Thursday, Nov 21 2019 | Time 04:16 Hrs(IST)
International Share

ಅಫ್ಘಾನಿಸ್ತಾನ ದಾಳಿ : 20 ಉಗ್ರರ ಹತ್ಯೆ

ಕುಂದುಜ್, ಅಫ್ಘಾನಿಸ್ತಾನ, ಜುಲೈ 10 (ಕ್ಸಿನ್ಹುವಾ) ಅಫ್ಘಾನಿಸ್ತಾನದ ಉತ್ತರ ಕುಂದುಜ್‌ ಪ್ರಾಂತ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತಾಲಿಬಾನ್ ಸಂಘಟನೆಯೊಂದಿಗೆ ನಂಟು ಹೊಂದಿದ್ದು ಸುಮಾರು 20 ಉಗ್ರರನ್ನು ಅಫ್ಘನ್ ಪಡೆಗಳು ಹತ್ಯೆ ಮಾಡಿವೆ ಎಂದು ಸೇನಾ ವಕ್ತಾರ ಗುಲ್ಹಂ ಹಜ್ರತ್ ಕರಿಮಿ ಬುಧವಾರ ಹೇಳಿದ್ದಾರೆ. ಮಂಗಳವಾರ ರಾತ್ರಿ ಇಮಾಮ್ ಸಾಹಿಬ್ ಜಿಲ್ಲೆಯಲ್ಲಿ ದಾಳಿ ನಡೆಸಲಾಗಿದ್ದು ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿ ಅಫ್ಘನ್ ಪಡೆಗಳು ಬಾಂಬ್ ಗಳನ್ನು ಇರಿಸಿದ್ದು ಈ ದಾಳಿಯಲ್ಲಿ 20 ಉಗ್ರರು ಬಲಿಯಾಗದ್ದು 10 ಜನರಿಗೆ ಗಾಯಗಳಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ದಾಳಿ ವೇಳೆ ಭದ್ರತಾ ಸಿಬ್ಬಂದಿಗೆ ತೊಂದರೆಯಾಗಿದೆಯೇ ಇಲ್ಲವೇ ಎಂಬ ಬಗ್ಗೆ ಅವರು ಮಾಹಿತಿ ನೀಡಲಿಲ್ಲ.
ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ಉಗ್ರರು ಅಲ್ಲಿ ನೆಲೆಸಿರುವವರ ಮನೆಗಳನ್ನು ಆಶ್ರಯಿಸಿದ್ದು ಅಫ್ಘನ್ ಪಡೆ ಮತ್ತು ಉಗ್ರರ ನಡುವಿನ ನಿರಂತರ ದಾಳಿಯಿಂದಾಗಿ ಆ ಪ್ರದೇಶದಲ್ಲಿ ನೆಲೆಸಿರುವ ನೂರಾರು ಕುಟುಂಬಗಳು ಸುರಕ್ಷಿತ ಪ್ರದೇಶಗಳಿಗೆ ವಲಸೆ ಹೋಗಬೇಕಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಉಗ್ರರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಯುಎನ್ಐ ಜಿಎಸ್‌ಆರ್ ಕೆಎಸ್‌ಆರ್ 1438
More News
ಸಿಂಗಾಪುರದ  ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ರಾಜನಾಥ್ ಗೌರವ ನಮನ

ಸಿಂಗಾಪುರದ ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ರಾಜನಾಥ್ ಗೌರವ ನಮನ

20 Nov 2019 | 4:23 PM

ಸಿಂಗಾಪುರ, ನವೆಂಬರ್ 20 (ಯುಎನ್‌ಐ) ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿಂಗಾಪುರದ ಕ್ರಾಂಜಿ ಯುದ್ಧ ಸ್ಮಾರಕಕ್ಕೆ ಬುಧವಾರ ಭೇಟಿ ನೀಡಿ ಎರಡನೇ ಮಹಾಯುದ್ಧದ ಹುತಾತ್ಮರಿಗೆ ಗೌರವ ಸಲ್ಲಿಸಿದರು.

 Sharesee more..

ಪಾಕಿಸ್ತಾನದಲ್ಲಿ ಒಂದು ಕಿಲೋ ಟೊಮಾಟೋ ಗೆ 400 ರೂ

20 Nov 2019 | 2:47 PM

 Sharesee more..

ಶ್ರೀಲಂಕಾ ಪ್ರಧಾನಿ ಬುಧವಾರ ರಾಜೀನಾಮೆ

20 Nov 2019 | 2:23 PM

 Sharesee more..