Sunday, Mar 29 2020 | Time 00:30 Hrs(IST)
Special Share

ಅಸ್ಸಾಂನಲ್ಲಿ ಸಿಎಎ ವಿರೋಧಿಸಿ ಕಾಂಗ್ರೆಸ್ ಪಾದಯಾತ್ರೆ ಮುಂದುವರಿಕೆ

ಗುವಾಹಟಿ, ಫೆ 13 (ಯುಎನ್ಐ) ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಸಿಎಎ ವಿರೋಧಿಸಿ ಕಾಂಗ್ರೆಸ್ ಗುರುವಾರ ರಾಜ್ಯದ ಉತ್ತರ ಭಾಗ ಬೆಹಾಲಿಯಿಂದ ಪಾದಯಾತ್ರೆ ಪುನರಾರಂಭಿಸಿದೆ.

ರಾಜ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಿಪುನ್ ಬೋರಾ ಅಸ್ಸಾಂ ಉತ್ತರ ಭಾಗ ಬೆಹಾಲಿಯಿಂದ ಪುನರಾರಂಭವಾದ ಪಾದಯಾತ್ರೆಯ ನೇತೃತ್ವ ವಹಿಸಿದ್ದಾರೆ. ಪಾದಯಾತ್ರೆಯಲ್ಲಿ ದೇಶಭಕ್ತಿ ಗೀತೆಗಳು ಮೊಳಗಿತು. ಕಾಂಗ್ರೆಸ್ ನಾಯಕರು ನೆರೆದವರನ್ನುದ್ದೇಶಿಸಿ ಭಾಷಣ ಮಾಡಿದರು.

ಸಾಂಸ್ಕೃತಿ ತಂಡ ಕೂಡ ಪಾದಯಾತ್ರೆಯ ಜೊತೆಯಾಗಿದ್ದು ನಾಯಕರು ದಿನದ ಎರಡನೇ ಭಾಷಣ ಮಾಡಿದೆಡೆ ಸಾಂಸ್ಕೃತಿ ಕಾರ್ಯಕ್ರಮಗಳೂ ಏರ್ಪಾಡಾಗಿದ್ದವು. ಮಾಜಿ ಸಚಿವರು ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಪಾದಯಾತ್ರೆಯ ಅಂತಿಮ ಹಂತದಲ್ಲಿ ಭಾಗಿಯಾಗಿದ್ದರು.

ರಾಜ್ಯದ ಈಶಾನ್ಯ ಭಾಗ ಸಾದಿಯಾದಿಂದ ಕಳೆದ ಡಿ 22 ರಂದು ಪಾದಯಾತ್ರೆ ಆರಂಭವಾಗಿದ್ದು ಪಶ್ಚಿಮ ಭಾಗ ನಲ್ಬರಿಯಲ್ಲಿ ಸಂಪನ್ನಗೊಳ್ಳಲಿದೆ.

ಯುಎನ್ಐ ಜಿಎಸ್ಆರ್ 2231
More News

ಮೋದಿ ನಾಡಿನಲ್ಲೂ ಕರೋನ ಸೋಂಕಿಗೆ ನಾಲ್ವರ ಬಲಿ

28 Mar 2020 | 9:49 PM

 Sharesee more..
ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ

ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ

28 Mar 2020 | 9:36 PM

ತಿರುಪತಿ, ಮಾ 28 (ಯುಎನ್ಐ) ಕೊರೋನಾ ವೈರಸ್ ಸೋಂಕನ್ನು ತಡೆಯಲು ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿರುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ), ವಸತಿರಹಿತರ ನೆರವಿಗೆ 15 ಸಾವಿರ ಪುಳಿಯೋಗರೆ ಪೊಟ್ಟಣಗಳನ್ನು ವಿತರಿಸಿದೆ.

 Sharesee more..
ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ  ಡಿಜಿಪಿ ಪ್ರವೀಣ್ ಸೂದ್  ಮನವಿ

ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಮನವಿ

28 Mar 2020 | 9:22 PM

ಬೆಂಗಳೂರು, ಮಾ ೨೮(ಯುಎನ್‌ಐ) ರಾಷ್ಟ್ರೀಯ ಲಾಕ್ ಡೌನ್ ಜಾರಿಗೊಳಿಸಿರುವ ಈ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ ಆಹಾರ ಒದಗಿಸಲು ಬಯಸುವ ಪರೋಪಕಾರಿಗಳು ಆಹಾರವನ್ನು ಸಮೀಪದ ಪೊಲೀಸ್ ಠಾಣೆಗಳಿಗೆ ತಲುಪಿಸಿದರೆ, ಅಗತ್ಯವಿರುವ ಜನರಿಗೆ ತಲುಪಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಶನಿವಾರ ಮನವಿ ಮಾಡಿಕೊಂಡಿದ್ದಾರೆ.

 Sharesee more..
ಕಲ್ಲಿದ್ದಲು ಸುಗಮ ಸರಬರಾಜಿಗೆ  ಸಕಲ ಕ್ರಮ; ಸಚಿವ ಪ್ರಹ್ಲಾದ್ ಜೋಷಿ

ಕಲ್ಲಿದ್ದಲು ಸುಗಮ ಸರಬರಾಜಿಗೆ ಸಕಲ ಕ್ರಮ; ಸಚಿವ ಪ್ರಹ್ಲಾದ್ ಜೋಷಿ

28 Mar 2020 | 7:27 PM

ನವದೆಹಲಿ, ಮಾ 28 (ಯುಎನ್‌ಐ) ದೇಶದಲ್ಲಿ ಕಲ್ಲಿದ್ದಲು ಸರಬರಾಜನ್ನು ಅತ್ಯಗತ್ಯ ಸೇವೆ ಎಂದು ಘೋಷಿಸಲಾಗಿದ್ದು, ಲಾಕ್‌ ಡೌನ್ ಅವಧಿಯಲ್ಲಿ ನಿರ್ಣಾಯಕ ಕಲ್ಲಿದ್ದಲು ಪೂರೈಕೆಯನ್ನು ಖಾತರಿ ಪಡಿಸಲು ಅಹರ್ನಿಶಿ ಶ್ರಮಿಸುವಂತೆ ಸಚಿವಾಲಯದ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಶಿ ಅವರು ಶನಿವಾರ ನಿರ್ದೇಶನ ನೀಡಿದ್ದಾರೆ.

 Sharesee more..