Monday, Jul 22 2019 | Time 07:43 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Sports Share

ಆಫ್ರಿಕಾ ಕಪ್‌: ಸೆಮಿಫೈನಲ್‌ ತಲುಪಿದ ಟಿನೀಶಿಯಾ

ಕೈರೋ, ಜು 12 (ಕ್ಸಿನ್ಹುವಾ) ಪ್ರಸಕ್ತ 2019ರ ಆವೃತ್ತಿಯ ಆಫ್ರಿಕಾ ಕಪ್‌ ಫುಟ್ಬಾಲ್‌ ಟೂರ್ನಿಯ ಪಂದ್ಯದಲ್ಲಿ ಟುನೀಶಿಯಾ ಚೊಚ್ಚಲ ಪದಾರ್ಪಣೆ ಮಾಡಿದ್ದ ಮಡಗಾಸ್ಕರ್ ವಿರುದ್ಧ ಗೆದ್ದು ಸೆಮಿಫೈನಲ್‌ ತಲುಪಿದೆ.
ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಫರ್ಜಾನಿ ಸಾಸ್ಸಿ(52ನೇ ನಿ.), ಯೂಸೆಫ್ ಮಸಕ್ನಿ(60ನೇ ನಿ.) ಹಾಗೂ ನೈಮ್ ಸ್ಲಿಟಿ (90+3) ಅವರು ಗಳಿಸಿದ ಗೋಲುಗಳ ನೆರವಿನಿಂದ
ಟುನೀಶಿಯಾ ತಂಡ, ಮಡಗಾಸ್ಕ ವಿರುದ್ಧ 3-0 ಅಂತರದಲ್ಲಿ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ತಲುಪಿದೆ.
ಉಭಯ ತಂಡಗಳು ಮೊದಲಾರ್ಧದಲ್ಲಿ ಗೋಲು ರಹಿತವಾಗಿ ಅಭಿಯಾನ ಮುಗಿಸಿದ್ದವು. ನಂತರ ಎರಡನೇ ಅವಧಿ ಆರಂಭವಾದ ಕೆಲವೇ ನಿಮಿಷಗಳಲ್ಲಿ ಫರ್ಜಾನಿ ಸಾಸ್ಸಿ ಟುನೀಶಿಯಾಗೆ ಗೋಲಿನ ಖಾತೆ ತೆರೆದರು. ಇದಾದ ಕೇವಲ ಆರು ನಿಮಿಷಗಳ ಅಂತರದಲ್ಲಿ ವಹ್ಬಿ ಖಾಜ್ರಿ ಹೊಡೆದ ಹೊಡೆತವನ್ನು ಗೋಲು ಪಟ್ಟಿಗೆ ಸೇರಿಸುವಲ್ಲಿ ಯೂಸೆಫ್ ಮಸಕ್ನಿ ಅವರು ಯಶಸ್ವಿಯಾದರು.
ಟಿನೀಶಿಯಾಗೆ ಮೂರನೇ ಗೋಲನ್ನು ಹೆಚ್ಚುವರಿ ಅವಧಿಯಲ್ಲಿ ನೈಮ್ ಸ್ಲಿಟಿ ಅವರು ಗಳಿಸಿದರು. ಪಂದ್ಯದ ನಿಗದಿತ ಅವಧಿ ಮುಕ್ತಾಯಕ್ಕೆ ಟಿನೀಶಿಯಾ 3-0 ಅಂತರದಲ್ಲಿ ಜಯ ಸಾಧಿಸಿತು. 2004ರ ಚಾಂಪಿಯನ್ಸ್‌ ಟಿನೀಶಿಯಾ ತಂಡ ಜುಲೈ 14 ರಂದು ಸೆಮಿಫೈನಲ್‌ ಪಂದ್ಯದಲ್ಲಿ ಸೆನೆಗಲ್‌ ವಿರುದ್ಧ ಸೆಣಸಲಿದೆ.
ಕ್ಸಿನ್ಹುವಾ ಆರ್‌ಕೆ ಎಎಚ್‌ 1042