Wednesday, Feb 26 2020 | Time 10:37 Hrs(IST)
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
National Share

ಆಕ್ಸ್‌ ಫರ್ಡ್ ನಿಘಂಟು ಸೇರಿದ ಆಧಾರ್, ಚಾವಲ್, ಶಾದಿ

ನವದೆಹಲಿ, ಜ 24 (ಯುಎನ್ಐ) ಆಧಾರ್, ಚಾವಲ್, ಡಬ್ಬಾ, ಹರತಾಲ್, ಶಾದಿ ಸೇರಿದಂತೆ 26 ಹೊಸ ಭಾರತೀಯ ಮೂಲದ ಪದಗಳು ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನ ಹೊಸ ಆವೃತ್ತಿಯಲ್ಲಿ ಸ್ಥಾನ ಪಡೆದಿವೆ.

ಶುಕ್ರವಾರ ಬಿಡುಗಡೆಯಾದ ಆಕ್ಸ್‌ ಫರ್ಡ್ ಅಡ್ವಾನ್ಸ್ಡ್ ಲರ್ನರ್ಸ್‌ ಡಿಕ್ಷನರಿಯ 10ನೇ ಆವೃತ್ತಿಯಲ್ಲಿ 384 ಭಾರತೀಯ ಮೂಲದ ಪದಗಳಿವೆ. ಅಲ್ಲದೆ ಚಾಟ್‌ಬೊಟ್, ಫೇಕ್‌ನ್ಯೂಸ್ ಹಾಗೂ ಮೈಕ್ರೊಪ್ಲಾಸ್ಟಿಕ್‌ನಂತಹ ಸಾವಿರಕ್ಕೂ ಅಧಿಕ ಇತ್ತೀಚಿನ ದಿನಗಳಲ್ಲಿ ಬಳಸಲ್ಪಡುವ ಪದಗಳನ್ನು ಸೇರ್ಪಡೆಗೊಳಿಸಲಾಗಿದೆ.
ದಿನಗಳೆದಂತೆ ಆಂಗ್ಲಭಾಷೆಯಲ್ಲಿ ಆಗಿರುವ ಬದಲಾವಣೆಗಳು ಹಾಗೂ ಭಾಷಾ ವಿಕಸನವನ್ನು ಗಮನದಲ್ಲಿರಿಸಿ ಹೊಸ ಆವೃತ್ತಿಯಲ್ಲಿ ಪದಗಳ ಸೇರ್ಪಡೆ ಮಾಡಲಾಗಿದೆ ಎಂದು ಆಕ್ಸ್‌ ಫರ್ಡ್ ಯೂನಿವರ್ಸಿಟಿ ಪ್ರೆಸ್ (ಓಯುಪಿ) ತಿಳಿಸಿದೆ.
ನಿಘಂಟಿನಲ್ಲಿ ಸ್ಥಾನ ಪಡೆದಿರುವ ಭಾರತೀಯ ಮೂಲದ ಇತರ ಪದಗಳೆಂದರೆ ಬಸ್‌ಸ್ಟಾಂಡ್, ಡೀಮ್ಡ್ ಯೂನಿವರ್ಸಿಟಿ, ಎಫ್‌ಐಆರ್, ನಾನ್‌ವೆಜ್, ರಿಡ್ರೆಸ್ಸಲ್, ಟೆಂಪೊ, ಟ್ಯೂಬ್‌ಲೈಟ್, ವೆಜ್, ವಿಡಿಯೋಗ್ರಾಫ್ ಇತ್ಯಾದಿ. ಕರೆಂಟ್ (ವಿದ್ಯುತ್), ಲೂಟರ್, ಲೂಟಿಂಗ್ ಪದಗಳು ಆನ್‌ಲೈನ್ ಆವೃತ್ತಿಯಲ್ಲಿ ಸ್ಥಾನ ಪಡೆದಿವೆ.

ಆಕ್ಸ್‌ ಫರ್ಡ್ ಆಂಗ್ಲ ನಿಘಂಟಿನ ನೂತನ ಆವೃತ್ತಿಯಲ್ಲಿ 26 ಹೊಸ ಭಾರತೀಯ ಮೂಲದ ಪದಗಳಿದ್ದು, ಅವುಗಳಲ್ಲಿ 22 ಪದಗಳು ಮುದ್ರಿತ ಆವೃತ್ತಿಯಲ್ಲಿವೆ. ಉಳಿದ ನಾಲ್ಕು ನೂತನ ಪದಗಳು ಆನ್‌ಲೈನ್ ಆವೃತ್ತಿಯಲ್ಲಿ ಲಭ್ಯವಿದೆ ಎಂದು ಓಯುಪಿಯ ಶಿಕ್ಷಣ ವಿಭಾಗದ ಆಡಳಿತ ನಿರ್ದೇಶಕಿ ಫಾತಿಮಾ ದಾಡಾ ತಿಳಿಸಿದ್ದಾರೆ.
ಯುಎನ್ಐ ಜಿಎಸ್ಆರ್ 2230