Sunday, Aug 18 2019 | Time 04:52 Hrs(IST)
Sports Share

ಆಲ್‌ ಆಸ್ಟ್ರೇಲಿಯಾ ಪಂದ್ಯಕ್ಕೆ 25 ಆಟಗಾರರ ಆಯ್ಕೆ

ಮೆಲ್ಬೋರ್ನ್‌, ಜು 14 (ಯಎನ್‌ಐ) ಈ ತಿಂಗಳ ಅಂತ್ಯದಲ್ಲಿ ನಡೆಯುವ ಆಲ್‌ ಆಸ್ಟ್ರೇಲಿಯನ್‌ ಪಂದ್ಯಾವಳಿಗಳಿಗೆ 25 ಆಸೀಸ್‌ ಆಟಗಾರರನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ರಾಷ್ಟ್ರೀಯ ಆಯ್ಕೆ ಸಮಿತಿ ಪ್ರಕಟಿಸಿದೆ.
25 ಆಟಗಾರರನ್ನು 12-12 ವಿಭಾಗ ಮಾಡಿ ಆಸ್ಟ್ರೇಲಿಯಾ ಹಾಗೂ ಆಸ್ಟ್ರೇಲಿಯಾ (ಎ) ತಂಡಗಳ ಜುಲೈ 23 ರಂದು ಪಂದ್ಯ ಆಡಿಸಲಾಗುತ್ತದೆ. ಈ ಪಂದ್ಯ ಪ್ರಥಮ ದರ್ಜೆಗೆ ಒಳಪಡುವುದಿಲ್ಲ. ಇಂಗ್ಲೆಂಡ್‌ ವಿರುದ್ಧ ಮುಂಬರುವ ಆ್ಯಶಸ್‌ ಸರಣಿಗೆ ತಂಡದ ಆಯ್ಕೆ ಸಲುವಾಗಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
"ಮುಂಬರುವ ಮಹತ್ವದ ಆ್ಯಶಸ್‌ ಸರಣಿ ಯಶಸ್ವಿಗಾಗಿ ಬಲಿಷ್ಟ ತಂಡ ಕಟ್ಟುವ ಸಲುವಾಗಿ ನಾವು ಅತ್ಯುತ್ತಮ ಲಯದಲ್ಲಿರುವ ಆಟಗಾರರ ತಂಡಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನ ಇದಾಗಿದೆ ಎಂದು ರಾಷ್ಟ್ರೀಯ ಆಯ್ಕೆ ಸಮಿತಿಯ ಟ್ರೆವೆರ್‌ ಹೋನ್ಸ್‌ ತಿಳಿಸಿದ್ದಾರೆ.
ಆಸ್ಟ್ರೇಲಿಯಾ 25 ಆಟಗಾರರು: ಕ್ಯಾಮರೊನ್‌ ಬ್ಯಾಂಕ್‌ಕ್ರಾಫ್ಟ್‌, ಜಾಕ್ಸನ್‌ ಬರ್ಡ್‌, ಜೋ ಬರ್ನ್ಸ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌, ಪೀಟರ್‌ ಹ್ಯಾಂಡ್ಸ್‌ಕೊಂಬ್‌, ಮಾರ್ಕುಸ್‌ ಹ್ಯಾರಿಸ್‌, ಜೋಶ್‌ ಹ್ಯಾಜಲ್‌ವುಡ್‌, ಜೋನ್‌ ಹೋಲೆಂಡ್‌, ಟ್ರಾವಿಸ್‌ ಹೆಡ್‌, ಉಸ್ಮಾನ್‌ ಖವಾಜ, ಮಾರ್ನುಸ್‌ ಲಂಬುಸ್‌ಚಗ್ನೆ, ನಥಾನ್‌ ಲಿಯಾನ್‌, ಮಿಚೆಲ್‌ ಮಾರ್ಷ್‌, ಮಿಚೆಲ್‌ ನೇಸರ್‌, ಟಿಮ್‌ ಪೈನ್‌, ಕುರ್ಟಿಸ್ ಪ್ಯಾಟರ್ಸನ್‌, ಜೇಮ್ಸ್‌ ಪ್ಯಾಟಿನ್ಸನ್‌, ವಿಲ್‌ ಪುವೋಸ್ಕಿ, ಪೀಟರ್‌ ಸಿಡ್ಲೆ, ಸ್ಟೀವ್‌ ಸ್ಮಿತ್‌, ಮಿಚೆಲ್‌ ಸ್ಟಾರ್ಕ್‌, ಕ್ರಿಸ್‌ ಟ್ರೆಮೈನ್, ಮ್ಯಾಥ್ಯೂ ವೇಡ್‌, ಡೇವಿಡ್‌ ವಾರ್ನರ್‌.
ಯುಎನ್‌ಐ ಆರ್‌ಕೆ 1010