Saturday, Aug 8 2020 | Time 05:42 Hrs(IST)
National Share

ಆಫ್ಘಾನಿಸ್ತಾನ: ಬಾಂಬ್‍ಗಳನ್ನು ಹೂತಿಟ್ಟು ಸ್ಫೋಟಿಸಲು ಯತ್ನಿಸಿದ ಆರು ತಾಲಿಬಾನ್ ಉಗ್ರರು ಬಲಿ

ಕಾಬೂಲ್, ಜುಲೈ 4(ಯುಎನ್‍ಐ)-ಆಫ್ಘಾನಿಸ್ತಾನದ ಪಕ್ತಿಯಾ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಸ್ಫೋಟಗಳಲ್ಲಿ ರಸ್ತೆ ಬದಿ ಬಾಂಬ್‍ಗಳನ್ನು ಹೂತಿಟ್ಟು ಸ್ಫೋಟಿಸಲು ಯತ್ನಿಸಿದ ತಾಲಿಬಾನ್‍ ಸಂಘಟನೆಯ ಆರು ಉಗ್ರರು ಹತರಾಗಿದ್ದಾರೆ ಎಂದು ಆಫ್ಘನ್‍ ರಾಷ್ಟ್ರೀಯ ಸೇನೆಯ 203ನೇ ಥಂಡರ್‍ ಕೋರ್‍ ತಿಳಿಸಿದೆ.
‘ಕಳೆದ ರಾತ್ರಿ ತಾಲಿಬಾನ್‍ ಉಗ್ರರು ಪಕ್ತಿಯಾ ಪ್ರಾಂತ್ಯದ ಅಹ್ಮದ್ ಖೇಲ್ ಜಿಲ್ಲೆಯ ಘುಂಜಿ ಪ್ರದೇಶದಲ್ಲಿ ರಸ್ತೆಬದಿ ಬಾಂಬ್ ಹೂತಿಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಬಾಂಬ್ ಸ್ಫೋಟಗೊಂಡು ನಾಲ್ವರು ಉಗ್ರರು ಹತರಾಗಿದ್ದಾರೆ ಥಂಡರ್ ಕೋರ್‍ ಪ್ರಕಟಣೆ ತಿಳಿಸಿದೆ.
ಮತ್ತೊಂದು ಇಂತಹುದೇ ಘಟನೆಯಲ್ಲಿ ಪಕ್ತಿಕಾ ಪ್ರಾಂತ್ಯದ ಖೋಶಮಂಡ್ ಜಿಲ್ಲೆಯಲ್ಲಿ ತಾಲಿಬಾನ್‍ ಉಗ್ರರು ರಸ್ತೆ ಬದಿ ಬಾಂಬ್‍ ಸ್ಫೋಟಿಸಲು ಯತ್ನಿಸಿದಾಗ ಆಕಸ್ಮಿಕವಾಗಿ ಬಾಂಬ್‍ ಸ್ಫೋಟಿಸಿ ಇಬ್ಬರು ಉಗ್ರರು ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಾಯಗಳಾಗಿವೆ ಎಂದು ಥಂಡರ್ ಕೋರ್ ತಿಳಿಸಿದೆ.
ಫೆಬ್ರವರಿಯಲ್ಲಿ ಅಮೆರಿಕದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರೂ ತಾಲಿಬಾನ್ ಉಗ್ರರು ಅಫ್ಘಾನ್ ಸಶಸ್ತ್ರ ಪಡೆ ಮತ್ತು ನಾಗರಿಕರನ್ನು ಬಾಂಬ್ ಸ್ಫೋಟಕ್ಕೆ ಗುರಿಯಾಗಿಸಿಕೊಂಡಿದ್ದಾರೆ.
ಯುಎನ್‍ಐ ಎಸ್ಎಲ್‍ಎಸ್ 1549
More News
ಯುಪಿಎಸ್ಸಿ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಜೋಶಿ ಅಧಿಕಾರ

ಯುಪಿಎಸ್ಸಿ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಜೋಶಿ ಅಧಿಕಾರ

07 Aug 2020 | 10:04 PM

ನವದೆಹಲಿ, ಆಗಸ್ಟ್ 7(ಯುಎನ್ಐ) ಕೇಂದ್ರ ಲೋಕಸೇವಾ ಆಯೋಗದ ನೂತನ ಅಧ್ಯಕ್ಷರಾಗಿ ಶಿಕ್ಷಣತಜ್ಞ ಪ್ರದೀಪ್ ಕುಮಾರ್ ಜೋಶಿ ಶುಕ್ರವಾರ ನೇಮಕವಾಗಿದ್ದಾರೆ.

 Sharesee more..
ಡಾ ಕೆ  ಕಸ್ತೂರಿರಂಗನ್ ವಿವಾದಾತೀತರು: ತಪಸ್ಸಿನಂತೆ ನೂತನ ಶಿಕ್ಷಣ ನೀತಿ ರೂಪಿಸಿದ್ದಾರೆ: ಪ್ರಧಾನಿ ನರೇಂದ್ರ ಮೋದಿ

ಡಾ ಕೆ ಕಸ್ತೂರಿರಂಗನ್ ವಿವಾದಾತೀತರು: ತಪಸ್ಸಿನಂತೆ ನೂತನ ಶಿಕ್ಷಣ ನೀತಿ ರೂಪಿಸಿದ್ದಾರೆ: ಪ್ರಧಾನಿ ನರೇಂದ್ರ ಮೋದಿ

07 Aug 2020 | 8:41 PM

ನವದೆಹಲಿ, ಆ 7 []]ಯುಎನ್ಐ] ಆಧುನಿಕ ಶಿಕ್ಷಣಕ್ಕೆ ಅಡಿಪಾಯ ಹಾಕುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಇಂತಹ ಅತ್ಯುತ್ತಮ ನೀತಿ ರೂಪಿಸಿದ ಬಾಹ್ಯಾಕಾಶ ವಿಜ್ಞಾನಿ, ಶಿಕ್ಷಣ ತಜ್ಞ ಡಾ.ಕೆ.ಕಸ್ತೂರಿ ರಂಗನ್ ಅವರ ಶ್ರಮ ಶ್ಲಾಘನೀಯ ಎಂದಿದ್ದಾರೆ.

 Sharesee more..
ಕೊವಿಡ್‍: ದೇಶದಲ್ಲಿ ಚೇತರಿಕೆ ಪ್ರಮಾಣ ಶೇ 68ಕ್ಕೆ ಏರಿಕೆ: ಸಾವಿನ ಪ್ರಮಾಣ ಶೇ2 05ಕ್ಕೆ ಇಳಿಕೆ

ಕೊವಿಡ್‍: ದೇಶದಲ್ಲಿ ಚೇತರಿಕೆ ಪ್ರಮಾಣ ಶೇ 68ಕ್ಕೆ ಏರಿಕೆ: ಸಾವಿನ ಪ್ರಮಾಣ ಶೇ2 05ಕ್ಕೆ ಇಳಿಕೆ

07 Aug 2020 | 7:10 PM

ನವದೆಹಲಿ, ಆ 7 (ಯುಎನ್‌ಐ) ಭಾರತದಲ್ಲಿ ಕೊವಿಡ್‍ ನ ಒಟ್ಟು ಪ್ರಕರಣಗಳ ಸಂಖ್ಯೆ 20 ಲಕ್ಷ ದಾಟುತ್ತಿದ್ದಂತೆ, ಕೋವಿಡ್ -19 ರೋಗಿಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಚೇತರಿಕೆಯ ಪ್ರಮಾಣ ಮತ್ತು ಸಾವಿನ ಪ್ರಮಾಣದಲ್ಲಿ ಇಳಿಮುಖ ಕಂಡುಬರುತ್ತಿರುವುದು ಆಶಾದಾಯಕ ಸೂಚನೆಯಾಗಿದೆ.

 Sharesee more..
ಕೇರಳದಲ್ಲಿ ಭಾರೀ ಭೂಕುಸಿತ: 10 ಮಂದಿ ಸಾವು, 85 ಮಂದಿ ನಾಪತ್ತೆ

ಕೇರಳದಲ್ಲಿ ಭಾರೀ ಭೂಕುಸಿತ: 10 ಮಂದಿ ಸಾವು, 85 ಮಂದಿ ನಾಪತ್ತೆ

07 Aug 2020 | 6:53 PM

ಇಡುಕ್ಕಿ, ಕೇರಳ ಆ 7 (ಯುಎನ್‌ಐ)- ಜಿಲ್ಲೆಯ ರಾಜಮಾಲಾದ ಪೆಟ್ಟಿಮುಡಿಯಲ್ಲಿ ಶುಕ್ರವಾರ ಭಾರಿ ಮಳೆಯಿಂದಾಗಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 85 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

 Sharesee more..