Monday, Jul 22 2019 | Time 07:23 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Special Share

ಆಯೋಧ್ಯೆಯ ವಿವಾದಸ್ಪದ ಸ್ಥಳದಲ್ಲಿ ಮಸೀದಿ ನಿರ್ಮಾಣ ಸಾಧ್ಯವೇ ಇಲ್ಲ ; ಡಾ. ವೇದಾಂತಿ

ಲಕ್ನೋ, ಜುಲೈ 12(ಯುಎನ್ಐ)- ಆಯೋಧ್ಯೆಯ ವಿವಾದಾಸ್ಪಾದ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದು ಸಾಧ್ಯವೇ ಇಲ್ಲ, ಅಲ್ಲಿ ಭವ್ಯ ಭಗವಾನ್ ರಾಮನ ದೇಗುಲವನ್ನು ಮಾತ್ರ ನಿರ್ಮಿಸಲಾಗುವುದು ಎಂದು ರಾಮ ಜನ್ಮ ಭೂಮಿ ನ್ಯಾಸ್ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಡಾ. ರಾಮ ವಿಲಾಸ್ ವೇದಾಂತಿ ಸ್ಪಷ್ಟಪಡಿಸಿದ್ದಾರೆ.

ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥ ಪಡಿಸಲು ಸಾಧ್ಯವಾಗದಿದ್ದರೆ, ಪ್ರಕರಣವನ್ನು ದೈನಂದಿನ ಅಧಾರದಮೇಲೆ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದ ಒಂದು ದಿನದ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಡಾ. ರಾಮ ವಿಲಾಸ್ ವೇದಾಂತಿ, ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ಎಲ್ಲಾ ಪುರಾವೆಗಳು ಮಸೀದಿ ನಿರ್ಮಾಣವಾಗುವ ಮೊದಲು ಸ್ಥಳದಲ್ಲಿ ದೇವಾಲಯ ಅಸ್ತಿತ್ವದಲ್ಲಿತ್ತು ಎಂಬುದನ್ನು ದೃಢಪಡಿಸಿವೆ ಎಂದು ಹೇಳಿದರು.
ದ್ವಂಸಗೊಳಿಸಲಾದ ದೇಗುಲಗಳನ್ನು ಪಾಕಿಸ್ತಾನ, ಮಲೇಷಿಯಾದಲ್ಲಿ, ಮರು ನಿರ್ಮಿಸುವುದಾದರೆ, ಭಾರತದಲ್ಲಿ ಏಕೆ ಪುನರ್ ನಿರ್ಮಾಣಮಾಡಬಾರದು? ಎಂದು ಪ್ರಶ್ನಿಸಿದ್ದಾರೆ. ಭಾರತೀಯ ಪುರಾತತ್ವ ಇಲಾಖೆ ಈಗಾಗಲೇ ವಿವಾದಿತ ಸ್ಥಳದಲ್ಲಿ ಪುರಾತನ ಕಾಲದ ವಿಗ್ರಹಗಳನ್ನು ಉತ್ಖನನ ಮಾಡಿರುವುದು ಮಸೀದಿ ನಿರ್ಮಾಣಕ್ಕಿಂತ ಮೊದಲು ಸ್ಥಳದಲ್ಲಿ ದೇಗುಲ ಇತ್ತು ಎಂಬುದನ್ನು ರುಜುವಾತುಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಕಳೆದ 200 ವರ್ಷಗಳಿಂದ ಭೂಮಿಯ ಒಡೆತನವನ್ನು ನಿರ್ಮೋಹಿ ಅಖಾರ ಹೊಂದಿದ್ದು, ಸ್ಥಳದಲ್ಲಿ ಶಿವ ದೇಗುಲ ಅಸ್ಥಿತ್ವದಲ್ಲಿತ್ತು ಎಂದು ಅಮೆರಿಕಾದ ನಾಸಾ ಹೇಳಿದೆ. ವಾಲ್ಮೀಕಿ ರಾಮಾಯಣದ ಪುರಾವೆಗಳನ್ನು ನ್ಯಾಯಾಲಯ ಒಪ್ಪಿಕೊಳ್ಳಬೇಕು ಎಂದರು.
ಅಲ್ಲದೆ, ರಾಜ ದಶರಥ ಹಾಗೂ ಭಗವಾನ್ ರಾಮ ಅಸ್ಥಿತ್ವವನ್ನು ತೋರಿಸುವ ಭೂ ದಾಖಲೆಗಳಿವೆ. ದೇಗುಲಕ್ಕೆ ಮುಂಚೆ ಮಸೀದಿ ಇತ್ತು ಎಂಬುದಕ್ಕೆ ಒಂದೇ ಒಂದು ಪುರಾವೆ ಇಲ್ಲ ಎಂದು ಹೇಳಿದರು
ಕೆಲ ಮೂಲಭೂತವಾದಿ ಮುಸ್ಲಿಮರು ಹೊರತುಪಡಿಸಿದರೆ, ದೇಶದ ಬಹುತೇಕ ಮುಸ್ಲಿಮರು ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಬಯಸುತ್ತಾರೆ ಎಂದು ತಿಳಿಸಿದರು.
ಮಸೀದಿಯನ್ನು ಆಯೋಧ್ಯೆ ಬದಲಿಗೆ ಲಕ್ನೋದಲ್ಲಿ ನಿರ್ಮಿಸಬೇಕು. ಮಸೀದಿಗೆ ಬಾಬರ್ ಹೆಸರು ಇಡಬಾರದು ಶಿಯಾ ವಕ್ಫ್ ಮಂಡಳಿ ಈಗಾಗಲೇ ಹೇಳಿದೆ.

ಆಯೋಧ್ಯೆಯ ಸರಯೂ ನದಿ ದಂಡೆಯ ಯಾವುದೇ ಒಂದು ಪ್ರದೇಶಕ್ಕೂ ಬಾಬರ್ ಹೆಸರು ಇಟ್ಟಿಲ್ಲ, ಪ್ರತಿಯೊಂದು ಭಗವಾನ್ ರಾಮನ ಹೆಸರಿದೆ. ಬಾಬರ್ ಹೆಸರಿನಲ್ಲಿ ರಸ್ತೆ, ವಾರ್ಡ್ ಬೀದಿ ಯಾವುದೂ ಇಲ್ಲ, ಮಸೀದಿಯನ್ನು ಬಾಬರ್ ಹೆಸರಿನಲ್ಲಿ ಹೇಗೆ ನಿರ್ಮಿಸಲಾಯಿತು ಎಂದು ಅವರು ಪ್ರಶ್ನಿಸಿದರು.
ಬಾಬರ್ ಆಯೋಧ್ಯೆಗೆ ಎಂದೂ ಭೇಟಿ ನೀಡಿರಲಿಲ್ಲ. ಅವನು ಹರ್ಯಾಣದಿಂದ ಪ್ರವೇಶಿಸಿದ್ದ ಅವನ ಹೆಸರಿನಲ್ಲಿ ಏನಾದರೂ ಮಸೀದಿ ನಿರ್ಮಿಸಬೇಕಿದ್ದರೆ ಅದನ್ನು ಹರ್ಯಾಣದಲ್ಲಿ ನಿರ್ಮಿಸಬೇಕಿತ್ತು ಎಂದು ಇತಿಹಾಸವನ್ನು ಉಲ್ಲೇಖಿಸಿ ಹೇಳಿದರು.
ದೇಶ ಶೇ. 90 ರಷ್ಟು ಹಿಂದೂ ಸಮುದಾಯವನ್ನೂ ಹೊಂದಿದ್ದರೂ ರಾಮ ದೇಗುಲವೊಂದರ ನಿರ್ಮಾಣಕ್ಕೆ ಹೋರಾಟ ನಡೆಸಬೇಕಾಗಿರುವುದು ಅತ್ಯಂತ ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
ದೇಶದ ಸರ್ವಾಂಗೀಣ ಅಭಿವೃದ್ದಿಗೆ ಹಾಗೂ ವಿವಾದ ಸುಖಾಂತ್ಯಗೊಳ್ಳಲು ಆಯೋಧ್ಯೆಯಲ್ಲಿ ರಾಮದೇಗುಲ ನಿರ್ಮಿಸಲು ಮುಸ್ಲಿಮರು ಹಿಂದೂಗಳನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ದೇಶದಲ್ಲಿ ದೇವಾಲಯಗಳ ಇದ್ಧ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಎಲ್ಲಾ ಮಸೀದಿಗಳನ್ನು ಕೆಡವಲು ಮುಸ್ಲಿಂ ಸಮುದಾಯವೇ ಮುಂದಾಗಬೇಕು ಎಂದು ಮನವಿ ಮಾಡಿದರು.
ಯುಎನ್ಐ ಕೆವಿಆರ್ ಎಸ್ ಎಲ್ ಎಸ್ 1822