Friday, Feb 28 2020 | Time 09:45 Hrs(IST)
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಆಫ್ಘಾನಿಸ್ತಾನದ ಬಾಲ್ಕ್ ಪ್ರಾಂತ್ಯದಲ್ಲಿ ತಾಲಿಬನ್ ದಾಳಿ: ಎಂಟು ಪೊಲೀಸರು ಸಾವು

ಕಾಬುಲ್, ಜ1(ಸ್ಪುಟ್ನಿಕ್)- ಆಫ್ಘಾನಿಸ್ತಾನದ ಬಾಲ್ಕ್ ಪ್ರಾಂತ್ಯದಲ್ಲಿ ಪೊಲೀಸ್ ತಪಾಸಣಾ ಶಿಬಿರದ ಮೇಲೆ ತಾಲಿಬನ್ ಉಗ್ರು ನಡೆಸಿದ ದಾಳಿಯಲ್ಲಿ ಕನಿಷ್ಟ ಎಂಟು ಪೊಲೀಸರು ಮೃತಪಟ್ಟು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಬಾಲ್ಕ್ ಪೊಲೀಸ್ ಮುಖ್ಯಸ್ಥ ಅಜ್ಮಲ್ ಫಯೆಜ್ ಬುಧವಾರ ಸ್ಪುಟ್ನಿಕ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮಜರ್ ಷರೀಫ್-ಶೆಬರ್‍ಘನ್ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯರಾತ್ರಿ ಪೊಲೀಸ್ ತಪಾಸಣಾ ಕೇಂದ್ರದ ಮೇಲೆ ತಾಲಿಬನ್ ಉಗ್ರರ ತಂಡ ದಾಳಿ ನಡೆಸಿ, ಕೆಲ ಕಾಲ ಕೇಂದ್ರವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಪಡೆ ಉಗ್ರರನ್ನು ಆ ಪ್ರದೇಶದಿಂದ ಹೊರದಬ್ಬಿದೆ.
ತಪಾಸಣಾ ಶಿಬಿರದ 14 ಅಧಿಕಾರಿಗಳೇ ತಾಲಿಬಾನ್ ದಾಳಿಗೆ ನೆರವಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಆಫ್ಘನ್ ಮಾಧ್ಯಮ ತಿಳಿಸಿದೆ.
ಘಟನೆ ಕುರಿತು ತಾಲಿಬನ್ ಸಂಘಟನೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಯುಎನ್‍ಐ ಎಸ್‍ಎಲ್‍ಎಸ್ 1345