Monday, Jun 1 2020 | Time 00:38 Hrs(IST)
International Share

ಅಫ್ಘಾನಿಸ್ತಾನ: ಭದ್ರತಾ ಪಡೆ ಕಾರ್ಯಾಚರಣೆಯಲ್ಲಿ ತಾಲಿಬಾನ್ ಕಮಾಂಡರ್ ಬಲಿ

ಕಾಬೂಲ್, ಮೇ 23 (ಯುಎನ್‍ಐ) ಕುಂಡುಜ್ ಪ್ರಾಂತ್ಯದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ತಾಲಿಬಾನ್ ಹಿರಿಯ ಕಮಾಂಡರ್ ಹಬೀಬುಲ್ಲಾ ನಾಸಿರಿಯ ಹತ್ಯೆಯಾಗಿದೆ ಎಂದು ಅಫಘಾನ್ ಭದ್ರತಾ ಪಡೆ ಶನಿವಾರ ತಿಳಿಸಿದೆ.
ಉದ್ದೇಶಿತ ಹತ್ಯೆಗಳು ಸೇರಿದಂತೆ ಭಯೋತ್ಪಾದಕ ದಾಳಿ ನಡೆಸುವಲ್ಲಿ ಭಾಗಿಯಾಗಿದ್ದಾನೆಂದು ನಂಬಲಾದ ಪ್ರಾಂತೀಯ ರಾಜಧಾನಿ ಕುಂಡುಜ್ ನಗರದ ತಾಲಿಬಾನ್ ಕಮಾಂಡರ್ ಹಬೀಬುಲ್ಲಾ ನಾಸಿರಿಯನ್ನು ಅಫಘಾನ್ ಭದ್ರತಾ ಪಡೆಗಳು ಶನಿವಾರ ಹತ್ಯೆ ಮಾಡಿವೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ನಾಸಿರಿಯ ನಿರ್ಮೂಲನೆ ಕುಂಡುಜ್ ಪ್ರಾಂತ್ಯದ ತಾಲಿಬಾನ್‌ಗೆ ದೊಡ್ಡ ಹಿನ್ನಡೆಯಾಗಿದೆ.
ಕಳೆದ ವಾರ ಕುಂಡುಜ್ ನಗರದ ಹೊರಗೆ ಸರ್ಕಾರಿ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಡಜನ್ಗಟ್ಟಲೆ ಹೋರಾಟಗಾರರನ್ನು ಕಳೆದುಕೊಂಡಿರುವ ಇಸ್ಲಾಮಿಸ್ಟ್ ತಾಲಿಬಾನ್ ಸಂಘಟನೆಯು, ನಾಸಿರಿಯ ಹತ್ಯೆಯ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ.
ಯುಎನ್‍ಐ ಎಸ್‍ಎ ವಿಎನ್ 1427
More News
ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60 ಲಕ್ಷಕ್ಕೂ ಹೆಚ್ಚು

ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60 ಲಕ್ಷಕ್ಕೂ ಹೆಚ್ಚು

31 May 2020 | 6:08 PM

ನವದೆಹಲಿ, ಮೇ 31 (ಯುಎನ್ಐ)- ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ (ಕೋವಿಡ್ 19) ಸೋಂಕಿತರ ಸಂಖ್ಯೆ ವಿಶ್ವದಲ್ಲಿ 60 ಲಕ್ಷದಾಟಿದ್ದು, 3.64 ಲಕ್ಷಕ್ಕೂ ಹೆಚ್ಚು ಜನರು ಈ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ್ದಾರೆ.

 Sharesee more..
ಜಿ7ಗೆ ಭಾರತವನ್ನೂ ಸೇರಿಸಬೇಕು; ಟ್ರಂಪ್

ಜಿ7ಗೆ ಭಾರತವನ್ನೂ ಸೇರಿಸಬೇಕು; ಟ್ರಂಪ್

31 May 2020 | 5:31 PM

ವಾಷಿಂಗ್ಟನ್ /ನವದೆಹಲಿ, ಮೇ 31 (ಯುಎನ್ಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ನಡೆಯಬೇಕಿದ್ದ ಜಿ7 ಶೃಂಗ ಸಭೆಯನ್ನು ಮುಂದೂಡಿದ್ದು, ಅದನ್ನು 'ಔಟ್ ಡೇಟೆಟ್' ಎಂದು ಕರೆದಿದ್ದಾರೆ. ಜೊತೆಗೆ, ಜಿ 7 ತಂಡದಲ್ಲಿ ಭಾರತ, ಆಸ್ಟ್ರೇಲಿಯಾ, ರಷ್ಯಾ ಮತ್ತು ದಕ್ಷಿಣ ಕೊರಿಯಾವನ್ನು ಸೇರಿಸಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.

 Sharesee more..