Friday, Feb 28 2020 | Time 09:48 Hrs(IST)
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Sports Share

ಆಸ್ಟ್ರೇಲಿಯನ್ ಓಪನ್: ಸೆರೆನಾ, ಒಸಾಕಗೆ ನಿರಾಸೆ

ಮೆಲ್ಬೊರ್ನ್, ಜ.24 (ಯುಎನ್ಐ)- ದಾಖಲೆಯ ಗ್ರ್ಯಾನ್ ಸ್ಲ್ಯಾಮ್ ವಿಜೇತೆ ಅಮೆರಿಕದ ಸೆರೆನಾ ವಿಲಿಯಮ್ಸ್ ಹಾಗೂ ಮೂರನೇ ಶ್ರೇಯಾಂಕಿತ ಜಪಾನ್ ನ ನವೋಮಿ ಒಸಾಕ ಅವರು ಆಸ್ಟ್ರೇಲಿಯನ್ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಮೂರನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದಾರೆ.

ಶುಕ್ರವಾರ ರೋಡ್ ಲಾವೇರ್ ಅರೇನಾದಲ್ಲಿ ನಡೆದ ಮಹಿಳೆಯ ಸಿಂಗಲ್ಸ್ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ 4-6, 7-6, 5-7 ರಿಂದ ಚೀನಾದ ಕ್ವಿಂಗ್ ವಾಂಗ್ ವಿರುದ್ಧ ನಿರಾಸೆ ಅನುಭವಿಸಿದ್ದರು. 24ನೇ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಸೆರೆನಾ ಆಸೆಗೆ ಪೆಟ್ಟು ಬಿದ್ದಿದೆ.

2003, 2005, 2007, 2009, 2010, 2015, 2017ರಲ್ಲಿ ಸೆರೆನಾ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಇದೇ ಟೂರ್ನಿಯಲ್ಲಿ ಸೆರೆನಾ ಕೊನೆಯ ಬಾರಿಗೆ ಗ್ರ್ಯಾನ್ ಸ್ಲ್ಯಾಮ್ ಟ್ರೋಫಿಗೆ ಮುತ್ತಿಟ್ಟಿದ್ದರು.

ಒಸಾಕ 3-6, 4-6 ರಿಂದ ಅಮೆರಿಕದ ಕೊಕೊ ಗೌಫ್ ರಿಂದ ಸೋಲು ಕಂಡರು. ಒಂದುಬ ಗಂಟೆ ಏಳು ನಿಮಿಷ ನಡೆದ ಪಂದ್ಯದಲ್ಲಿ ನಿರಾಸೆ ಕಂಡರು.

ಆಸ್ಟ್ರೇಲಿಯಾದ ಆಶ್ಲೇ ಬಾರ್ಟಿ 6-3, 6-2 ರಿಂದ ಎಲೆನಾ ರೈಬಕಿನಾ ಅವನರನ್ನು ಮಣಿಸಿ 16ನೇ ಸುತ್ತಿಗೆ ಅರ್ಹತೆ ಪಡೆದರು.

ಯುಎನ್ಐ ವಿಎನ್ಎಲ್ 1945
More News
ಮತ್ತೊಂದು ದಾಖಲೆಯ ಸನಿಹದಲ್ಲಿ ಇಶಾಂತ್ ಶರ್ಮಾ

ಮತ್ತೊಂದು ದಾಖಲೆಯ ಸನಿಹದಲ್ಲಿ ಇಶಾಂತ್ ಶರ್ಮಾ

27 Feb 2020 | 8:25 PM

ನವದೆಹಲಿ, ಫೆ.27 (ಯುಎನ್ಐ)- ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡು ಮುಖಭಂಗ ಅನುಭವಿಸಿದೆ. ಈ ಪಂದ್ಯದಲ್ಲಿ ಸ್ಟಾರ್ ಬೌಲರ್ ಇಶಾಂತ್ ಶರ್ಮಾ ಬಿಗುವಿನ ದಾಳಿ ನಡೆಸಿ ಗಮನ ಸೆಳೆದಿದ್ದರು. ಶನಿವಾರದಿಂದ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಮತ್ತೊಂದು ಮೈಲುಗಲ್ಲು ತಲುಪುವ ಕನಸಿನಲ್ಲಿದ್ದಾರೆ.

 Sharesee more..

ತಂಡದ ಲಯ ಮುಂದುವರೆಸುವ ಅವಶ್ಯಕತೆ ಇದೆ: ತಾನಿಯಾ

27 Feb 2020 | 7:26 PM

 Sharesee more..

ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ ಜೊಕೊವಿಚ್

27 Feb 2020 | 7:08 PM

 Sharesee more..