Tuesday, Jan 26 2021 | Time 10:08 Hrs(IST)
  • ನಾಡಿನ ಜನತೆಗೆ ಗಣರಾಜ್ಯೋತ್ಸವ ಶುಭಕೋರಿದ ಮುಖ್ಯಮಂತ್ರಿ
  • ರಷ್ಯಾದ ಸ್ಪುಟ್ನಿಕ್ ಲಸಿಕೆ ಪಡೆಯಲು ಭಾರತ ಚಿಂತನೆ : ವೆಂಕಟೇಶ್ ವರ್ಮಾ
  • 72 ನೇ ಗಣರಾಜ್ಯೋತ್ಸವ, ದೇಶವಾಸಿಗಳಿಗೆ ಶುಭ ಕೋರಿದ ಪ್ರಧಾನಿ
Sports Share

ಅಭ್ಯಾಸವನ್ನು ಗೆಲುವಿನೊಂದಿಗೆ ಆರಂಭಿಸಿದ ಲೂಯಿಸ್ ಹ್ಯಾಮಿಲ್ಟನ್

ನವದೆಹಲಿ, ಜುಲೈ 3 (ಯುಎನ್ಐ)- ಆರು ಬಾರಿಯ ವಿಶ್ವ ಚಾಂಪಿಯನ್ ಬ್ರಿಟನ್‌ನ ಲೂಯಿಸ್ ಹ್ಯಾಮಿಲ್ಟನ್ ಋತುವಿನ ಮೊದಲ ಆಸ್ಟ್ರಿಯನ್ ಗ್ರ್ಯಾಂಡ್ ಪ್ರಿ ಎಫ್-1 ಸ್ಪರ್ಧೆಯಲ್ಲಿ ಉತ್ತಮ ಆರಂಭವನ್ನು ಮಾಡಿದರು.

ಕೊರೊನಾ ಕಾರಣದಿಂದಾಗಿ ಋತುವನ್ನು ಸುಮಾರು ನಾಲ್ಕು ತಿಂಗಳ ನಂತರ ಆರಂಭಿಸಲಾಯಿತು. ಹ್ಯಾಮಿಲ್ಟನ್ ಮತ್ತು ಅವರ ತಂಡದ ಆಟಗಾರ ವಾಲ್ಟೆರಿ ಬಾಟಾಸ್ ಎರಡೂ ಅಭ್ಯಾಸ ಪಂದ್ಯದಲ್ಲಿ ಎರಡನೆಯ ಸ್ಥಾನ ಗಳಿಸಿದರು.

ಹ್ಯಾಮಿಲ್ಟನ್ ಕಪ್ಪು ಉಡುಗೆ ಮತ್ತು ಕಪ್ಪು ಮರ್ಸಿಡಿಸ್ ಕಾರ್ ಓಡಿಸಿದರು. ಅವರ ಹೆಲ್ಮೆಟ್‌ನಲ್ಲಿ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಎಂದು ಕೂಡ ಬರೆಯಲಾಗಿತ್ತು. ಅವರು 1 ಗಂಟೆ 04 ನಿಮಿಷ 304 ಸೆಕೆಂಡುಗಳಲ್ಲಿ ನಿಗದಿತ ವೇಗವನ್ನು ಕ್ರಮಿಸಿ ಮಿಂಚಿದರು. ಇಷ್ಟೇ ಲ್ಯಾಪ್ ಗಳನ್ನು ಮರ್ಸಿಡಿಸ್ ತಂಡದ ಬಾಟಾಸ್ ಎರಡನೇ ಸ್ಥಾನದಲ್ಲಿದ್ದಾರೆ.

ಯುಎನ್ಐ ವಿಎನ್ಎಲ್ 2201