Sunday, Jun 20 2021 | Time 12:47 Hrs(IST)
  • ಕರೋನ: ಮೃತ ಕುಟುಂಬಗಳಿಗೆ 4 ಲಕ್ಷ ರೂ ಪರಿಹಾರ ಅಸಾಧ್ಯ : ಕೇಂದ್ರ
  • ಬ್ಯಾಂಕ್‍ ರಾಷ್ಟ್ರೀಕರಣಕ್ಕೆ 52 ವರ್ಷ: ಜುಲೈ 1ರಿಂದ ಎಐಬಿಇಎ ನಿಂದ ರಾಷ್ಟ್ರೀಯ ವೆಬಿನಾರ್ ಗಳ ಆಯೋಜನೆ
  • ಉತ್ತರ ಪ್ರದೇಶದಲ್ಲಿ ಜುಲೈ 9 ರಿಂದ ಆರ್‌ಎಸ್‌ಎಸ್ ನ ಮಹತ್ವದ ಸಭೆ
  • ದೇಶದಲ್ಲಿ ಕೋವಿಡ್ ನ ಹೊಸ 58,419 ಪ್ರಕರಣಗಳು, 1576 ಮಂದಿ ಸಾವು ವರದಿ
  • ಭಾರತ, ದಕ್ಷಿಣ ಆಫ್ರಿಕಾ , ನೈಜೀರಿಯಾಕ್ಕೆ ವಿಮಾನ ಹಾರಾಟ ಪುನರಾರಂಭ
  • ಬ್ರೆಜಿಲ್ ನಲ್ಲಿ 5 ಲಕ್ಷ ದಾಟಿದ ಕರೋನ ಸಾವಿನ ಸಂಖ್ಯೆ
  • ಕ್ಯೂಬಾದಲ್ಲಿ 1,472 ಹೊಸ ಸೋಂಕು ಪ್ರಕರಣ ವರದಿ
Entertainment Share

ಅಮೆಜಾನ್ ‍ಪ್ರೈಮ್ ನಲ್ಲಿ "ವೀಕೆಂಡ್"

ಬೆಂಗಳೂರು, ಮೇ 23 (ಯುಎನ್‍ಐ) “ವೀಕೆಂಡ್” ಎಂದ ತಕ್ಷಣ ನಮಗೆ ಬಹುತೇಕ ನೆನಪಾಗುವುದು ನಮ್ಮ ಐಟಿ ಬಿಟಿ ಟೆಕ್ಕಿಗಳು, ಬೆಂಗಳೂರುನಂತಹ ಮಹಾನಗರಗಳಲ್ಲಿ ನಡೆಯುವ ಮೋಜು ಮಸ್ತಿ ಅವರ ಜೀವನ ಶೈಲಿಗಳು.ಅವರ ಸುತ್ತಾಟ ಖರ್ಚು ವೆಚ್ಚ.
ಆದರೆ ಪ್ರಸ್ತುತ ಜನತಾ ಕರ್ಫ಼್ಯೂ...ಚಪ್ಪಾಳೆ ,ದೀಪ ಬೆಳಗಿಸುವುದು ಮತ್ತು ಮನೆಯಲ್ಲಿ ಕುಳಿತು ಸಮಯ ಕಳೆಯುವಂತಾಗಿದೆ. ಹೀಗಾಗಿ ಬೇಸರ ಕಳೆಯಲು ಉತ್ತಮ ಕನ್ನಡ ಸಿನಿಮಾಗಳು ಅಮೇಜ಼ಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ.
ಈ ಸಾಲಿನಲ್ಲಿ “ವೀಕೆಂಡ್” ಸಿನಿಮಾ ಒಂದು ವಿಶೇಷವಾದ ಸೇರ್ಪಡೆಯಾಗಿದೆ. "
"ವೀಕೆಂಡ್" ಸಿನಿಮಾ ಇಂದಿನ ಯುವಪೀಳಿಗೆಯು ಭವಿಷ್ಯದ ಬಗ್ಗೆ ಚಿಂತೆಯಿಲ್ಲದೆ ವರ್ತಮಾನದಲ್ಲೇ ಎಲ್ಲಾ ದುಂದುವೆಚ್ಚ ಮಾಡಿ ಎಲ್ಲವನ್ನೂ ಕಳೆದುಕೊಂಡು ಮುಂದೇನು ದಾರಿತೋಚದೆ ಕೆಟ್ಟ ದಾರಿಯನ್ನು ಹಿಡಿಯುವರಿಗೆ ಒಳ್ಳೆಯ ಮಾರ್ಗದರ್ಶನ, ಸ್ವಾವಲಂಬನೆಯಿಂದ ಬದುಕು ನಡೆಸಲು ಒಳ್ಳೆಯ ಪ್ರೇರಣೆ ನೀಡುತ್ತದೆ.
ವೀಕೆಂಡ್ ಸಿನಿಮಾ ಮಯೂರ್ ಮೋಷನ್ ಪಿಕ್ಚರ್ಸ್ ನ ಚೊಚ್ಚಲ ಕೊಡುಗೆ. ಇಂದಿನ ಆತ್ಮನಿರ್ಭರ ಭಾರತ, ಸ್ವಾವಲಂಬನೆಯ ಭಾರತಕ್ಕೆ ಒಳ್ಳೆಯ ಉದಾಹರಣೆ.
ಮಿಲಿಂದ್ ಅವರು ಮೊದಲ ಬಾರಿಗೆ ನಾಯಕ ನಟನಾಗಿ ಸಹಜವಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಸಂಜನಾ ಬುರ್ಲಿ ಅವರು ಮೊದಲ ಬಾರಿಗೆ ನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಕನ್ನಡದ ಹೆಮ್ಮೆಯ ಮೇರು ಕಲಾವಿದ ಅನಂತ್ ನಾಗ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಕಷ್ಟು ಕಲಾವಿದರು ಮೊದಲ ‌ಬಾರಿಗೆ ಸಿನಿಮಾ ರಂಗಕ್ಕೆ ಈ ವೀಕೆಂಡ್ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ್ದಾರೆ.

ಸದ್ಯಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ,ಭಾರತ ,ಅಮೆರಿಕ ಹಾಗೂ ಇಂಗ್ಲೆಂಡ್ ನಲ್ಲಿ ನೋಡಲು ಲಭ್ಯವಿದೆ.

ಮಯೂರ್ ಮೋಷನ್ ಪಿಕ್ಚರ್ಸ್ ಮುಂದಿನ ದಿನಗಳಲ್ಲಿ ಉತ್ತಮ ಕನ್ನಡ ಚಲನ ಚಿತ್ರಗಳನ್ನು ನಿರ್ಮಿಸಿ ಉತ್ತಮ ಕಲಾವಿದರು , ತಂತ್ರಜ್ಞನರನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದಾರಂತೆ.

ಯುಎನ್‍ಐ ಎಸ್‍ಎ ವಿಎನ್ 1939