Friday, Sep 25 2020 | Time 12:01 Hrs(IST)
 • ಡ್ರಗ್ಸ್ ಪ್ರಕರಣ: ಮತ್ತೋರ್ವ ಡ್ರಗ್ ಪೆಡ್ಲರ್ ಬಂಧನ
 • ಡ್ರಗ್ಸ್ ಪ್ರಕರಣ: ವಿಚಾರಣೆಗೆ ಕರೆದ ಮಾತ್ರಕ್ಕೆ ನಾನು ಅಪರಾಧಿಯಲ್ಲ; ನಟಿ ಅನುಶ್ರೀ
 • ಕೃಷಿ ಸಂಬಂಧಿತ ಮಸೂದೆಗೆ ವಿರೋಧ; ಹೆದ್ದಾರಿ ತಡೆದು ಅನ್ನದಾತರ ಆಕ್ರೋಶ
 • ಬಿಹಾರ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಪ್ರಕಟ ಸಾಧ್ಯತೆ
 • ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 86 ಸಾವಿರ ಹೊಸ ಕೊರೊನಾ ಪ್ರಕರಣಗಳು, 1141 ಸಾವು!
 • ಸೆನ್ಸೆಕ್ಸ್ 400 ಅಂಕ ಚೇತರಿಕೆ
 • ಶೋಪಿಯಾನ್ ಮಿನಿ ಸಚಿವಾಲಯದ ಭದ್ರತೆಯಲ್ಲಿದ್ದ ಸೈನಿಕನ ಮೇಲೆ ಉಗ್ರರ ದಾಳಿ
 • ಕೊವಿಡ್-19 : 3 ಕೋಟಿ 20 ಲಕ್ಷ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
 • ಅವಿಶ್ವಾಸ ನಿರ್ಣಯ: ಯಾವಾಗ ಬೇಕಾದರೂ ಚರ್ಚೆಗೆ ಸಿದ್ಧ-ಸಿದ್ದರಾಮಯ್ಯ
 • ಐಪಿಎಲ್‌ 2020: ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ ಸೋಲಿನ ಜವಾಬ್ದಾರಿ ಹೊತ್ತ ವಿರಾಟ್‌ ಕೊಹ್ಲಿ
 • ಐಪಿಎಲ್‌ 2020: ನಿಧಾನಗತಿಯಲ್ಲಿ ಬೌಲಿಂಗ್‌ ಮಾಡಿದ್ದಕ್ಕಾಗಿ ಕೊಹ್ಲಿಗೆ 12 ಲಕ್ಷ ರೂ ದಂಡ
 • ಕೆ ಎಲ್‌ ರಾಹುಲ್‌ ಅವರ ಎರಡು ಕ್ಯಾಚ್‌ ಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ
 • ಪಂಜಾಬ್, ಹರಿಯಾಣದಲ್ಲಿ ರೈತರ ಬಂದ್ ಗೆ ಉತ್ತಮ ಪ್ರತಿಕ್ರಿಯೆ
business economy Share

ಅಂಗಡಿಗಳಲ್ಲೂ ‘ಸಿರೊನ’ ನೈರ್ಮಲ್ಯ ಉತ್ಪನ್ನಗಳು ಲಭ್ಯ

ಬೆಂಗಳೂರು, ಜು 22 (ಯುಎನ್ಐ) ಮುಟ್ಟಿನ ನೈರ್ಮಲ್ಯ ಸಮಸ್ಯೆಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಿರುವ ‘ಸಿರೊನ’ ಸಂಸ್ಥೆಯು ಇನ್ನು ಮುಂದೆ ತನ್ನ ಸಂಸ್ಥೆಯ ಮಹಿಳೆಯರ ನೈರ್ಮಲ್ಯ ಉತ್ಪನ್ನಗಳು ಅಂಗಡಿಗಳಲ್ಲೂ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಯೋಜನೆ ಹೊಂದಿದೆ.
ಸದ್ಯಕ್ಕೆ ಸಂಸ್ಥೆಯ ಉತ್ಪನ್ನಗಳು ಆನ್‌ಲೈನ್ ಮೂಲಕ ಖರೀದಿಗೆ ಮಾತ್ರ ಅವಕಾಶವಿದೆ. ಮುಂದಿನ 2 ವರ್ಷಗಳ ಅವಧಿಯಲ್ಲಿ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಪ್ರಮುಖ 5 ನಗರಗಳಲ್ಲಿ ಸಂಸ್ಥೆಯ ಉತ್ಪನ್ನಗಳು ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ದೀಪ್ ಬಜಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಸಂಸ್ಥೆಯು ಇತ್ತೀಚೆಗೆ ಬಂಡವಾಳವನ್ನು ಸಹ ಕ್ರೋಡೀಕರಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ಸಂಸ್ಥೆಯು 5 ದಶಲಕ್ಷ ಡಾಲರ್ ಕ್ರೋಡೀಕರಿಸುವ ಉದ್ದೇಶ ಹೊಂದಿದೆ. ದಕ್ಷಿಣ ಭಾರತದ ಸ್ಥಳೀಯ ವಿತರಕರು ಹಾಗೂ ಔಷಧಿ ಮಳಿಗೆಗಳಿಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ. ಉತ್ಪನ್ನಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನ ಹಾಗೂ ಜಾಹೀರಾತು ಕೂಡ ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
“ನಮ್ಮ ಉಪಸ್ಥಿತಿ ಆನ್‌ಲೈನ್‌ನಲ್ಲಿ ಈಗಾಗಲೇ ಚೆನ್ನಾಗಿದ್ದು, ಮಾರಾಟ ಕೂಡ ಹೆಚ್ಚುತ್ತಿದೆ. ಸಂಸ್ಥೆಯ ವಸ್ತುಗಳು ಮಹಿಳೆಯರಿಗೆ ಅಂಗಡಿಗಳಲ್ಲೂ ದೊರಕುವಂತೆ ಮಾಡುವ ಉದ್ದೇಶವನ್ನು ನಾವು ಹೊಂದಿದ್ದೇವೆ. ದಕ್ಷಿಣ ಭಾರತದಲ್ಲಿ ನಮ್ಮ ಸಂಸ್ಥೆಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅಂಗಡಿಗಳಲ್ಲೂ ದೊರಕುವಂತೆ ಮಾಡುವ ಮೂಲಕ ಮಹಿಳೆಯರಿಗೆ ನಮ್ಮ ಉತ್ಪನ್ನಗಳು ಎಲ್ಲಾ ಕಡೆಗಳಲ್ಲಿ ಸಿಗಬೇಕು ಎನ್ನುವುದು ನಮ್ಮ ಆಶಯ” ಎಂದು ದೀಪ್ ಬಜಾಜ್ ತಿಳಿಸಿದ್ದಾರೆ.
ಯುಎನ್ಐ ಎಎಚ್ 1400