Wednesday, May 27 2020 | Time 02:11 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Entertainment Share

ಆಗಸ್ಟ್ 6ರಿಂದ `ಕಾಣೆಯಾದವರ ಬಗ್ಗೆ ಪ್ರಕಟಣೆ'

ಬೆಂಗಳೂರು, ಜುಲೈ 11 (ಯುಎನ್ಐ) ನಾಪತ್ತೆಯಾದವರ ಕುರಿತು ಆಕಾಶವಾಣಿಯಲ್ಲಿ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಕೇಳಿರುತ್ತೀರಿ ಅಲ್ಲವೇ? ಈಗ ಅದೇ ಶೀರ್ಷಿಕೆಯಡಿ ಬಿಲ್ವ ಎಂಟರ್‍ಟೈನ್‍ಮೆಂಟ್ ಲಾಂಛನದಲ್ಲಿ ನಿರ್ಮಾಪಕ ನವೀನ್ `ಕಾಣೆಯಾದವರ ಬಗ್ಗೆ ಪ್ರಕಟಣೆ` ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ ಚಿತ್ರೀಕರಣ ಆಗಸ್ಟ್ 6 ರಿಂದ ಆರಂಭವಾಗಲಿದ್ದು, ಇದು ಅನಿಲ್ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರವಾಗಿದೆ

ಈ ಹಿಂದೆ `ಶಕ್ತಿ`, `ದಿಲ್‍ವಾಲ`, `ಕೃಷ್ಣ ರುಕ್ಕು`, `ರ್ಯಾಂಬೋ 2` `ಕಿರಾತಕ 2`, ದಾರಿ ತಪ್ಪಿದ ಮಗ` ಸೇರಿದಂತೆ ಆರು ಚಿತ್ರಗಳ ನಿರ್ದೇಶಕರಾಗಿರುವ ಅನಿಲ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಅವರ ನಿರ್ದೇಶನದ ಏಳನೇ ಚಿತ್ರವಾಗಿದ್ದು, ಕಥೆ, ಚಿತ್ರಕಥೆ, ಸಂಭಾಷಣೆಯ ಹೊಣೆಯನ್ನೂ ಅನಿಲ್ ಕುಮಾರ್ ಅವರೇ ವಹಿಸಿಕೊಂಡಿದ್ದಾರೆ.

65ವರ್ಷ ಮೇಲ್ಪಟವರ ಹಿರಿಯ ನಾಗರಿಕರ ಬಗೆಗಿನ ಕಥಾ ಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ರವಿಶಂಕರ್, ರಂಗಾಯಣ ರಘು, ತಬಲನಾಣಿ ಅಭಿನಯಿಸುತ್ತಿದ್ದಾರೆ. ಬ್ಯಾಂಕಾಕ್‍ನಲ್ಲಿ 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಶಿವಕುಮಾರ್ ಬಿ.ಕೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಡಾ ರವಿವರ್ಮ ಅವರ ಸಾಹಸ ನಿರ್ದೇಶನವಿದೆ.

ಯುಎನ್ಐ ಎಸ್ಎ ವಿಎನ್ 1542
More News
ಸ್ವಾಭಿಮಾನದ  ಗೆಲುವಿಗೆ ಒಂದು ವರ್ಷ : ಸುಮಲತಾ ಕೃತಜ್ಞತೆ

ಸ್ವಾಭಿಮಾನದ ಗೆಲುವಿಗೆ ಒಂದು ವರ್ಷ : ಸುಮಲತಾ ಕೃತಜ್ಞತೆ

26 May 2020 | 4:40 PM

ಬೆಂಗಳೂರು, ಮೇ 26 (ಯುಎನ್‍ಐ) ಕನ್ನಡದ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಾಧಿಸಿದ ಗೆಲುವಿಗೆ ಮೇ 23ಕ್ಕೆ ಒಂದು ವರ್ಷ ತುಂಬಿದೆ.

 Sharesee more..