Wednesday, Feb 26 2020 | Time 10:25 Hrs(IST)
  • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
  • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
International Share

ಇಡ್ಲಿಬ್ ನಲ್ಲಿ ಉಗ್ರರ ದಾಳಿ: 40 ಸಿರಿಯಾ ಯೋಧರು ಸಾವು

ಇಡ್ಲಿಬ್ ನಲ್ಲಿ ಉಗ್ರರ ದಾಳಿ: 40 ಸಿರಿಯಾ ಯೋಧರು ಸಾವು
ಇಡ್ಲಿಬ್ ನಲ್ಲಿ ಉಗ್ರರ ದಾಳಿ: 40 ಸಿರಿಯಾ ಯೋಧರು ಸಾವು

ಮಾಸ್ಕೊ, ಜ 23(ಯುಎನ್‍ಐ)- ಇಡ್ಲಿಬ್ ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 40 ಸಿರಿಯಾ ಸರ್ಕಾರಿ ಪಡೆಯ ಸೈನಿಕರು ಮೃತಪಟ್ಟಿದ್ದಾರೆ ಎಂದು ಸಿರಿಯಾದಲ್ಲಿನ ರಷ್ಯಾದ ಮರುಸಂಧಾನದ ಕೇಂದ್ರ ತಿಳಿಸಿದೆ.

ಬುಧವಾರ ರಾತ್ರಿ ಸುಮಾರು 450 ಭಯೋತ್ಪಾದಕರು ದಾಳಿ ನಡೆಸಿದ್ದರು. ‘ ದಾಳಿಗಳಲ್ಲಿ ಸಿರಿಯಾ ಸರ್ಕಾರಿ ಪಡೆಗಳ 40 ಸೈನಿಕರು ಮೃತಪಟ್ಟಿದ್ದು, 80ಕ್ಕೂ ಸೈನಿಕರು ಗಾಯಗೊಂಡಿದ್ದಾರೆ.’ ಎಂದು ರಷ್ಯಾ ಕೇಂದ್ರದ ಪ್ರಕಟಣೆ ತಿಳಿಸಿದೆ.

ಘರ್ಷಣೆಗಳಲ್ಲಿ ಸುಮಾರು 50 ಭಯೋತ್ಪಾದಕರು ಮೃತಪಟ್ಟಿದ್ದು, ಇತರ 90 ಮಂದಿ ಗಾಯಗೊಂಡಿದ್ದಾರೆ ಎಂದು ಕೇಂದ್ರ ತಿಳಿಸಿದೆ.

ಮತ್ತೊಂದು ದಾಳಿ ಭೀತಿಯಿಂದ ಸರ್ಕಾರಿ ಪಡೆಗಳು ಆಗ್ನೇಯ ಭಾಗದಿಂದ ಸ್ಥಳಾಂತರಗೊಂಡಿವೆ.

ಈ ಮಧ್ಯೆ, ಅಲೆಪ್ಪೊ ಮೇಲೆ ಸುಮಾರು 50 ಉಗ್ರರು ದಾಳಿ ಯತ್ನ ನಡೆಸಿದ್ದಾರೆ. ಆದರೆ, ದಾಳಿಯನ್ನು ನಿಗ್ರಹಿಸಲಾಗಿದ್ದು, ಘರ್ಷಣೆಯಲ್ಲಿ ಏಳು ಉಗ್ರರು ಹತರಾಗಿದ್ದಾರೆ. ಸಿರಿಯಾ ಸರ್ಕಾರಿ ಪಡೆಯ ಇಬ್ಬರು ಸೈನಿಕರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ ಎಂದು ಕೇಂದ್ರ ತಿಳಿಸಿದೆ.

ಯುಎನ್‍ಐ ಎಸ್‍ಎಲ್‍ಎಸ್ 1602