Wednesday, Sep 23 2020 | Time 02:49 Hrs(IST)
National Share

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಣೆ

ಗುವಾಹಟಿ, ಆ 3 (ಯುಎನ್‌ಐ) ಅಸ್ಸಾಂನ ಅನೇಕ ಭಾಗಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಸುಧಾರಿಸುತ್ತಿದ್ದು, ಇದರಿಂದಾಗಿ ಪ್ರವಾಹ ಪೀಡಿತ ಜಿಲ್ಲೆಗಳು ಮತ್ತು ಬಾಧಿತರ ಸಂಖ್ಯೆಯೂ ಕಡಿಮೆಯಾಗಿದೆ.
ಆದರೆ, ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ನಿನ್ನೆ ಸಂಜೆಯಿಂದ ಪ್ರವಾಹದಿಂದ ಒಂದು ಸಾವು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 110ಕ್ಕೆ ಏರಿದೆ. ಪ್ರವಾಹವಲ್ಲದೆ, ಭೂಕುಸಿತಗಳಿಂದ ರಾಜ್ಯದಲ್ಲಿ ಇದುವರೆಗೆ 26 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಸಂಚಿಕೆ ಇಂದು ಸಂಜೆ ತಿಳಿಸಿದೆ.
ರಾಜ್ಯದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳ ಸಂಖ್ಯೆ 17ಕ್ಕೆ ಇಳಿದಿದ್ದು, ಪ್ರವಾಹದಿಂದ ಬಾಧಿತರ ಸಂಖ್ಯೆ 3.88 ಲಕ್ಷಕ್ಕೆ ಇಳಿದಿದೆ.
ಮೂರು ಸ್ಥಳಗಳಲ್ಲಿ ಬ್ರಹ್ಮಪುತ್ರ ಸೇರಿದಂತೆ ರಾಜ್ಯದ ನಾಲ್ಕು ಪ್ರಮುಖ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ.
ಸದ್ಯ, 38 ಶಿಬಿರಗಳಲ್ಲಿ ಇನ್ನೂ 7,000 ಜನರು ಆಶ್ರಯಪಡೆದಿದ್ದಾರೆ.
ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಕೆಲವು ಭಾಗಗಳು ಇನ್ನೂ ನೀರಿನಿಂದ ಆವೃತವಾಗಿವೆ. ಪ್ರವಾಹದಿಂದ ಈವರೆಗೆ147 ಪ್ರಾಣಿಗಳು ಸಾವನ್ನಪ್ಪಿದ್ದರೆ, 170 ಪ್ರಾಣಿಗಳನ್ನು ರಕ್ಷಿಸಲಾಗಿದೆ.
ಯುಎನ್‍ಐ ಎಸ್‍ಎಲ್ಎಸ್ 2019
More News
ಸಂಸತ್ತಿನಲ್ಲಿ ವಿಪಕ್ಷ ಸದಸ್ಯರ ದಾಳಿಗೆ ಖಂಡನೆ: ಒಂದು ದಿನದ ನಿರಶನ ಘೋಷಿಸಿದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್

ಸಂಸತ್ತಿನಲ್ಲಿ ವಿಪಕ್ಷ ಸದಸ್ಯರ ದಾಳಿಗೆ ಖಂಡನೆ: ಒಂದು ದಿನದ ನಿರಶನ ಘೋಷಿಸಿದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್

22 Sep 2020 | 3:37 PM

ನವದೆಹಲಿ, ಸೆ 22 (ಯುಎನ್‍ಐ) ಸಂಸತ್ತಿನಲ್ಲಿ ವಿಪಕ್ಷ ಸದಸ್ಯರು ನಡೆಸಿದ ದಾಳಿಗೆ ಬೇಸರ ವ್ಯಕ್ತಪಡಿಸಲು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಒಂದು ದಿನದ ನಿರಶನ ಘೋಷಿಸಿದ್ದಾರೆ.

 Sharesee more..