Saturday, Jul 4 2020 | Time 17:21 Hrs(IST)
 • ಕರೋನಾ ಮಾರಿಗೆ ಹೆದರಿ ಊರುಗಳಿಗೆ ಪೇರಿ ಕಿತ್ತ ಜನತೆ !!
 • ಕುಲ್ಗಾಮ್‍ನಲ್ಲಿ ಮುಂದುವರೆದ ಕಾರ್ಯಾಚರಣೆ: ಎನ್‍ಕೌಂಟರ್‍ ನಲ್ಲಿ ಓರ್ವ ಉಗ್ರ ಹತ
 • ಮೈಸೂರು ನಗರದ ಅತಿ ಹಳೆಯ ಚೆಲುವಾಂಬ ಆಸ್ಪತ್ರೆ ಸೀಲ್‍ಡೌನ್‍
 • ಬೆಂಗಳೂರು ನಗರದಲ್ಲಿ ನಾಳೆ ಸಂಪೂರ್ಣ ಲಾಕ್‌ಡೌನ್; ಸಾರ್ವಜನಿಕರ ಸಹಕಾರಕ್ಕೆ ಆಯುಕ್ತರ ಮನವಿ
 • ಆಫ್ಘಾನಿಸ್ತಾನ: ಬಾಂಬ್‍ಗಳನ್ನು ಹೂತಿಟ್ಟು ಸ್ಫೋಟಿಸಲು ಯತ್ನಿಸಿದ ಆರು ತಾಲಿಬಾನ್ ಉಗ್ರರು ಬಲಿ
 • ಚೈನಾ ಹೆಸರು ಹೇಳಲು ಮೋದಿ ಹಿಂಜರಿಯುತ್ತಿದ್ದಾರೆ: ಒವೈಸಿ
 • ಐಟಿಆರ್ ಸಲ್ಲಿಕೆ, ನ, 30 ವರೆಗೆ ದಿನಾಂಕ ವಿಸ್ತರಣೆ
 • ಹೆಚ್ಚಿದ ಕರೋನ ಸೋಂಕು, ಜನರ ಜೀವ ಉಳಿಸುವಲ್ಲಿ ಸರ್ಕಾರ ವಿಫಲ: ಎಚ್ ಕೆ ಪಾಟೀಲ್
 • ಬೆಂಗಳೂರಿನಲ್ಲಿ ಹೆಚ್ಚಿದ ಕರೊನಸೋಂಕು, ಸೋಮವಾರ ಮತ್ತೆ ಶಾಸಕರ ಸಭೆ
 • ಮಗನನ್ನು ಎನ್ ಕೌಂಟರ್ ನಡೆಸಿ ಕೊಂದು ಹಾಕಿ; ಪಾತಕಿ ವಿಕಾಸ್ ದುಬೆ ತಾಯಿಯಿಂದ ಪೊಲೀಸರಿಗೆ ಮನವಿ
 • ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ
 • ನಿವೃತ್ತಿ ಪ್ರಕಟಿಸಿದ ಬ್ಯಾಡ್ಮಿಂಟನ್ ದಿಗ್ಗಜ
 • ನಾಯಿ ಮಾಂಸ ಮತ್ತು ಅದರ ಮಾರಾಟಕ್ಕೆ ನಾಗಾಲ್ಯಾಂಡ್ ಸರ್ಕಾರ ನಿಷೇಧ
 • ಕಾನ್ಪುರ ಪೊಲೀಸರ ಹತ್ಯೆ: ಕುಖ್ಯಾತ ಅಪರಾಧಿ ವಿಕಾಸ್ ದುಬೆ ಇನ್ನೂ ಪತ್ತೆ ಇಲ್ಲ
 • ರಷ್ಯಾ; ಸಂವಿಧಾನ ತಿದ್ದುಪಡಿಗಳು ಇಂದಿನಿಂದ ಜಾರಿಗೆ
Sports Share

ಆಸ್ಟ್ರೇಲಿಯನ್ ಓಪನ್: ಜೊಕೊವಿಚ್ ಪ್ರಿ ಕ್ವಾರ್ಟರ್ ಫೈನಲ್ ಗೆ

ಮೆಲ್ಬೊರ್ನ್, ಜ.24 (ಯುಎನ್ಐ)- ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಸರ್ಬಿಯಾದ ನೋವಾಕ್ ಜೊಕೊವಿಚ್, ಮಿಲ್ಲೋಸ್ ರೋನಿಕ್ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸ್ಟಾರ್ ಆಟಗಾರ ಜೊಕೊ 6-3, 6-2, 6-2 ರಿಂದ ಜಪಾನ್ ನ ಯೋಶಿಹಿಟೊ ನಿಶಿಯೋಕಾ ವಿರುದ್ಧ ಒಂದು ಗಂಟೆ 25 ನಿಮಿಷದ ಪಂದ್ಯದಲ್ಲಿ ಜಯ ಸಾಧಿಸಿದರು. ಏಕಪಕ್ಷೀಯ ಪಂದ್ಯದಲ್ಲಿ ಸರ್ಬಿಯಾ ಆಟಗಾರ ಮನಮೋಹಕ ಪ್ರದರ್ಶನ ನೀಡಿ ಗಮನ ಸೆಳೆದರು.

2008, 2011, 2012, 2013, 2015, 2016, 2019ರಲ್ಲಿ ನೋವಾಕ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು.

ಇನ್ನೊಂದು ಪಂದ್ಯದಲ್ಲಿ ಕೆನಡಾದ ಮಿಲೋಸ್ ರೋನಿಕ್ 7-5, 6-4, 7-6 ರಿಂದ ಗ್ರೀಸ್ ನ ಸ್ಟೆಫಾನೊಸ್ ಸಿಟ್ಸಿಪಾಸ್ ಅವರನ್ನು 2 ಗಂಟೆ 30 ನಿಮಿಷದ ಪಂದ್ಯದಲ್ಲಿ ಗೆಲುವು ಸಾಧಿಸಿದರು. ರೋನಿಕ್ ತಮಗಿಂತ ಹೆಚ್ಚಿನ ಶ್ರೇಯಾಂಕಿತ ಆಟಗಾರರನ್ನು ಮಣಿಸಿ ಅಬ್ಬರಿಸಿದರು.

ಉಳಿದಂತೆ ಮರೀನ್ ಸಿಲಿಕ್ 6-7, 6-4, 6-0, 5-7, 6-3 ರಿಂದ ರಾಬರ್ಟೊ ಬೌಟಿಸ್ಟಾ ಅಗುಟ್ ವಿರುದ್ಧ, ಇಟಲಿಯ ಫ್ಯಾಬಿಯೊ ಫಾಗ್ನಿನಿ 7-6, 6-2, 6-3 ರಿಂದ ಅರ್ಜೆಂಟೀನಾದ ಗೈಡೋ ಪೆಲ್ಲಾ ವಿರುದ್ಧ ಜಯ ಸಾಧಿಸಿದರು.

ಯುಎನ್ಐ ವಿಎನ್ಎಲ್ 1932