯರು ಹಾಗೂ 570 ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು ರೋಗಿಗಳು ಮತ್ತು ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ.
ಎಂಬಿಬಿಎಸ್ ವೈದ್ಯರು ಮತ್ತು ಆಯುಷ್ ವೈದ್ಯರಿಗೆ ನೀಡಲಾಗುತ್ತಿರುವ ವೇತನ ಮತ್ತು ಭತ್ಯೆಯಲ್ಲಿ ಭಾರೀ ತಾರತಮ್ಯವಿದ್ದು ಸರಿಪಡಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿ,ಹೋರಾಟದ ಎಚ್ಚರಿಕೆ ನೀಡಿದರೂ ಆರೋಗ್ಯ ಇಲಾಖೆ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ.ಹೀಗಾಗಿ ನಮ್ಮ ಪ್ರಮುಖ ಬೇಡಿಕೆಗಳಾದ ಆಯುಷ್ ವೈದ್ಯರನ್ನು ಖಾಯಂಗೊಳಿಸುವುದು,ಎಂಬಿಬಿಎಸ್ ವೈದ್ಯಾಧಿಕಾರಿಗಳಿಗೆ ನೀಡುವ ವೇತನವನ್ನು ಸಮಾನವಾಗಿ ಆಯುಷ್ ವೈದ್ಯರಿಗೆ ನೀಡುವುದು,ಇಲಾಖೆಯಲ್ಲಿ ಖಾಲಿ ಇರುವ 250 ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ಆಗ್ರಹಿಸಿ ಹೋರಾಟಕ್ಕಿಳಿದಿದ್ದಾರೆ.
ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ ಎಚ್ ಎಂ),ರಾಷ್ಟ್ರೀಯ ಬಾಲ ಸ್ವಾಸ್ತ್ ಕಾರ್ಯಕ್ರಮ (ಆರ್ ಬಿಎಸ್ಕೆ)ಎಂಬಿಬಿಎಸ್ ಹುದ್ದೆಗಳಿಗೆ ಪರ್ಯಾಯವಾಗಿ ಆಯುಷ್ ವೈದ್ಯರ ಬಳಕೆ ಬಗ್ಗೆ ಕ್ರಮಗಳನ್ನು ತಕ್ಷಣ ಕೈಬಿಟ್ಟು ಸರ್ಕಾರಿ ಉದ್ಯೋಗ ಭದ್ರತೆ ಕಲ್ಪಿಸುವಂತೆ ವೈದ್ಯರು ಪಟ್ಟು ಹಿಡಿದಿದ್ದಾರೆ.
ಆಯುಷ್ ಫೆಡರೇಶನ್ ಆಫ್ ಇಂಡಿಯಾದ ವೈದ್ಯರ ಬೇಡಿಕೆಗಳು :
1) 10-15 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಎನ್‌ಎಚ್‌ಎಂ ವೈದ್ಯರು ₹ 56,800 ವೇತನಕ್ಕೆ ಬದಲಾಗಿದೆ ₹ 20,300 ಪಡೆಯುತ್ತಿದ್ದಾರೆ
2) 6-8 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಆರ್‌ಬಿಎಸ್‌ಕೆ ವೈದ್ಯರು ₹ 45,000-60,000 ಬದಲಾಗಿ ₹ 27,000 ವೇತನ ಪಡೆಯುತ್ತಿದ್ದಾರೆ
3) ಎಂಬಿಬಿಎಸ್ ಹುದ್ದೆಗೆ ವಿರುದ್ಧವಾಗಿ 6 ​​ವರ್ಷಗಳ ಸೇವೆಯನ್ನು ಪೂರೈಸಿದ 300 ವೈದ್ಯರು ₹ 70,000 ಬದಲಾಗಿ ₹ 26,000 ವೇತನ ಪಡೆಯುತ್ತಿದ್ದಾರೆ
4) ಎಂಬಿಬಿಎಸ್ ಸ್ನಾತಕೋತ್ತರ ವಿದ್ಯಾರ್ಥಿಗಳು ₹ 40,000 ಸ್ಟೈಪಂಡ್ ಪಡೆಯುತ್ತಿದ್ದರೆ,ಆಯುಷ್ ಸ್ನಾತಕೋತ್ತರ ವಿದ್ಯಾರ್ಥಿಗಳು ಕೇವಲ ₹ 25,000 ಸ್ಟೈಫಂಡ್ ನೀಡಲಾಗುತ್ತಿದೆ.
5) ಎಂಬಿಬಿಎಸ್ ತರಬೇತಿ ಪಡೆಯುತ್ತಿರುವವರು ₹ 30,000 ಪಡೆಯುತ್ತಿದ್ದರೆ,ಆಯುಷ್ ತರಬೇತಿ ಪಡೆಯುತ್ತಿರುವವರು ₹ 15,000 ಸ್ಟೈಪಂಡ್ ಪಡೆಯುತ್ತಿದ್ದಾರೆ
6) ಸರ್ಕಾರಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಆಯುಷ್ ವೈದ್ಯರಿಗೆ ಅಲೋಪತಿ ಪದ್ದತಿಯನ್ನು ಅಭ್ಯಾಸ ಮಾಡಲು ಅನುಮತಿ ಇದೆ ಆದರೆ ಖಾಸಗಿ ಆಯುಷ್ ವೈದ್ಯರಿಗೆ ಅವಕಾಶ ನೀಡಲಾಗಿಲ್ಲ.
7) ಒಪ್ಪಂದದ (ಗುತ್ತಿಗೆ)ಆಧಾರದ ಮೇಲೆ ಕೆಲಸ ಮಾಡುವ ಆಯುಷ್ ವೈದ್ಯರನ್ನು ಪೂರ್ವ ಸೂಚನೆ ನೀಡದೆ ಕೆಲಸದಿಂದ ವಜಾಗೊಳಿಸಲಾಗುತ್ತಿದೆ.
8) ಕೋವಿಡ್ -19 ಸಂಬಂಧಿತ ಯೋಜನೆಗೂ ಶೇ 70% ಕ್ಕಿಂತ ಹೆಚ್ಚು ಆಯುಷ್ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ ಆದರೆ ಅವರಿಗೆ ಅಗತ್ಯವಾದ ರಕ್ಷಣಾ ಪರಿಕರಗಳನ್ನು ಒದಗಿಸಲಾ ಗಿಲ್ಲ ಮತ್ತು ಕೆಲವು ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರು ವ ವೈದ್ಯರಿಗೆ ಪಿಪಿಇ ಕಿಟ್‌ಗಳನ್ನು ಒದಗಿಸಿಲ್ಲವೆಂದು ಬೇಡಿಯಲ್ಲಿ ಆರೋಪಿಸಿದ್ದಾರೆ.
ಆಯುಷ್ ವೈದ್ಯರ ಅನಿರ್ದಿಷ್ಟ ಹೋರಾಟದ ಹಿನ್ನಲೆಯಲ್ಲಿ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆಯುಷ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ತುರ್ತು ಸಭೆಯನ್ನು ಸಚಿವ ಶ್ರೀರಾಮುಲು ಕರೆದಿದ್ದಾರೆ.ಸಚಿವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಆಯುಷ್ ವೈದ್ಯರ ಬೇಡಿಕೆಗಳನ್ನು ಸರ್ಕಾರ ಈಡೇರಿಸವ ಭರವಸೆ ಇದೆ.ನಮ್ಮ ಬೇಡಿಕೆ ನ್ಯಾಯಯುತವಾಗಿದ್ದು ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ದೇಶವ್ಯಾಪಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಆಯುಷ್ ಸಂಘಟನೆ ಎಚ್ಚರಿಕೆ ನೀಡಿದೆ.
ಯುಎನ್ಐ ಎಸ್ಎಂಆರ್ ವಿಎನ್ 2355
More News