Sunday, Nov 1 2020 | Time 00:01 Hrs(IST)
Entertainment Share

ಅಮೆಜಾನ್ ಅಲೆಕ್ಸಾಗೆ ಅಮಿತಾಬ್ ಬಚ್ಚನ್ ಧ್ವನಿ

ಅಮೆಜಾನ್ ಅಲೆಕ್ಸಾಗೆ ಅಮಿತಾಬ್ ಬಚ್ಚನ್ ಧ್ವನಿ
ಅಮೆಜಾನ್ ಅಲೆಕ್ಸಾಗೆ ಅಮಿತಾಬ್ ಬಚ್ಚನ್ ಧ್ವನಿ

ಮುಂಬೈ, ಸೆ.15 (ಯುಎನ್ಐ)- ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅಲೆಕ್ಸಾ ಧ್ವನಿಯಾಗಿ ಸಾರ್ವಜನಿಕರೊಂದಿಗೆ ಸೇರಿಕೊಂಡು ಜನರಿಗೆ ಸಲಹೆ ನೀಡಲಿದ್ದಾರೆ.



ಅಮೆಜಾನ್ ತನ್ನ ಹೊಸ ಯೋಜನೆಗಾಗಿ ಅಮಿತಾಬ್ ಬಚ್ಚನ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಮೊದಲ ಬಾರಿಗೆ, ಭಾರತದ ಖ್ಯಾತನಾಮರನ್ನು ಅಮೆಜಾನ್‌ನ ಧ್ವನಿ ಸಹಾಯಕ ಸೇವೆಗೆ ಬಳಸಿಕೊಳ್ಳುತ್ತಿದೆ. ಇದಕ್ಕೆ 'ಬಚ್ಚನ್ ಅಲೆಕ್ಸಾ' ಎಂದು ಹೆಸರಿಡಲಾಗಿದೆ. ಈ ಮೂಲಕ ಅಮಿತಾಬ್ ಜನರಿಗೆ ಜೋಕ್, ಹವಾಮಾನ ಪರಿಸ್ಥಿತಿ, ಸಲಹೆ, ಶಯಾರಿ ಮತ್ತು ಕವನಗಳನ್ನು ಹೇಳುವುದನ್ನು ಕೇಳಬಹುದು. ಈ ಸೇವೆಯನ್ನು 2021 ರಿಂದ ಪ್ರಾರಂಭಿಸಲಾಗುವುದು, ಇದಕ್ಕಾಗಿ ಬಳಕೆದಾರರು ಮೊತ್ತ ಪಾವತಿಸಬೇಕಾಗುತ್ತದೆ. ನೀವು "ಅಲೆಕ್ಸಾದಲ್ಲಿ “ಹೆಲೋ ಟು ಮಿಸ್ಟರ್ ಬಚ್ಚನ್‌" ಎಂದು ಹೇಳಬೇಕು.



ಅಮೆಜಾನ್ ಅವರೊಂದಿಗಿನ ಪಾಲುದಾರಿಕೆಯ ಬಗ್ಗೆ ಅಮಿತಾಬ್ ಬಚ್ಚನ್ ಮಾತನಾಡಿ, “ತಂತ್ರಜ್ಞಾನವು ಯಾವಾಗಲೂ ಹೊಸ ವಿಷಯಗಳೊಂದಿಗೆ ಸಂಪರ್ಕ ಸಾಧಿಸಲು ನನಗೆ ಅವಕಾಶವನ್ನು ನೀಡಿದೆ. ಅದು ಚಲನಚಿತ್ರ, ಟಿವಿ ಕಾರ್ಯಕ್ರಮಗಳು, ಪಾಡ್‌ಕಾಸ್ಟ್‌ಗಳು ಅಥವಾ ಇನ್ನಾವುದೇ ಆಗಿರಲಿ. ಈ ವೈಶಿಷ್ಟ್ಯಕ್ಕೆ ನನ್ನ ಧ್ವನಿಯನ್ನು ನೀಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಈ ಧ್ವನಿ ತಂತ್ರಜ್ಞಾನದಿಂದ ನಾನು ಪ್ರೇಕ್ಷಕರೊಂದಿಗೆ ಇನ್ನಷ್ಟು ಹತ್ತಿರವಾಗಲು ಸಾಧ್ಯವಾಗುತ್ತದೆ" ಎಂದಿದ್ದಾರೆ.



ಯುಎನ್ಐ ವಿಎನ್ಎಲ್ 1515

More News

ನಟ, ನಿರ್ಮಾಪಕ ದಿನೇಶ್ ಗಾಂಧಿ ನಿಧನ

31 Oct 2020 | 1:53 PM

 Sharesee more..

ಕಮಲ ಹಾಸನ್ ಜನ್ಮದಿನದಂದು 232ನೇ ಫಸ್ಟ್ ಲುಕ್

31 Oct 2020 | 12:15 PM

 Sharesee more..

ಡಿ ಬಾಸ್ ರೀತಿ ಹೆಸರು ಮಾಡ್ಬೇಕು : ಅಮೂಲ್ಯ

31 Oct 2020 | 8:32 AM

 Sharesee more..

ಕಾಜಲ್ - ಕಿಚ್ಲು ಕಲ್ಯಾಣ

30 Oct 2020 | 3:03 PM

 Sharesee more..