Friday, Sep 25 2020 | Time 11:49 Hrs(IST)
 • ಡ್ರಗ್ಸ್ ಪ್ರಕರಣ: ಮತ್ತೋರ್ವ ಡ್ರಗ್ ಪೆಡ್ಲರ್ ಬಂಧನ
 • ಡ್ರಗ್ಸ್ ಪ್ರಕರಣ: ವಿಚಾರಣೆಗೆ ಕರೆದ ಮಾತ್ರಕ್ಕೆ ನಾನು ಅಪರಾಧಿಯಲ್ಲ; ನಟಿ ಅನುಶ್ರೀ
 • ಕೃಷಿ ಸಂಬಂಧಿತ ಮಸೂದೆಗೆ ವಿರೋಧ; ಹೆದ್ದಾರಿ ತಡೆದು ಅನ್ನದಾತರ ಆಕ್ರೋಶ
 • ಬಿಹಾರ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಪ್ರಕಟ ಸಾಧ್ಯತೆ
 • ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 86 ಸಾವಿರ ಹೊಸ ಕೊರೊನಾ ಪ್ರಕರಣಗಳು, 1141 ಸಾವು!
 • ಸೆನ್ಸೆಕ್ಸ್ 400 ಅಂಕ ಚೇತರಿಕೆ
 • ಶೋಪಿಯಾನ್ ಮಿನಿ ಸಚಿವಾಲಯದ ಭದ್ರತೆಯಲ್ಲಿದ್ದ ಸೈನಿಕನ ಮೇಲೆ ಉಗ್ರರ ದಾಳಿ
 • ಕೊವಿಡ್-19 : 3 ಕೋಟಿ 20 ಲಕ್ಷ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
 • ಅವಿಶ್ವಾಸ ನಿರ್ಣಯ: ಯಾವಾಗ ಬೇಕಾದರೂ ಚರ್ಚೆಗೆ ಸಿದ್ಧ-ಸಿದ್ದರಾಮಯ್ಯ
 • ಐಪಿಎಲ್‌ 2020: ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ ಸೋಲಿನ ಜವಾಬ್ದಾರಿ ಹೊತ್ತ ವಿರಾಟ್‌ ಕೊಹ್ಲಿ
 • ಐಪಿಎಲ್‌ 2020: ನಿಧಾನಗತಿಯಲ್ಲಿ ಬೌಲಿಂಗ್‌ ಮಾಡಿದ್ದಕ್ಕಾಗಿ ಕೊಹ್ಲಿಗೆ 12 ಲಕ್ಷ ರೂ ದಂಡ
 • ಕೆ ಎಲ್‌ ರಾಹುಲ್‌ ಅವರ ಎರಡು ಕ್ಯಾಚ್‌ ಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ
 • ಪಂಜಾಬ್, ಹರಿಯಾಣದಲ್ಲಿ ರೈತರ ಬಂದ್ ಗೆ ಉತ್ತಮ ಪ್ರತಿಕ್ರಿಯೆ
Entertainment Share

ಆಸ್ಟ್ರೇಲಿಯಾಗೆ ‘ಗಂಟುಮೂಟೆ’

ಬೆಂಗಳೂರು, ಜುಲೈ 22 (ಯುಎನ್ಐ) ಅಮೇಯುಕ್ತಿ ಸ್ಟುಡಿಯೊಸ್ ನಿರ್ಮಿಸಿರುವ ರೂಪಾ ರಾವ್ ನಿರ್ದೇಶನದ ‘ಗಂಟುಮೂಟೆ’ ಕನ್ನಡ ಚಿತ್ರ.ರಾಜ್ಯದಲ್ಲಿ ಬಿಡುಗಡೆಯಾಗುವ ಮುನ್ನವೇ ವಿದೇಶದಲ್ಲಿ ಸದ್ದು ಮಾಡುತ್ತಿದೆ

ತೇಜು ಬೆಳವಾಡಿ ಹಾಗು ನಿಶ್ಚಿತ್ ಕೊರೋಡಿ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ, ನ್ಯೂಯಾರ್ಕ್ ಫಿಲಂ ಫೆಸ್ಟಿವಲ್ ನಲ್ಲಿ 'ಬೆಸ್ಟ್ ಸ್ಕ್ರೀನ್ ಪ್ಲೇ' ಗೆದ್ದು, ಕೆನಡಾ ಫಿಲಂ ಅವಾರ್ಡ್ಸ್ ನಲ್ಲಿ ಪ್ರದರ್ಶನ ಗೊಂಡು, ಪ್ರಸಿದ್ಧ ನಟಿ ಸೀಮಾ ಬಿಸ್ವಾಸ್, ಆದಿಲ್ ಹುಸೈನ್ ಮುಂತಾದವರಿಂದ ಪ್ರಶಂಸೆ ಗಳಿಸಿ ಇದೀಗ ಆಸ್ಟ್ರೇಲಿಯಾದತ್ತ ಪಯಣಿಸಿದೆ ಇಂಡಿಯನ್ ಫಿಲಂ ಫೆಸ್ಟಿವಲ್ ಆಫ್ ಮೆಲ್ಬೋರ್ನ್ ನಲ್ಲಿ, ಆಸ್ಟ್ರೇಲಿಯನ್ ಪ್ರೀಮಿಯರ್ ಗೆ ಆಯ್ಕೆ ಗೊಂಡ ಈ ವರ್ಷದ ಏಕೈಕ ಕನ್ನಡ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹಾಗೆಯೇ ಇಟಲಿಯ ರೋಮ್ ನಲ್ಲಿ ನಡೆಯುವ ಸೋಶಿಯಲ್ ವರ್ಲ್ಡ್ ಫಿಲಂ ಫೆಸ್ಟಿವಲ್ ನಲ್ಲಿ ಯಂಗ್ ಇಂಡೆಪೆಂಡಂಟ್ ಸಿನಿಮಾ ಆ ದಿ ವರ್ಲ್ಡ್ ವಿಭಾಗದಲ್ಲಿ ಆಯ್ಕೆಯಾಗಿರುವ ಏಕೈಕ ಕನ್ನಡ ಸಿನಿಮಾ ಇದಾಗಿದೆ.

90 ರ ದಶಕದಲ್ಲಿ, 'ಸಿನಿಮಾ'ದ ಹಾಗೆ 'ಜೀವನ' ಇರುತ್ತದೆ ಎಂದು ಭ್ರಮಿಸುವ 17ರ ರ ಹರೆಯದ ಹುಡುಗಿ 'ಮೀರಾ' ಳ ನಿಜ ಪ್ರಪಂಚದೆಡೆಗಿನ ಪ್ರಯಾಣವೇ 'ಗಂಟುಮೂಟೆ' ಯ ಕಥಾ ಹಂದರ.

ವಿದ್ಯಾಭ್ಯಾಸದ ಒತ್ತಡ, ಶಾಲೆಯಲ್ಲಿ, ಶಾಲೆಯ ಹೊರಗೆ ಹಿಂಸಿಸೋ ರಗಳೆಗಳು, ಮಾರ್ಕ್ಸ್ ಗಾಗಿ ನಡೆಯೋ ಸ್ಪರ್ಧೆ, ತರಲೆ, ಹುಡುಗಿಯರಿಗಾಗಿ ನಡೆಯೋ ಗಲಾಟೆ - ಇವುಗಳ ನಡುವೆ ಕಾಡೋ ಮೊದಲ ಉತ್ಕಟ ಪ್ರೇಮ, ಇವೆಲ್ಲೆದರ ಮಧ್ಯೆ ಅರಳಿರುವುದೇ 'ಗಂಟುಮೂಟೆ'.

ಇತ್ತೀಚಿಗೆ ಈ ಸಿನಿಮಾದ ಕುತೂಹಲ ಭರಿತ ಎರಡು ಟೀಸರ್ ಬಿಡುಗಡೆ ಆಗಿ, ಎಲ್ಲರ ಮೆಚ್ಚಿಗೆಗೆ ಪಾತ್ರವಾಗಿದೆ. ಪ್ರಪಂಚದ ಸುತ್ತಲೂ ಸದ್ದು ಮಾಡಿ ಕನ್ನಡ ಚಲನಚಿತ್ರಗಳ ಬಗೆಗೆ ಅಂತರಾಷ್ಟ್ರೀಯರ ಗಮನ ಸೆಳೆಯುವಂತೆ ಮಾಡುತ್ತಿರುವ 'ಗಂಟುಮೂಟೆ' ಸಧ್ಯದಲ್ಲೇ ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ.

ಯುಎನ್ಐ ಎಸ್ಎ ಎಸ್ಎಚ್ 1727