Thursday, Nov 21 2019 | Time 04:26 Hrs(IST)
National Share

ಅಯೋಧ್ಯೆ ವಿವಾದ: 18ರೊಳಗೆ ಮಧ್ಯಸ್ಥಿಕೆ ಪ್ರಗತಿ ವರದಿ ಸಲ್ಲಿಕೆಗೆ ಸುಪ್ರೀಂ ಸೂಚನೆ

ಅಯೋಧ್ಯೆ ವಿವಾದ: 18ರೊಳಗೆ ಮಧ್ಯಸ್ಥಿಕೆ ಪ್ರಗತಿ ವರದಿ ಸಲ್ಲಿಕೆಗೆ ಸುಪ್ರೀಂ ಸೂಚನೆ
ಅಯೋಧ್ಯೆ ವಿವಾದ: 18ರೊಳಗೆ ಮಧ್ಯಸ್ಥಿಕೆ ಪ್ರಗತಿ ವರದಿ ಸಲ್ಲಿಕೆಗೆ ಸುಪ್ರೀಂ ಸೂಚನೆ

ನವದೆಹಲಿ, ಜುಲೈ 11 (ಯುಎನ್‌ಐ) ಅಯೋಧ್ಯೆ ಸಂಧಾನ ಯತ್ನದ ಪ್ರಗತಿ ವರದಿಯನ್ನು ಇದೇ 18 ರೊಳಗೆ ಸಲ್ಲಿಸುವಂತೆ ನಿವೃತ್ತ ನ್ಯಾಯಮೂರ್ತಿ (ನಿವೃತ್ತ) ಎಫ್‌ಎಂಐ ಖಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚನೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ವಿವಾದವನ್ನು ಬಗೆಹರಿಸಲು ಸಮಿತಿ ಅಸಮರ್ಥತೆಯನ್ನು ವ್ಯಕ್ತಪಡಿಸಿದರೆ ಜುಲೈ 25ರಿಂದ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ.

ಹಿಂದೂ ಸಂಘಟನೆಯ ಪಕ್ಷಗಳು ಮಧ್ಯಸ್ಥಿಕೆಯಲ್ಲಿ ಈವರೆಗೆ ಯಾವುದೇ ಪ್ರಗತಿಯಿಲ್ಲ, ಹೀಗಾಗಿ ಇದನ್ನೂ ನಿಲ್ಲಿಸಬೇಕು ಎಂದು ಮನವಿ ಮಾಡಿವೆ.

ಅಲ್ಪಸಂಖ್ಯಾತ ಸಮುದಾಯದ ಕಡೆಯವರು ಸಲ್ಲಿಸಿರುವ ಮನವಿಯಲ್ಲಿ ಸಂಧಾನ ಯತ್ನದಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದೆ.

ಯುಎನ್‌ಐ ಕೆಎಸ್ಆರ್ ಎಎಚ್ 1231

More News

ಈರುಳ್ಳಿ ರಫ್ತಿಗೆ ಸಂಪುಟ ಅಸ್ತು

20 Nov 2019 | 11:33 PM

 Sharesee more..
ಜಾರ್ಖಂಡ್‌ನಲ್ಲಿ 10,000 ಆದಿವಾಸಿಗಳ ವಿರುದ್ಧ ದೇಶದ್ರೋಹದ ಪ್ರಕರಣ: ಮಾಧ್ಯಮಗಳ ಮೌನಕ್ಕೆ ರಾಹುಲ್ ಕಿಡಿ

ಜಾರ್ಖಂಡ್‌ನಲ್ಲಿ 10,000 ಆದಿವಾಸಿಗಳ ವಿರುದ್ಧ ದೇಶದ್ರೋಹದ ಪ್ರಕರಣ: ಮಾಧ್ಯಮಗಳ ಮೌನಕ್ಕೆ ರಾಹುಲ್ ಕಿಡಿ

20 Nov 2019 | 9:21 PM

ನವದೆಹಲಿ, ನ.20 (ಯುಎನ್ಐ) ಜಾರ್ಖಂಡ್‌ನಲ್ಲಿ 10,000 ಆದಿವಾಸಿಗಳ ವಿರುದ್ಧ 'ಕಠಿಣ' ದೇಶದ್ರೋಹದ ಕಾನೂನನಡಿ ಪ್ರಕರಣ ದಾಖಲಿಸಿರುವುದು ವರದಿಯಾದ ನಂತರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಈ ವಿಷಯದಲ್ಲಿ ಮಾಧ್ಯಮಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದು, ಮಾಧ್ಯಮದಲ್ಲಿ ಈ ವಿಷಯ ಬಿರುಗಾಳಿ ಸೃಷ್ಟಿಯಾಗಬೇಕಿತ್ತು, ಆದರೆ ಅದು ಆಗಿಲ್ಲ ಎಂದು ಟೀಕಿಸಿದ್ದಾರೆ.

 Sharesee more..
10 ವರ್ಷ ಮೀರಿದ  ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮ : ರವಿಶಂಕರ್ ಪ್ರಸಾದ್

10 ವರ್ಷ ಮೀರಿದ ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮ : ರವಿಶಂಕರ್ ಪ್ರಸಾದ್

20 Nov 2019 | 7:52 PM

ನವದೆಹಲಿ, ನವೆಂಬರ್ 20 (ಯುಎನ್‌ಐ) ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯದಿಂದ ಬಾಕಿ ಇರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ಶೀಘ್ರ ವಿಲೇವಾರಿಗೆ ಸರಕಾರ ತ್ವರಿತ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ .

 Sharesee more..