Friday, Dec 6 2019 | Time 21:05 Hrs(IST)
 • ಹೆಟ್ಮೇರ್, ಲೆವಿಸ್ ಸ್ಫೋಟಕ ಬ್ಯಾಟಿಂಗ್: ಭಾರತಕ್ಕೆೆ 208 ರನ್ ಕಠಿಣ ಗುರಿ
 • ಚಿತ್ರೋತ್ಸವ;; ಎರಡನೇ ದಿನದಂದು 43 ಚಿತ್ರಗಳ ಪ್ರದರ್ಶನ
 • ಅಯೋಧ್ಯಾ ಭೂ ವಿವಾದ; ನಾಲ್ಕು ಮರುಪರಿಶೀಲನಾ ಅರ್ಜಿ ಸಲ್ಲಿಕೆ
 • ಸೈನಿಕರಿಗಾಗಿ ಭವನ ನಿರ್ಮಾಣ,ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮ:ಮುಖ್ಯಮಂತ್ರಿ
 • “ಕೈಲಾಸ” ದೇಶ ಸೃಷ್ಟಿಸುವುದು ವೆಬ್ ಸೈಟ್ ಆರಂಭಿಸಿದಷ್ಟು ಸುಲಭವಲ್ಲ !
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧಿವಶ
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧವಶ
 • ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ 1023 ತ್ವರಿತ ನ್ಯಾಯಾಲಯ ಸ್ಥಾಪನೆ
 • ಇಂತಹ ಎನ್ ಕೌಂಟರ್ ಯುಪಿ, ದೆಹಲಿಯಲ್ಲೂ ನಡೆಯಲಿ : ಮಾಯಾವತಿ
 • ಮಂಡ್ಯ ವಿ ಸಿ ಫಾರಂನಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಆರಂಭ
 • ದಕ್ಷಿಣ ಏಷ್ಯಾ ಕ್ರೀಡಾಕೂಟ: ಕರ್ನಾಟಕದ ಶ್ರೀಹರಿ, ಲಿಖಿತ್ ಗೆ ಚಿನ್ನ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿರಿಲ್, ಅಶ್ಮಿತಾಗೆ ಚಿನ್ನದ ಪದಕ
 • ರಾಷ್ಟ್ರೀಯ ಪೊಲೀಸ್ ಸಮಾವೇಶ: ಪುಣೆಗೆ ಆಗಮಿಸಿದ ಅಮಿತ್ ಶಾ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆೆ ಚಿನ್ನ, ಬೆಳ್ಳಿ
 • ಡುಮ್ಕಾ ಖಜಾನೆ ಪ್ರಕರಣ: ಜಾರ್ಖಂಡ್ ಹೈ ಕೋರ್ಟ್‍ನಿಂದ ಲಾಲು ಪ್ರಸಾದ್ ಯಾದವ್‍ ಜಾಮೀನು ಅರ್ಜಿ ನಿರಾಕರಣೆ
Sports Share

ಆ್ಯಶಸ್‌ ಸರಣಿಗೆ ಮ್ಯಾಕ್ಸ್‌ವೆಲ್‌, ಸ್ಟೋಯಿನಿಸ್‌ ಇಲ್ಲ

ಮೆಲ್ಬೋರ್ನ್‌, ಜು 14 (ಯುಎನ್‌ಐ) ಮುಂದಿನ ಆ್ಯಶಸ್‌ ಸರಣಿ ನಿಮಿತ್ತ ಈ ತಿಂಗಳ ಅಂತ್ಯದಲ್ಲಿ ನಡೆಯುವ ಆಲ್‌ ಆಸ್ಟ್ರೇಲಿಯನ್‌ ಪಂದ್ಯಾವಳಿಗಳಿಗೆ 25 ಆಸೀಸ್‌ ಆಟಗಾರರನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ರಾಷ್ಟ್ರೀಯ ಆಯ್ಕೆ ಸಮಿತಿ ಪ್ರಕಟಿಸಿದ್ದು, ಐಸಿಸಿ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಮಾರ್ಕುಸ್ ಸ್ಟೋಯಿನಿಸ್‌ ಅವರನ್ನು ಮುಂದಿನ ಆ್ಯಶಸ್‌ ಸರಣಿಗೆ ಕೈ ಬಿಡಲಾಗಿದೆ.
ಒಟ್ಟಾರೆ 25 ಆಟಗಾರರಲ್ಲಿ ವಿಶ್ವಕಪ್‌ ಆಡಿದ ತಂಡದಿಂದ ಏಳು ಆಟಗಾರರು ಹಾಗೂ ಇಂಗ್ಲೆಂಡ್‌ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ(ಎ) ತಂಡದಿಂದ 15 ಆಟಗಾರರು ಹಾಗೂ ಇಂಗ್ಲೀಷ್‌ ಕೌಂಟಿ ಆಡುತ್ತಿರುವ ಹಿರಿಯ ವೇಗಿ ಪೀಟರ್‌ ಸಿಡ್ಲೆ ಹಾಗೂ ಬ್ಯಾಟ್ಸ್‌ಮನ್‌ ಕ್ಯಾಮೊರನ್‌ ಬ್ಯಾಂಕ್ರಾಪ್ಟ್‌ ಹಾಗೂ ಮಾರ್ನುಸ್‌ ಲಬುಸ್‌ಚಾಗ್ನೆ ಅವರನ್ನು ಪರಿಗಣಿಸಲಾಗಿದೆ.
25 ಆಟಗಾರರನ್ನು 12-12 ವಿಭಾಗ ಮಾಡಿ ಆಸ್ಟ್ರೇಲಿಯಾ ಹಾಗೂ ಆಸ್ಟ್ರೇಲಿಯಾ (ಎ) ತಂಡಗಳ ಜುಲೈ 23 ರಂದು ಪಂದ್ಯ ಆಡಿಸಲಾಗುತ್ತದೆ. ಈ ಪಂದ್ಯ ಪ್ರಥಮ ದರ್ಜೆಗೆ ಒಳಪಡುವುದಿಲ್ಲ. ಇಂಗ್ಲೆಂಡ್‌ ವಿರುದ್ಧ ಮುಂಬರುವ ಆ್ಯಶಸ್‌ ಸರಣಿಗೆ ತಂಡದ ಆಯ್ಕೆ ಸಲುವಾಗಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
"ಮುಂಬರುವ ಮಹತ್ವದ ಆ್ಯಶಸ್‌ ಸರಣಿ ಯಶಸ್ವಿಗಾಗಿ ಬಲಿಷ್ಟ ತಂಡ ಕಟ್ಟುವ ಸಲುವಾಗಿ ನಾವು ಅತ್ಯುತ್ತಮ ಲಯದಲ್ಲಿರುವ ಆಟಗಾರರ ತಂಡಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನ ಇದಾಗಿದೆ ಎಂದು ರಾಷ್ಟ್ರೀಯ ಆಯ್ಕೆ ಸಮಿತಿಯ ಟ್ರೆವೆರ್‌ ಹೋನ್ಸ್‌ ತಿಳಿಸಿದ್ದಾರೆ.
ಆಸ್ಟ್ರೇಲಿಯಾ 25 ಆಟಗಾರರು:
ಕ್ಯಾಮರೊನ್‌ ಬ್ಯಾಂಕ್‌ಕ್ರಾಫ್ಟ್‌, ಜಾಕ್ಸನ್‌ ಬರ್ಡ್‌, ಜೋ ಬರ್ನ್ಸ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌, ಪೀಟರ್‌ ಹ್ಯಾಂಡ್ಸ್‌ಕೊಂಬ್‌, ಮಾರ್ಕುಸ್‌ ಹ್ಯಾರಿಸ್‌, ಜೋಶ್‌ ಹ್ಯಾಜಲ್‌ವುಡ್‌, ಜೋನ್‌ ಹೋಲೆಂಡ್‌, ಟ್ರಾವಿಸ್‌ ಹೆಡ್‌, ಉಸ್ಮಾನ್‌ ಖವಾಜ, ಮಾರ್ನುಸ್‌ ಲಂಬುಸ್‌ಚಗ್ನೆ, ನಥಾನ್‌ ಲಿಯಾನ್‌, ಮಿಚೆಲ್‌ ಮಾರ್ಷ್‌, ಮಿಚೆಲ್‌ ನೇಸರ್‌, ಟಿಮ್‌ ಪೈನ್‌, ಕುರ್ಟಿಸ್ ಪ್ಯಾಟರ್ಸನ್‌, ಜೇಮ್ಸ್‌ ಪ್ಯಾಟಿನ್ಸನ್‌, ವಿಲ್‌ ಪುವೋಸ್ಕಿ, ಪೀಟರ್‌ ಸಿಡ್ಲೆ, ಸ್ಟೀವ್‌ ಸ್ಮಿತ್‌, ಮಿಚೆಲ್‌ ಸ್ಟಾರ್ಕ್‌, ಕ್ರಿಸ್‌ ಟ್ರೆಮೈನ್, ಮ್ಯಾಥ್ಯೂ ವೇಡ್‌, ಡೇವಿಡ್‌ ವಾರ್ನರ್‌.
ಯುಎನ್‌ಐ ಆರ್‌ಕೆ 1336