Monday, Jun 1 2020 | Time 01:39 Hrs(IST)
Special Share

ಅಂಫನ್ ಚಂಡಮಾರುತ; ಮಮತಾಗೆ ಕರೆ ಮಾಡಿ ಧೈರ್ಯ ತುಂಬಿದ ಹಸೀನಾ

ಢಾಕಾ, ಮೇ 22 (ಯುಎನ್ಐ) ಅಂಫಾನ್ ಚಂಡಮಾರುತ ಪೀಡಿತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಶುಕ್ರವಾರ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.
ಪ್ರಧಾನಿ ಹಸೀನಾ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗೆ ಬೆಳಗ್ಗೆ 1110ಕ್ಕೆ ಕರೆ ಮಾಡಿ ಚಂಡಮಾರುತದಿಂದ ರಾಜ್ಯದ ಹಾನಿಯ ಕುರಿತು ಮಾಹಿತಿ ಪಡೆದರು ಎಂದು ಪ್ರಧಾನಿಯ ಮಾಧ್ಯಮ ಕಾರ್ಯದರ್ಶಿ ಇಹ್ಸಾನುಲ್ ಕರೀಮ್ 'ಯುಎನ್ಐ'ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಹಸೀನಾ ಅವರು ರಾಜ್ಯದಲ್ಲಿ ಉಂಟಾದ ಸಾವು ನೋವುಗಳಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಪರಿಸ್ಥಿತಿ ಆದಷ್ಟು ಶೀಘ್ರ ಸಹಜ ಸ್ಥಿತಿಗೆ ಮರಳಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮಮತಾ ಧನ್ಯವಾದ ಸಮರ್ಪಿಸಿದ್ದಾರೆ ಎಂದು ಅವರು ತಿಳಿಸಿದರು.
ಯುಎನ್ಐ ಎಸ್ಎಚ್ 2129