Saturday, Jul 4 2020 | Time 09:58 Hrs(IST)
  • ಅಮೆರಿಕದಲ್ಲಿ ಲಘು ವಿಮಾನ ಅಪಘಾತ- ನಾಲ್ವರ ಸಾವು
  • ನೀಟ್, ಜೆಇಇ, ಜೆ ಇಇ ಅಡ್ವಾನ್ಸ್ ಪರೀಕ್ಷೆಗಳು ಸೆಪ್ಟಂಬರ್ ಗೆ ಮುಂದೂಡಿಕೆ
  • ಪಾಕಿಸ್ತಾನ; ಸಿಖ್ ಯಾತ್ರಾರ್ಥಿಗಳಿದ್ದ ವ್ಯಾನ್ ಗೆ ರೈಲು ಡಿಕ್ಕಿ , ಸಾವಿನ ಸಂಖ್ಯೆ ೨೨ಕ್ಕೆ ಏರಿಕೆ
  • ಉತ್ತರ ಕೆರೊಲಿನಾದಲ್ಲಿ ರಸ್ತೆ ಅಪಘಾತ- 5 ಮಂದಿ ಸಾವು
  • ತಮಿಳುನಾಡಿನಲ್ಲಿ ಒಂದೇ ದಿನ 4329 ಕೊರೊನಾ ಸೋಂಕು ಪ್ರಕರಣ
Sports Share

ಆಸ್ಟ್ರೇಲಿಯಾದ ಎಮಿಲಿ ಸ್ಮಿತ್‌ 12 ತಿಂಗಳು ಅಮಾನತು

ಸಿಡ್ನಿ, ನ 18 (ಯುಎನ್‌ಐ) ಆಸ್ಟ್ರೇಲಿಯಾದ ದೇಶಿ ಮಹಿಳಾ ಕ್ರಿಕೆಟ್‌ ಲೀಗ್‌ ನ ಹೊಬಾರ್ಟ್‌ ಹರಿಕೇನ್ಸ್‌ ತಂಡದ ವಿಕೆಟ್‌ ಕೀಪರ್ ಎಮಿಲಿ ಸ್ಮಿತ್‌ ಅವರನ್ನು ಕ್ರಿಕೆಟ್‌ ಆಸ್ಟ್ರೇಲಿಯಾ 12 ತಿಂಗಳು ಅಮಾನತು ಮಾಡಿದೆ.
ನವೆಂಬರ್‌ 2ರಂದು ನಡೆದ ಸಿಡ್ನಿ ಥಂಡರ್ಸ್‌ ಮತ್ತು ಹೊಬಾರ್ಟ್‌ ಹರಿಕೇನ್ಸ್‌ ಮಹಿಳಾ ತಂಡಗಳ ಪಂದ್ಯಕ್ಕೂ ಮುನ್ನ ಅಧಿಕೃತವಾಗಿ ಹರೀಕೇನ್ಸ್‌ ತಂಡದ ಆಡುವ 11 ಆಟಗಾರ್ತಿಯರ ಪಟ್ಟಿ ಬಿಡುಗಡೆ ಮಾಡುವ ಒಂದು ಗಂಟೆ ಮೊದಲೇ ಎಮಿಲಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪ್ಲೇಯಿಂಗ್‌ ಇಲೆವೆನ್‌ ಪ್ರಕಟಿಸಿ ಸಮಸ್ಯೆಗೆ ಸಿಲುಕಿದ್ದರು.
ಈ ಮೂಲಕ ಕ್ರಿಕೆಟ್‌ ಆಸ್ಟ್ರೇಲಿಯಾದ ಭ್ರಷ್ಟಾಚಾರ ತಡೆ ಆರ್ಟಿಕಲ್‌ 2.3.2 ನಿಯಮವನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಎಮಿಲಿ ವಿರುದ್ಧ 12 ತಿಂಗಳ ನಿಷೇಧವನ್ನು ಜಾರಿಗೊಳಿಸಲಾಗಿದೆ.
"ತಂಡದ ಆಂತರಿಕ ವಿಚಾರಗಳನ್ನು ಹೊರಗಿನ ಯಾವುದೇ ವ್ಯಕ್ತಿಗೆ ಬಹಿರಂಗ ಪಡಿಸಿದ್ದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗುವಂತಾಗುತ್ತದೆ. ಈ ರೀತಿ ಸೋರಿಕೆಯಾದ ಮಾಹಿತಿ ಬೆಟ್ಟಿಂಗ್‌ಗೆ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ," ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
24 ವರ್ಷದ ಮಹಿಳಾ ಕ್ರಿಕೆಟರ್‌, ಮುಂದಿನ 12 ತಿಂಗಳ ನಿಷೇಧ ಅವಧಿಯಲ್ಲಿ ಯಾವುದೇ ರೀತಿಯ ಕ್ರಿಕೆಟ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಈ ನಿಟ್ಟಿನಲ್ಲಿ ಹಾಲಿ ಚಾಲ್ತಿಯಲ್ಲಿರುವ ಮಹಿಳಾ ರಾಷ್ಟ್ರೀಯ ಕ್ರಿಕೆಟ್‌ ಲೀಗ್‌ (ಡಬ್ಲ್ಯುಎನ್‌ಸಿಎಲ್‌) ಟೂರ್ನಿಯ ಉಳಿದೆಲ್ಲಾ ಪಂದ್ಯಗಳಿಂದ ಸ್ಮಿತ್‌ ಹೊರಬಿದ್ದಿದ್ದಾರೆ.
ಯುಎನ್‌ಐ ಆರ್ ಕೆ 2029