Monday, Sep 21 2020 | Time 10:51 Hrs(IST)
  • ಕೊರೋನಾ ಆರ್ಭಟ, 24 ಗಂಟೆಯಲ್ಲಿ 1,130 ಮಂದಿ ಸಾವು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ಕೊವಿಡ್‍-19: ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1,36,895 ಕ್ಕೆ ಏರಿಕೆ
  • ಬ್ರೆಜಿಲ್‌ನಲ್ಲಿ ಹೆದ್ದಾರಿ ಅಪಘಾತ: 12 ಮಂದಿ ಸಾವು
  • ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ
  • ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ
  • ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
Karnataka Share

ಅಭಿನವ ಶಿವಪುತ್ರ ಮಹಾಸ್ವಾಮೀಜಿ ಲಿಂಗೈಕ್ಯ

ಬೆಳಗಾವಿ, ಆ 7 [ಯುಎನ್ಐ] ಹುಬ್ಬಳ್ಳಿಯ ಶಾಂತಾಶ್ರಮ, ವಿಜಯಪುರದ ಷಣ್ಮುಖಾರೂಢ ಮಠದ ಷನ್ಮುಖಾನಂದ ಅಭಿನವ ಶಿವಪುತ್ರ ಮಹಾಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ.
ಅವರಿಗೆ 64 ವರ್ಷ ವಯಸ್ಸಾಗಿತ್ತು. ನಗರದ ಕೆ‌ಎಲ್ಇ ಆಸ್ಪತ್ರೆಗೆ ಇಂದು ಸಂಜೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೇ ಲಿಂಗೈಕ್ಯರಾದರು. ಕಳೆದ ಎರಡು ದಿನಗಳಿಂದ ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಹೆಚ್ಚಿನ ಚಿಕಿತ್ಸೆಗೆ ಇಂದು ಸಂಜೆ ಕೆ.ಎಲ್.ಇ ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಲಿಂಗೈಕ್ಯರಾದರು ಎಂದು ಶ್ರೀಮಠದ ಉತ್ತರಾಧಿಕಾರಿ ಅಭಿನವ ಸಿದ್ಧಾರೂಢ ಸ್ವಾಮೀಜಿಯವರು ತಿಳಿಸಿದ್ದಾರೆ.
ಶನಿವಾರ ಹುಬ್ಬಳ್ಳಿಯಲ್ಲಿ ಅಂತ್ಯಕ್ರಿಯೆ: ಅಭಿನವ ಶಿವಪುತ್ರ ಮಹಾಸ್ವಾಮಿಗಳ ಸಮಾಧಿಕ್ರಿಯೆ ಶನಿವಾರ(ಆ.೮) ಮಧ್ಯಾಹ್ನ ೩ ಗಂಟೆಗೆ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಬಳಿಯ ಶಾಂತಾಶ್ರಮದ ಆವರಣದಲ್ಲಿ ಸಮಾಧಿಕ್ರಿಯೆ ನೆರೆವೇರಲಿದೆ.
ಶ್ರೀಗಳ ನಿಧನಕ್ಕೆ ಸಾಧು ಸಂಸ್ಥಾನಮಠದ ಶಿವಾನಂದ ಭಾರತಿ ಸ್ವಾಮೀಜಿ, ಬೀದರ್ ನ ಶಿವಕುಮಾರ ಸ್ವಾಮೀಜಿ, ಗದುಗಿನ ಡಂಬಳ ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿ,
ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತಿತರರ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಯುಎನ್ಐ ವಿಎನ್ 2130