Friday, Feb 28 2020 | Time 08:34 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಅಸ್ಸಾಂನಲ್ಲಿ 200 ಶಸ್ತ್ರಾಸ್ರ, ಮದ್ದುಗುಂಡುಗಳೊಂದಿಗೆ 644 ಉಗ್ರರು ಶರಣಾಗತಿ

ಗುವಾಹತಿ, ಜ 23(ಯುಎನ್‍ಐ)- ಅಸ್ಸಾಂನಲ್ಲಿ ಉಲ್ಫಾ ಮತ್ತು ಎನ್ ಡಿಎಫ್ ಬಿ ಸೇರಿದಂತೆ ಎಂಟು ಉಗ್ರ ಸಂಘಟನೆಗಳ 644 ಉಗ್ರರ ನಾಯಕರು ಮತ್ತು ಸದಸ್ಯರು ಇಂದು ಶಸ್ತ್ರಾಸ್ತ್ರ ತ್ಯಜಿಸಿ, ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮತ್ತು ಇತರ ಹಿರಿಯ ಸೇನಾ ಮತ್ತು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದ ಶಸ್ತ್ರಾಸ್ತ್ರ ತ್ಯಾಗ ಸಮಾರಂಭದಲ್ಲಿ ಉಗ್ರರು ಔಪಚಾರಿಕವಾಗಿ ಶರಣಾಗಿದ್ದಾರೆ.
ಸುಮಾರು 200 ಶಸ್ತ್ರಾಸ್ತ್ರ, ಮದ್ದುಗುಂಡು, ಗ್ರೆನೇಡ್ ಗಳು, ರಾಕೆಟ್ ಉಡಾವಣಾ ವಾಹಕಗಳನ್ನು ಉಗ್ರರು ಸರ್ಕಾರಕ್ಕೆ ಒಪ್ಪಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಇದುವ ಅತಿಹೆಚ್ಚು ಸಂಖ್ಯೆಯ ಶರಣಾಗತಿಯೆನಿಸಿದೆ.
ರಾಜ್ಯ ಸರ್ಕಾರ ತೆಗೆದುಕೊಂಡ ಪರಿಣಾಮಕಾರಿ ಕ್ರಮಗಳಿಂದ ಇದು ಸಾಧ್ಯವಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಯುಎನ್‍ಐ ಎಸ್‍ಎಲ್‍ಎಸ್ 1343