Wednesday, Aug 21 2019 | Time 23:52 Hrs(IST)
 • ಚಿದಂಬರಂ ಬಂಧನ: ಪ್ರಧಾನಿ ಮೋದಿ ಚುನಾವಣಾ ಭರವಸೆ ಈಡೇರಿಕೆ
 • ಐ ಎನ್ ಎಕ್ಸ್ ಮೀಡಿಯಾ ಪ್ರಕರಣ : ಮಾಜಿ ಸಚಿವ ಪಿ ಚಿದಂಬರಂ ಸಿಬಿಐ ವಶಕ್ಕೆ
 • ಶ್ರೀನಗರದಲ್ಲಿ ಶುಕ್ರವಾರ ಸಾರ್ವಜನಿಕರನ್ನು ಭೇಟಿ ಮಾಡಲಿರುವ ರಾಜ್ಯಪಾಲರ ಸಲಹೆಗಾರ
 • ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ವಶಕ್ಕೆ ಪಡೆದ ಸಿಬಿಐ
 • ಮುಂದಿನ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ರಾಜೀವ್ ಗೌಬಾ ನೇಮಕ
 • ರಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ – ಅಜಿತ್ ದೋವಲ್ ಮಾತುಕತೆ
 • ನಾನು ಓಡಿಹೋಗಿಲ್ಲ, ನ್ಯಾಯದಿಂದ ರಕ್ಷಣೆ ಪಡೆಯಲು ಕೆಲಸ ಮಾಡುತ್ತಿದ್ದೇನೆ: ಚಿದಂಬರಂ
 • ಆರ್ ಟಿಐ ಕಾರ್ಯಕರ್ತ ಬಾಳಿಗ ಹತ್ಯೆ ಪ್ರಕರಣ; ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ
 • ಎಂಡಿಎಸ್ ಶುಲ್ಕ ತಾರತಮ್ಯ; ನಾಲ್ಕು ವಾರಗಳಲ್ಲಿ ತೀರ್ಮಾನ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
 • ಸರ್ಕಾರಿ ವಾಹನಗಳಿಗೆ ಮಹಿಳಾ ಚಾಲಕರ ನೇಮಕ; ಕೇರಳ ಸಂಪುಟ ಸಮ್ಮತಿ
 • ಐಎನ್ ಎಕ್ಸ್ ಮೀಡಿಯಾ ಪ್ರಕರಣ; ಚಿದಂಬರಂ ವಿರುದ್ಧ ಸಿಬಿಐ, ಇಡಿ ಲುಕ್ ಔಟ್ ನೋಟೀಸ್ ಜಾರಿ
 • ಕೆಲಸ ಸರಿಯಾಗಿ ನಿರ್ವಹಿಸಲಾಗದಿದ್ದರೆ, ಬೇರೆಡೆಗೆ ವರ್ಗ ಮಾಡಿಸಿಕೊಳ್ಳಿ ; ಇಂಜಿನಿಯರ್ ಗಳಿಗೆ ಮೇಯರ್ ತರಾಟೆ
 • ಯಾಂತ್ರೀಕೃತ ಮೀನುಗಾರಿಕೆ ಬೋಟ್‍ಗಳಿಗೆ ತೆರಿಗೆ ರಹಿತ ಡೀಸೆಲ್ ಹೆಚ್ಚಳ: ಮುಖ್ಯಮಂತ್ರಿ
 • ಅಯೋಧ್ಯೆ ಪ್ರಕರಣ: ರಾಮ ಜನ್ಮಭೂಮಿಯಲ್ಲಿ ಜನರ ನಂಬಿಕೆ ಸಾಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ
 • ಪಕ್ಷೇತರ ಶಾಸಕ ಅನಂತ್ ಸಿಂಗ್ ವಿರುದ್ಧ ಲುಕ್ಔಟ್ ನೋಟಿಸ್
Sports Share

ಆ್ಯಷಸ್ ಸರಣಿಗೆ ಖವಾಜ ಗುಣಮುಖರಾಗುವ ನಿರೀಕ್ಷೆ: ಪೇನ್

ಮೆಲ್ಬೊರ್ನ್, ಜು 22 (ಯುಎನ್ಐ)- ಆಗಸ್ಟ್ ಒಂದರಿಂದ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಆಷ್ಯಸ್ ಸರಣಿಗೂ ಮುನ್ನ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಉಸ್ಮಾನ್ ಖವಾಜ ಗಾಯದಿಂದ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ನಾಯಕ ಟಿಮ್ ಪೇನ್ ತಿಳಿಸಿದ್ದಾರೆ.
ವಿಶ್ವಕಪ್ ಲೀಗ್ ಹಂತದ ಪಂದ್ಯದಲ್ಲಿ ಖವಾಜ ಅವರಿಗೆ ಸ್ನಾಯು ಸೆಳೆತ ಉಂಟಾಗಿತ್ತು. ಖವಾಜ ಲಭ್ಯತೆಯ ಬಗ್ಗೆ ವಿವರಿಸಿದ ಪೇನ್, ಮೊದಲ ಟೆಸ್ಟ್ ನಲ್ಲಿ ಅವರು ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಆ್ಯಷಸ್ ಸರಣಿ ಆಗಸ್ಟ್ 1 ರಿಂದ ಸೆಪ್ಟೆಂಬರ್ 16ರ ವರೆಗೆ ನಡೆಯಲಿದೆ. ಇಂಗ್ಲೆಂಡ್ ಸರಣಿಗೆ ಆತಿಥ್ಯ ವಹಿಸಲಿದೆ.
'ಮೊದಲ ಪಂದ್ಯದಿಂದ ಖವಾಜ ಹೊರ ಉಳಿಯುತ್ತಾರೆ ಎಂಬದು ನನಗೆ ಅನಿಸದು. ಗಾಯ ಚೇತರಿಕೆ ಹಂತದಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನನಗೆ ಅನಿಸಿದ ಹಾಗೆ ಖವಾಜ ಮೊದಲ ಟೆಸ್ಟ್ ನಲ್ಲಿ ಆಡಬಲ್ಲರು ಎಂದು ಹೇಳಿದ್ದಾರೆ.


ಈ ಸರಣಿಯಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಲು ಪ್ಲಾನ್ ಮಾಡಿಕೊಂಡಿವೆ. ಆಟಗಾರರು ತಂಡಕ್ಕೆ ಸೇರಿಕೊಳ್ಳಲು ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ತಂಡದ ಕೌಶಲ್ಯ ಬಗ್ಗೆ ಅರಿಯಲು ಒಳ್ಳೆಯ ಅವಕಾಶ. ಸರಣಿ ಆರಂಭವಾದಾಗ ನಾವು ಇರುವ ಸ್ಥಳ ಹಾಗೂ ಸರಣಿ ಮುಕ್ತಾಯವಾಗುವಾಗ ನಾವು ಮಾಡಬೇಕಿದ್ದ ತಯಾರಿ ತಿಳಿಯುತ್ತದೆ ಎಂದು ಪೇನ್ ಹೇಳಿದ್ದಾರೆ.
ಯುಎನ್ಐ ವಿಎನ್ಎಲ್ ಕೆಎಸ್ವಿ 1808