Monday, Jul 13 2020 | Time 04:50 Hrs(IST)
Special Share

ಅನಿಲ ಸೋರಿಕೆ: ಆರೋಗ್ಯ, ಪರಿಸರ ಪರಿಣಾಮಗಳ ಸಮೀಕ್ಷೆಗಾಗಿ ವಿಶೇಷ ಸಂಸ್ಥೆ ಸ್ಥಾಪನೆಗೆ ಎಲ್ಜಿ ಪಾಲಿಮರ್ಸ್ ನಿರ್ಧಾರ

ವಿಶಾಖಪಟ್ಟಣಂ, ಮೇ 14 (ಯುಎನ್‌ಐ) ಇತ್ತೀಚೆಗೆ ಸಂಭವಿಸಿದ ಅನಿಲ ಸೋರಿಕೆಯ ಪರಿಣಾಮಗಳ ಸಮೀಕ್ಷೆ ನಡೆಸಿ ಪಾರದರ್ಶಕ ಫಲಿತಾಂಶ ನೀಡುವ ಸಲುವಾಗಿ ಎಲ್‌ಜಿ ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಶೀಘ್ರದಲ್ಲೇ ವಿಶೇಷ ಸಂಸ್ಥೆ ಸ್ಥಾಪಿಸುವುದಾಗಿ ಪ್ರಕಟಿಸಿದೆ.

ಕಳೆದ ಗುರುವಾರ ಮುಂಜಾನೆ ಗೋಪಾಲಪಟ್ಟಣಂ ಸಮೀಪದ ಎಲ್ಜಿ ಪಾಲಿಮರ್ ಕಾರ್ಖಾನೆಯಿಂದ ಉಂಟಾದ ಅಪಾಯಕಾರಿ ಅನಿಲ ಸೋರಿಕೆಯು 12 ಜೀವಗಳನ್ನು ಬಲಿ ತೆಗೆದುಕೊಂಡಿತು ಮತ್ತು ಹಾನಿಕಾರಕ ಹೊಗೆಯಿಂದ ನೂರಾರು ಜನರು ಬಾಧೆಗೊಳಗಾಗಿದ್ದರು.

ಎಲ್ಲಾ ಅಪಾಯಕಾರಿ ಅಂಶಗಳನ್ನು ತಡೆಗಟ್ಟಲು ಮತ್ತು ತೊಡೆದುಹಾಕಲು ಸ್ಟೈರೀನ್ ಮೊನೊಮರ್ (ಎಸ್‌ಎಂ) ದಾಸ್ತಾನುಗಳನ್ನು ಅನಿಲ ಸ್ಥಾವರದೊಳಗೆ ಮತ್ತು ದಕ್ಷಿಣ ಕೊರಿಯಾಕ್ಕೆ ಹಡಗುಗಳ ಮೂಲಕ ಬಂದರಿನಲ್ಲಿರುವ ಸ್ಟೈರೀನ್ ಟ್ಯಾಂಕ್‌ಗಳಲ್ಲಿ ಸಾಗಿಸಲು ಪ್ರಾರಂಭಿಸಿದ್ದೇವೆ ಎಂದು ಹೇಳಿದೆ.

ದಕ್ಷಿಣ ಕೊರಿಯಾದ ದೈತ್ಯ ಎಲ್ಜಿ ತನ್ನ ಸಿಯೋಲ್ ಕೇಂದ್ರ ಕಚೇರಿಯ ತಾಂತ್ರಿಕ ತಜ್ಞರ ತಂಡವನ್ನು ಎಲ್ಜಿ ಪಾಲಿಮರ್ಸ್ ಇಂಡಿಯಾ ಪ್ಲಾಂಟ್‌ಗೆ ಕಳುಹಿಸಿದ್ದು, ಉತ್ಪಾದನೆ, ಪರಿಸರ ಮತ್ತು ಸುರಕ್ಷತಾ ತಜ್ಞರ ತಂಡವು ಪ್ರಸ್ತುತ ಘಟನೆಯ ಕಾರಣದ ಬಗ್ಗೆ ತನಿಖೆ ನಡೆಸುತ್ತಿದೆ ಮತ್ತು ಈಗಾಗಲೇ ಜವಾಬ್ದಾರಿಯುತ ಪುನರ್ವಸತಿಗೆ ಬೆಂಬಲ ನೀಡುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಘಟನೆಯ ಕಾರಣವನ್ನು ವಿಶ್ಲೇಷಿಸಲು, ಮರುಕಳಿಕೆಯನ್ನು ತಡೆಗಟ್ಟಲು ಮತ್ತು ಹಾನಿ ಚೇತರಿಕೆಗೆ ತ್ವರಿತಗತಿಯ ಬೆಂಬಲ ನೀಡಲು ತಂಡವು ಸಂಬಂಧಿತ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಎಲ್ಜಿ ಪಾಲಿಮರ್ಸ್ ತಿಳಿಸಿದೆ.
ಯುಎನ್‍ಐ ಎಸ್‍ಎ ವಿಎನ್ 1235
More News
ವಿಕಾಸ್ ದುಬೆ ಪ್ರಕರಣ; ಬ್ರಾಹ್ಮಣ ಸಮುದಾಯಕ್ಕೆ ಕಿರುಕುಳ ಬೇಡ; ಯೋಗಿ ಸರ್ಕಾರಕ್ಕೆ ಮಾಯಾವತಿ ಒತ್ತಾಯ

ವಿಕಾಸ್ ದುಬೆ ಪ್ರಕರಣ; ಬ್ರಾಹ್ಮಣ ಸಮುದಾಯಕ್ಕೆ ಕಿರುಕುಳ ಬೇಡ; ಯೋಗಿ ಸರ್ಕಾರಕ್ಕೆ ಮಾಯಾವತಿ ಒತ್ತಾಯ

12 Jul 2020 | 8:41 PM

ಲಕ್ನೋ, ಜುಲೈ ೧೨ (ಯುಎನ್‌ಐ) ಭೂಗತ ಪಾತಕಿ ವಿಕಾಸ್ ದುಬೆ ಪ್ರಕರಣ ಸಂಬಂಧ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ವಾಸ್ತವಾಂಶಗಳ ಆಧಾರದ ಮೇಲೆ ಕ್ರಮ ಜರುಗಿಸಬೇಕು.

 Sharesee more..
ಜುಲೈ ೧೮ ರಂದು ದ್ವಿತೀಯ ಪಿಯುಸಿ ಫಲಿತಾಂಶ; ಎಸ್  ಸುರೇಶ್ ಕುಮಾರ್

ಜುಲೈ ೧೮ ರಂದು ದ್ವಿತೀಯ ಪಿಯುಸಿ ಫಲಿತಾಂಶ; ಎಸ್ ಸುರೇಶ್ ಕುಮಾರ್

12 Jul 2020 | 6:42 PM

ಕುಕ್ಕೆ ಸುಬ್ರಮಣ್ಯ,ಜುಲೈ ೧೨(ಯುಎನ್ಐ) ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಗಳು ಜುಲೈ ೧೮ ರಂದು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭಾನುವಾರ ತಿಳಿಸಿದ್ದಾರೆ.

 Sharesee more..
ಅಜ್ಞಾತ ಭಕ್ತನಿಂದ ತಿರುಪತಿ ತಿಮ್ಮಪ್ಪನಿಗೆ  ೨೦ ಚಿನ್ನದ  ಬಿಸ್ಕೆಟ್  !

ಅಜ್ಞಾತ ಭಕ್ತನಿಂದ ತಿರುಪತಿ ತಿಮ್ಮಪ್ಪನಿಗೆ ೨೦ ಚಿನ್ನದ ಬಿಸ್ಕೆಟ್ !

12 Jul 2020 | 6:35 PM

ತಿರುಮಲ, ಜುಲೈ ೧೨(ಯುಎನ್‌ಐ) ತಿರುಮಲ- ತಿರುಪತಿ ದೇವಸ್ಥಾನ ಆಸ್ತಿ ಪಾಸ್ತಿಗಳ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿದ ನಂತರ ಶ್ವೇತ ಪತ್ರ ಪ್ರಕಟಿಸಲಾಗುವುದು ಎಂದು ಟಿಟಿಡಿ ಇ ಓ ಅನಿಲ್ ಕುಮಾರ್ ಸಿಂಘಾಲ್ ಭಾನುವಾರ ತಿಳಿಸಿದ್ದಾರೆ.

 Sharesee more..
ದೇಶದಲ್ಲಿ 24 ಗಂಟೆಗಳಲ್ಲಿ 28 ಸಾವಿರಕ್ಕೂ ಹೆಚ್ಚು ಕೊರೊನಾ ಪೀಡಿತರು ಪತ್ತೆ

ದೇಶದಲ್ಲಿ 24 ಗಂಟೆಗಳಲ್ಲಿ 28 ಸಾವಿರಕ್ಕೂ ಹೆಚ್ಚು ಕೊರೊನಾ ಪೀಡಿತರು ಪತ್ತೆ

12 Jul 2020 | 6:19 PM

ನವದೆಹಲಿ, ಜುಲೈ 12 (ಯುಎನ್ಐ) ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚುತ್ತಿವೆ. ಕಳೆದ 24 ಗಂಟೆಗಳಲ್ಲಿ 28 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 8.50 ಲಕ್ಷದ ಸನಿಹ ತಲುಪಿದೆ.

 Sharesee more..
ಕೋವಿಡ್: ಅಮಿತಾಬ್, ಅಭಿಷೇಕ್ ಆರೋಗ್ಯ ಸ್ಥಿರ

ಕೋವಿಡ್: ಅಮಿತಾಬ್, ಅಭಿಷೇಕ್ ಆರೋಗ್ಯ ಸ್ಥಿರ

12 Jul 2020 | 6:11 PM

ಮುಂಬೈ, ಜು 12 (ಯುಎನ್ಐ) ಕೋವಿಡ್ ಸೋಂಕು ದೃಢಪಟ್ಟಿರುವ ಬಾಲಿವುಡ್ ಬಿಗ್‌ ಬಿ ಅಮಿತಾಬ್ ಬಚ್ಚನ್ ಮತ್ತು ಪುತ್ರ, ನಟ ಅಭಿಷೇಕ್ ಬಚ್ಚನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದ ನಾನಾವತಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

 Sharesee more..