Monday, Nov 18 2019 | Time 22:06 Hrs(IST)
 • ಡೆವಿಸ್ ಕಪ್: ಪಾಕ್ ವಿರುದ್ಧದ ಪಂದ್ಯಕ್ಕಿಲ್ಲ ಬೋಪಣ್ಣ
 • ಮೋದಿ ಭೇಟಿಯಾದ ಬಿಲ್‌ಗೇಟ್ಸ್: ಪ್ರಧಾನಿಗೆ ಶ್ಲಾಘನೆ
 • ತಿರುಪತಿ- ತಿರುಮಲವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಟಿಟಿಡಿ ನಿರ್ಧಾರ
 • ಪ್ರಧಾನಿ ಮೋದಿ ಭೇಟಿ ಮಾಡಿದ ಬಿಲ್ ಗೇಟ್ಸ್
 • ಸಂಗ್ರೂರ್ ದಲಿತನ ಹತ್ಯೆ: ಸಂತ್ರಸ್ತ ಕುಟುಂಬಕ್ಕೆ 20 ಲಕ್ಷ ಪರಿಹಾರ, ಪತ್ನಿಗೆ ಸರ್ಕಾರಿ ನೌಕರಿ ಘೋಷಿಸಿದ ಪಂಜಾಬ್ ಸರ್ಕಾರ
 • ಎನ್ ಸಿಪಿ ನಾಯಕ ಶರದ್ ಪವಾರ್ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
 • ಡಿ 9ರ ಬಳಿಕ ರಾಜ್ಯದಲ್ಲಿ ಬಿಜೆಪಿಗೆ‌ ಅಸ್ತಿತ್ವವಿಲ್ಲ: ಕುಮಾರಸ್ವಾಮಿ ಭವಿಷ್ಯ
 • ಡಿ 9ರ ಬಳಿಕ ರಾಜ್ಯದಲ್ಲಿ ಬಿಜೆಪಿಗೆ‌ ಅಸ್ತಿತ್ವವಿಲ್ಲ: ಕುಮಾರಸ್ವಾಮಿ ಭವಿಷ್ಯ
 • ಚಿಕ್ಕಬಳ್ಳಾಪುರ ಉಪಕದನದ ಅಖಾಡಕ್ಕೆ ಡಿ ಶಿ ವಕುಮಾರ್ ಪ್ರವೇಶ
 • ಎಟಿಪಿ ಶ್ರೇಯಾಂಕ: ಐದನೇ ಬಾರಿ ಅಗ್ರ ಸ್ಥಾನಕ್ಕೇರಿದ ನಡಾಲ್
 • “ಮಹಾ” ಟ್ವಿಸ್ಟ್ ಶಿವಸೇನೆ - ಬಿಜೆಪಿ ನಡುವೆ ಹೊಸ ಸೂತ್ರ !!
 • ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಹಾಗೂ ಪತ್ನಿ ಹೇಮಲತಾ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
 • ಲಖನ್ ಜೊತೆ ಸತೀಶ್ ಜಾರಕಿಹೊಳಿ ಸಹ ನಾಮಪತ್ರ ಸಲ್ಲಿಕೆ: ರಂಗೇರುತ್ತಿರುವ ಕಣ
 • ಓಮನ್ ವಿರುದ್ಧ ಭಾರತಕ್ಕೆೆ ಮಾಡು ಇಲ್ಲವೆ ಮಡಿ ಪಂದ್ಯ ನಾಳೆ
 • ಪವಾರ್- ಸೋನಿಯಾ ಮಾತುಕತೆ: ಇನ್ನೂ ಬಹಿರಂಗವಾಗದ ಸರಕಾರ ರಚನೆಗೆ ಗುಟ್ಟು !!!
Election Share

ಅಪಘಾತದ ಸುತ್ತ ’ನನ್ನ ಪ್ರಕಾರ’ ಏನಾಗುತ್ತೆ?

ಬೆಂಗಳೂರು, ಜೂನ್ 27 (ಯುಎನ್‌ಐ) ಅಪಘಾತ ಒಂದು ಕಥೆ ನಾಲ್ಕು, ಎಲ್ಲ ಕಥೆಯೂ ಒಟ್ಟಾಗಿ ಒಂದೇ ಸ್ಟ್ರೀಮ್‌ನತ್ತ ಹರಿಯುವುದು ಹೇಗೆ ಎಂದು ಹೇಳಲು ಹೊರಟಿರುವ ಚಿತ್ರ ’ನನ್ನ ಪ್ರಕಾರ’ ಜಿವಿಕೆ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಮಲ್ಟಿಲೇಯರ್ಡ್ ಸಸ್ಪೆನ್ಸ್ ಥ್ರಿಲ್ಲರ್‌ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ
ಅಪಘಾತ ಆಗಿದ್ದು ಹೇಗೆ ಎಂಬ ತನಿಖೆಯ ಸಂದರ್ಭದಲ್ಲಿ ಬಿಚ್ಚಿಕೊಳ್ಳುವ ನಾಲ್ಕು ಕಥೆಗಳು ಆಯಾ ಪಾತ್ರಗಳ ಪ್ರಕಾರ ಮುಂದೆ ಸಾಗಿ ಒಂದೇ ಮಾರ್ಗಕ್ಕೆ ತಲುಪುವ ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಹೊಣೆಯನ್ನು ವಿನಯ್ ಬಾಲಾಜಿ ನಿರ್ವಹಿಸಿದ್ದು, ಗುರುರಾಜ್ ಎಸ್ ಬಂಡವಾಳ ಹೂಡಿದ್ದಾರೆ
ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ, ಮಯೂರಿ, ’ಹುಲಿ’ ಚಿತ್ರದ ಖ್ಯಾತಿಯ ಕಿಶೋರ್, ನಿರಂಜನ್ ದೇಶ್‌ಪಾಂಡೆ, ಅಶೋಕ್, ಪ್ರಮೋದ್ ಶೆಟ್ಟಿ, ಗಿರಿಜಾ ಲೋಕೇಶ್, ಅರ್ಜುನ್ ಯೋಗಿ ತಾರಾಗಣವಿದೆ
ಕಿಶೋರ್ ಎಂದಿನಂತೆ ಖಾಕಿ ತೊಟ್ಟು ತನಿಖೆ ನಡೆಸಿದರೆ, ಪ್ರಿಯಾಮಣಿ ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕಥೆ ನನ್ನ ಪಾತ್ರದ ಸುತ್ತ ಸುತ್ತುತ್ತದೆ ಎಂದು ಮಯೂರಿ ಹೇಳಿಕೊಂಡಿದ್ದಾರೆ.
ಚಿತ್ರದ ಕಥಾವಸ್ತು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು, ಕುರ್ಚಿಯ ತುದಿಯಲ್ಲಿ ಕುಳಿತು ನೋಡುವಂತೆ ಮಾಡುತ್ತದೆ. ಯು/ಎ ಸರ್ಟಿಫಿಕೆಟ್ ಪಡೆದುಕೊಂಡಿದ್ದು ಸದ್ಯದಲ್ಲೆ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.
ಯುಎನ್‌ಐ ಎಸ್‌ಎ ಕೆಎಸ್‌ವಿ 2248