Friday, Aug 7 2020 | Time 17:20 Hrs(IST)
 • ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡುವ ವಿಶ್ವಾಸ ಹೊರಹಾಕಿದ ಮಿಶ್ರಾ
 • ಕ್ವಾರಂಟೈನ್‌ ನಿಯಮ ಉಲ್ಲಂಘನೆ; ಪ್ರತಿ ಸಾವಿರ ವ್ಯಕ್ತಿಗೆ ಇಬ್ಬರ ಮೇಲೆ ಎಫ್‌ಐಆರ್‌ ದಾಖಲು
 • ಕಾಂಗ್ರೆಸ್‌-ಚೀನಾ ಸರ್ಕಾರದ ಒಡಂಬಡಿಕೆ ಸುಪ್ರೀಂಕೋರ್ಟ್‌ಗೆ ಕೂಡ ಅಚ್ಚರಿ ತಂದಿದೆ; ನಡ್ಡಾ
 • ಡಾ ಕೆ ಕಸ್ತೂರಿರಂಗನ್ ವಿವಾದಾತೀತರು: ತಪಸ್ಸಿನಂತೆ ನೂತನ ಶಿಕ್ಷಣ ನೀತಿ ರೂಪಿಸಿದ್ದಾರೆ: ಪ್ರಧಾನಿ ನರೇಂದ್ರ ಮೋದಿ
 • ಕೊಂಕಣ ರೈಲ್ವೆಯಿಂದ ರೈಲುಗಳ ಮಾರ್ಗ ಬದಲಾವಣೆ
 • ಕೇರಳದಲ್ಲಿ ಭಾರೀ ಭೂಕುಸಿತ: 10 ಮಂದಿ ಸಾವು, 85 ಮಂದಿ ನಾಪತ್ತೆ
 • ಕೊವಿಡ್‍: ದೇಶದಲ್ಲಿ ಚೇತರಿಕೆ ಪ್ರಮಾಣ ಶೇ 68ಕ್ಕೆ ಏರಿಕೆ: ಸಾವಿನ ಪ್ರಮಾಣ ಶೇ2 05ಕ್ಕೆ ಇಳಿಕೆ
 • ಕೊಡಗು ಜಿಲ್ಲೆಯಲ್ಲಿ ಕೊರೊನಾಗೆ ಮಹಿಳೆ ಬಲಿ: ಸಾವಿನ ಸಂಖ್ಯೆ 11ಕ್ಕೇರಿಕೆ
 • ಗಾಂಜಾ ಮಾರಾಟ ಯತ್ನ: ಒಡಿಶಾ ಮೂಲದ ವ್ಯಕ್ತಿ ಬಂಧನ
 • ಧಾರವಾಡ: ನೀರಿನಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಶೋಧ ಕಾರ್ಯ ಮುಂದುವರಿಕೆ
 • ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್‍ನಿಂದ ಕದನವಿರಾಮ ಉಲ್ಲಂಘನೆ: ಮೂವರು ನಾಗರಿಕರಿಗೆ ಗಾಯ
 • ಶಬನಮ್ ಡೆವಲಪರ್ಸ್ ನ ಶೂಟ್‍ಔಟ್ ಪ್ರಕರಣ; 13 ವರ್ಷ ಬಳಿಕ ಪ್ರಮುಖ ಆರೋಪಿ ಸೆರೆ
 • ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ರಿಯಾ ಚಕ್ರವರ್ತಿ ತೀವ್ರ ವಿಚಾರಣೆ
 • ಭೂ ಕುಸಿತ ಭೀತಿ: ಕೊಡಗು ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರ
 • ರಾಜ್ಯವೀಗ ನಾವಿಕನಿಲ್ಲದ ದೋಣಿಯಂತಾಗಿದೆ: ದಿನೇಶ್ ಗುಂಡೂರಾವ್
National Share

ಇಡೀ ಗಲ್ವಾನ್ ಕಣಿವೆಯ ಮೇಲೆ ಹಕ್ಕು ಪ್ರತಿಪಾದಿಸಿರುವ ಚೀನಾ ಹೇಳಿಕೆ ಕುರಿತು ಪ್ರಧಾನಿಗೆ ಚಿದಂಬರಂ ಪ್ರಶ್ನೆ

ಇಡೀ ಗಲ್ವಾನ್ ಕಣಿವೆಯ ಮೇಲೆ ಹಕ್ಕು ಪ್ರತಿಪಾದಿಸಿರುವ ಚೀನಾ ಹೇಳಿಕೆ ಕುರಿತು ಪ್ರಧಾನಿಗೆ ಚಿದಂಬರಂ ಪ್ರಶ್ನೆ
ಇಡೀ ಗಲ್ವಾನ್ ಕಣಿವೆಯ ಮೇಲೆ ಹಕ್ಕು ಪ್ರತಿಪಾದಿಸಿರುವ ಚೀನಾ ಹೇಳಿಕೆ ಕುರಿತು ಪ್ರಧಾನಿಗೆ ಚಿದಂಬರಂ ಪ್ರಶ್ನೆ

ನವದೆಹಲಿ, ಜೂನ್ 20 (ಯುಎನ್‌ಐ) ಲಡಾಖ್‌ನ ಗಲ್ವಾನ್ ಕಣಿವೆಯ ಸಂಪೂರ್ಣ ಪ್ರದೇಶ ತನ್ನದೆಂದು ಚೀನಾ ಹೇಳಿಕೊಂಡಿರುವ ಕುರಿತು ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಒತ್ತಾಯಿಸಿದ್ದಾರೆ.

ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯರ ಹೇಳಿಕೆ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.

ಲಡಾಖ್‌ ಪ್ರಾಂತ್ಯದಲ್ಲಿ ಭಾರತೀಯ ಭೂಪ್ರದೇಶದೊಳಗೆ ಹೊರಗಿನ ಯಾರೊಬ್ಬರೂ ಅತಿಕ್ರಮ ಪ್ರವೇಶ ಮಾಡಿಲ್ಲ. ಅಲ್ಲದೆ, ಗಡಿಯಲ್ಲಿನ ಯಾವುದೇ ಸೇನಾ ಶಿಬಿರವನ್ನು ವಿದೇಶಿ ಪಡೆಗಳು ವಶಕ್ಕೆ ತೆಗೆದುಕೊಂಡಿಲ್ಲ ಎಂದು ನರೇಂದ್ರ ಮೋದಿ ಸರ್ವಪಕ್ಷಗಳ ಸಭೆಯಲ್ಲಿ ನಿನ್ನೆ ಹೇಳಿದ್ದರು.

‘ಚೀನಾದ ಯಾವುದೇ ಪಡೆಗಳು ಭಾರತೀಯ ಭೂಪ್ರದೇಶದಲ್ಲಿ ಇಲ್ಲದಿದ್ದರೆ, ‘ಯಥಾಸ್ಥಿತಿ ಪುನರ್‍ ಸ್ಥಾಪನೆ’ಯ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಹೇಳಿಕೆ ಮತ್ತು ವಿದೇಶಾಂಗ ಸಚಿವಾಲಯದ ಉನ್ನತ ಮಟ್ಟದ ಹೇಳಿಕೆಗಳಲ್ಲಿ ಒತ್ತಾಯಿಸಿದ್ದಾದರೂ ಏಕೆ? ಯಥಾಸ್ಥಿತಿಯ ಅರ್ಥವೇನು? ಎಂದು ಚಿದಂಬರಂ ಸರಣಿ ಟ್ವೀಟ್‌ಗಳಲ್ಲಿ ಕೇಳಿದ್ದಾರೆ.

ಪ್ರಧಾನಿಯವರ ಹೇಳಿಕೆ, ಸೇನಾ ಮುಖ್ಯಸ್ಥರು, ರಕ್ಷಣಾ ಸಚಿವರು ಮತ್ತು ವಿದೇಶಾಂಗ ಸಚಿವರ ಹಿಂದಿನ ಹೇಳಿಕೆಗಳಿಗೆ ತದ್ವಿರುದ್ಧವಾಗಿದೆ ಎಂದು ಪ್ರತಿಪಾದಿಸಿರುವ ಚಿದಂಬರಂ, ‘ಚೀನಾದ ಯಾವುದೇ ಸೈನಿಕರು ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿ ಭಾರತೀಯ ಭೂಪ್ರದೇಶದಲ್ಲಿ ಇರದಿದ್ದರೆ ಮೇ 5-6 ರಂದು 'ಮುಖಾಮುಖಿ' ಏಕೆ ಆಗಿತ್ತು? ಮೇ 5 ಮತ್ತು ಜೂನ್ 6 ರ ನಡುವೆ ಭಾರತೀಯ ಕಮಾಂಡರ್‌ಗಳು ಚೀನಾದ ಕಮಾಂಡರ್‍ ಗಳೊಂದಿಗೆ ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದರು? ಜೂನ್ 6 ರಂದು ಎರಡು ದೇಶಗಳ ಕೋರ್ ಕಮಾಂಡರ್‌ಗಳ ನಡುವಿನ ಮಾತುಕತೆಯ ವಿಷಯ ಯಾವುದಾಗಿತ್ತು? ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.

ಲಡಾಖ್‌ನಲ್ಲಿ ಚೀನಾದ ಯಾವುದೇ ಭಾರತೀಯ ಭೂಪ್ರದೇಶದೊಳಗೆ ಇಲ್ಲದಿದ್ದರೆ, 20 ಸೈನಿಕರು ಏಕೆ ಹುತಾತ್ಮರಾಗಬೇಕಿತ್ತು ಎಂದು ಚಿದಂಬರಂ ಇಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

ಭಾರತ ಸರ್ಕಾರ ಮತ್ತು ಭಾರತದ ರಕ್ಷಣಾ ಪಡೆಗಳಿಗೆ ಕಾಂಗ್ರೆಸ್ ಪಕ್ಷದ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸಿರುವ ಚಿದಂಬರಂ, ದೇಶದ ರಕ್ಷಣೆ ಮತ್ತು ಪ್ರಾದೇಶಿಕ ಸಮಗ್ರತೆಯು ಪ್ರತಿಯೊಬ್ಬ ಭಾರತೀಯರ ಹೃದಯಸ್ಪರ್ಶಿಯಾಗಿದೆ. ಆದ್ದರಿಂದಲೇ ಏಕತೆ ಮತ್ತು ಒಗ್ಗಟ್ಟು ತೋರಲು ಪ್ರಶ್ನೆಗಳಿಗೆ ಒಂದು ದೃಷ್ಟಿಯಿಂದ ಉತ್ತರಗಳನ್ನು ಹುಡುಕಲಾಗುತ್ತಿದೆ ಎಂದು ಹೇಳಿದ್ದಾರೆ.

ಯುಎನ್‍ಐ ಎಸ್ಎಲ್ಎಸ್ 1644