Saturday, Aug 8 2020 | Time 05:10 Hrs(IST)
Special Share

ಆಯೋಧ್ಯೆ ರಾಮ ಮಂದಿರಕ್ಕೆ ಆಗಸ್ಟ್ ೫ ರಂದು ಪ್ರಧಾನಿ ಮೋದಿ ಭೂಮಿ ಪೂಜೆ..?

ಲಕ್ನೋ, ಜುಲೈ ೧೬(ಯುಎನ್‌ಐ) ಆಯೋಧ್ಯೆಯಲ್ಲಿ ನಿರ್ಮಿಸಲಾಗುವ ಭಗವಾನ್ ಶ್ರೀರಾಮ ದೇಗುಲದ ಭೂಮಿ ಪೂಜೆಯನ್ನು ಆಗಸ್ಟ್ ೫ ರಂದು ನಡೆಸಲು ರಾಮ ಜನ್ಮ ಭೂಮಿ ತೀರ್ಥ ಟ್ರಸ್ಟ್ ಸಜ್ಜಾಗುತ್ತಿದೆ.
ಆಗಸ್ಟ್ ೫ರಂದು ಉತ್ತರ ಪ್ರದೇಶ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಪ್ರವಾಸಕ್ಕೆ ಅಂದೇ ರಾಮದೇಗಲ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ರಾಮ ಜನ್ಮ ಭೂಮಿ ತೀರ್ಥ ಟ್ರಸ್ಟ್ ತೀರ್ಮಾನಿಸಿದೆ. ಈ ಕುರಿತು ಚರ್ಚಿಸಲು ಜುಲೈ ೧೮ ರಂದು ಟ್ರಸ್ಟ್ ಸದಸ್ಯರು ಸಭೆ ನಡೆಸಲಿದ್ದಾರೆ.
ಆಯೋಧ್ಯೆಯಲ್ಲಿ ನಿರ್ಮಿಸಲಿರುವ ಶ್ರೀರಾಮ ಮಂದಿರದ ಭೂಮಿ ಪೂಜೆಗೆ ಖುದ್ದು ಆಗಮಿಸಬೇಕೆಂದು ಈಗಾಗಲೇ ಟ್ರಸ್ಟ್ ಸದಸ್ಯರು ಪ್ರಧಾನಿ ಮೋದಿ ಅವರನ್ನು ಕೋರಿದ್ದಾರೆ.
ಈ ಸಂಬಂಧ ಅಧಿಕಾರಿಗಳು, ಪ್ರಧಾನಿ ಪ್ರವಾಸ ದಿನಾಂಕಗಳನ್ನು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನಲೆಯಲ್ಲಿ ಭೂಮಿ ಪೂಜಾ ಕಾರ್ಯಕ್ರಮ ಸರಳವಾಗಿ ನಡೆಸಲು ಟ್ರಸ್ಟ್ ನಿರ್ಣಯಿಸಿದೆ.
ಪ್ರಧಾನಿ ಮಂತ್ರಿಗಳೊಂದಿಗೆ ಕೇಂದ್ರ ಸಂಪುಟದ ಹಲವು ಸಚಿವರು ಭೂಮಿ ಪೂಜೆಯಲ್ಲಿ ಭಾಗವಹಿಸಲಿದ್ದಾರೆ ಎಂಬುದು ಸುದ್ದಿ.
ಮೊದಲು ವರ್ಚುವಲ್ ಕಾರ್ಯಕ್ರಮದ ಮೂಲಕ ಭೂಮಿ ಪೂಜೆ ನೆರವೇರಿಸಬೇಕೆಂದು ನಿರ್ಣಯಿಸಲಾಗಿತ್ತು.. ಹಲವು ಟ್ರಸ್ಟ್ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರ ಕೈಯಿಂದಲೇ ಖುದ್ದು ಕಾರ್ಯಕ್ರಮ ನಡೆಸಬೇಕೆಂದು ಬಯಸಿದ್ದಾರೆ.
ಹಾಗಾಗಿ ಪ್ರಧಾನಿ ಪ್ರವಾಸ ವೇಳಾ ಪಟ್ಟಿ ಅಂತಿಮ ಗೊಂಡಿರುವ ಹಿನ್ನಲೆಯಲ್ಲಿ ಭೂಮಿ ಪೂಜೆಯ ದಿನಾಂಕವನ್ನು ಶೀಘ್ರದಲ್ಲಿಯೇ ಅಧಿಕೃತವಾಗಿ ಟ್ರಸ್ಟ್ ಪ್ರಕಟಿಸುವ ನಿರೀಕ್ಷೆಯಿದೆ. ಟ್ರಸ್ಟ್ ಸಭೆಗೆ ಮುನ್ನ ಕಟ್ಟಡ ನಿರ್ಮಾಣ ತಜ್ಞರೊಂದಿಗೆ, ಸಾಧು ಸಂತರೊಂದಿಗೆ ಕೂಡಾ ಭೂಮಿ ಪೂಜೆ ದಿನಾಂಕದ ಬಗ್ಗೆ ಚರ್ಚಿಸಲಿದ್ದಾರೆ. ಭೂಮಿ ಪೂಜಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಮುಂದಿನ ತಿಂಗಳು ೩ ರಂದು ಇಲ್ಲವೆ ೫ ರಂದು ಹಾಜರಾಗಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಸಂತ ನೃತ್ಯ ಗೋಪಾಲ್ ದಾಸ್ ಹೇಳಿದ್ದಾರೆ.
ಯುಎನ್‌ಐ ಕೆವಿಆರ್ ೧೭೩೧
More News
ಕ್ಯಾಲಿಕೆಟ್‌ ವಿಮಾನನಿಲ್ದಾಣದ ರನ್‌ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ: ಹಲವರಿಗೆ ಗಾಯ

ಕ್ಯಾಲಿಕೆಟ್‌ ವಿಮಾನನಿಲ್ದಾಣದ ರನ್‌ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ: ಹಲವರಿಗೆ ಗಾಯ

07 Aug 2020 | 9:41 PM

ಮಲಪ್ಪುರಂ, ಆಗಸ್ಟ್ 7 (ಯುಎನ್‌ಐ) ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಇಲ್ಲಿನ ಕರಿಪುರದ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಿಂದ ಜಾರಿ ಬಿದ್ದು ಪತನಗೊಂಡಿರುವ ಘಟನೆ ಇಂದು ಸಂಜೆ ನಡೆದಿದೆ.

 Sharesee more..