Monday, Jun 1 2020 | Time 02:31 Hrs(IST)
National Share

ಆನ್‍ಲೈನ್‍ಮೂಲಕ 2 ದಿನಗಳಲ್ಲಿ 6,52,644 ರೈಲ್ವೆ ಟಿಕೆಟ್‌ಗಳು ಬುಕ್ಕಿಂಗ್

ನವದೆಹಲಿ, ಮೇ 22 (ಯುಎನ್‌ಐ) ರೈಲು ಪ್ರಯಾಣಕ್ಕೆ ಗುರುವಾರ ಬುಕಿಂಗ್ ಆರಂಭವಾದಾಗಿನಿಂದ ಕೇವಲ ಎರಡು ದಿನಗಳಲ್ಲಿ ದೇಶದಾದ್ಯಂತ 200 ದೈನಂದಿನ ಪ್ರಯಾಣಿಕ ರೈಲುಗಳಲ್ಲಿ 14,13,277 ಪ್ರಯಾಣಿಕರು ಸಂಚರಿಸಲು 6,52,644 ಟಿಕೆಟ್‍ಗಳನ್ನು ಆನ್‌ಲೈನ್ ಮೂಲಕ ಕಾಯ್ದಿರಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಈ ರೈಲುಗಳಿಗೆ ಆನ್‌ಲೈನ್ ಮೂಲಕ ಟಿಕೆಟ್ ಬುಕಿಂಗ್ ಅನ್ನು ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಮತ್ತು ಮೊಬೈಲ್ ಆ್ಯಪ್ ಮೂಲಕ ಮಾಡಲಾಗುತ್ತಿದೆ. ಮೇ 22 ರಿಂದ ಕಾಯ್ದಿರಿಸುವಿಕೆ ಕೌಂಟರ್‌ಗಳು, ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‌ಸಿ) ಮತ್ತು ಟಿಕೆಟ್‍ ಏಜೆಂಟ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಲು ರೈಲ್ವೆ ಅನುಮತಿ ನೀಡಿದೆ.
ದೇಶಾದ್ಯಂತ 200 ದೈನಂದಿನ ಪ್ರಯಾಣಿಕ ರೈಲುಗಳ ಕಾರ್ಯಾಚರಣೆ ಪ್ರಾರಂಭವಾಗಲಿದೆ. ಈ ರೈಲುಗಳು ಜೂನ್ 1 ರಿಂದ ಓಡಲಿವೆ. ಈ ವಿಶೇಷ ಸೇವೆಗಳು ಮೇ 1 ರಿಂದ ಅಸ್ತಿತ್ವದಲ್ಲಿರುವ ಶ್ರಮಿಕ್‍ ವಿಶೇಷ ರೈಲುಗಳು ಮತ್ತು ಮೇ 12 ರಿಂದ ಓಡಾಡುತ್ತಿರುವ ವಿಶೇಷ ಹವಾ ನಿಯಂತ್ರಿತ ರೈಲುಗಳಿಗೆ (30 ರೈಲುಗಳು) ಹೆಚ್ಚುವರಿಯಾಗಿ ಸೇರ್ಪಡೆಯಾಗಿವೆ.
ರೈಲ್ವೆ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯ ಗಳೊಂದಿಗೆ ಸಮಾಲೋಚಿಸಿ ಭಾರತೀಯ ರೈಲ್ವೆಯ ರೈಲು ಸೇವೆಗಳನ್ನು ಜೂನ್ 1 ರಿಂದ ಕ್ರಮೇಣ ಆರಂಭಿಸಲು ನಿರ್ಧರಿಸಿದೆ.
ಯುಎನ್‍ಐ ಎಸ್‍ಎಲ್‍ಎಸ್ 2255
More News
ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ

ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ

31 May 2020 | 9:35 PM

ನವದೆಹಲಿ, ಮೇ 31 (ಯುಎನ್‌ಐ) ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪಗಳ ಮೇಲೆ ರೂಪುಗೊಂಡ ಕಡಿಮೆ ಒತ್ತಡ ಪ್ರದೇಶವು ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಜೂನ್ 3 ರೊಳಗೆ ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತ್ ಗೆ ಬೀಸುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

 Sharesee more..
ದೇಶದಲ್ಲಿ ಒಂದೇ ದಿನ 8380 ಕೊರೋನಾ ಸೋಂಕು ಪತ್ತೆ: ಸಾವಿನ ಸಂಖ್ಯೆ 5164ಕ್ಕೆ ಏರಿಕೆ

ದೇಶದಲ್ಲಿ ಒಂದೇ ದಿನ 8380 ಕೊರೋನಾ ಸೋಂಕು ಪತ್ತೆ: ಸಾವಿನ ಸಂಖ್ಯೆ 5164ಕ್ಕೆ ಏರಿಕೆ

31 May 2020 | 9:26 PM

ನವದೆಹಲಿ, ಮೇ 31 (ಯುಎನ್ಐ) ರಾಷ್ಟ್ರವ್ಯಾಪಿ ಲಾಕ್‌ಡೌನ್ 4.0 ಭಾನುವಾರ ಮುಕ್ತಾಯಗೊಳ್ಳುತ್ತಿದ್ದಂತೆ, ದೇಶದಲ್ಲಿ ಒಂದೇ ದಿನ ಕೊರೋನಾ ಸೋಂಕು 8380 ಜನರಲ್ಲಿ ಕಂಡುಬಂದಿದೆ.

 Sharesee more..