Sunday, Sep 27 2020 | Time 01:55 Hrs(IST)
Entertainment Share

ಇನ್ನುಮುಂದೆ ಕಿರುತೆರೆಯಲ್ಲಿ ನಿರೂಪಕರಾಗಿ ಡಿ ಬಾಸ್ ದರ್ಬಾರ್?

ಬೆಂಗಳೂರು, ಡಿ 04 (ಯುಎನ್ಐ)
ಸ್ಯಾಂಡಲ್ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರೂಪಕರಾಗಿ ಕಿರುತೆರೆಯಲ್ಲೂ ಧೂಳೆಬ್ಬಿಸಲಿದ್ದಾರೆ ಎಂಬ ಬಿಸಿ ಬಿಸಿ , ಸಿಹಿಸಿಹಿ ಸುದ್ದಿ ಹರಿದಾಡುತ್ತಿದೆ.
ಸದ್ಯ ಅವರ ಒಡೆಯಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದರೆ.. ಅತ್ತ ರಾಬರ್ಟ್ ಚಿತ್ರ ಇನ್ನೇನು ಕೊನೆಯ ಹಂತದಲ್ಲಿದೆ..
ಜೊತೆಗೆ ಡಿಸೆಂಬರ್ 6 ರಂದು ರಾಕ್ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ದರ್ಶನ್ ಅವರ ಮುಂದಿನ ಸಿನಿಮಾ ಮದಕರಿ ನಾಯ್ಕ ಸಿನಿRಮಾ ಸೆಟ್ಟೇರಲಿದೆ..
ಇದೆಲ್ಲದರ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಿರುತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.. ಹೌದು ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸುದೀಪ್ ಶಿವರಾಜ್ ಕುಮಾರ್, ರವಿಚಂದ್ರನ್, ಜಗ್ಗೇಶ್, ಗಣೇಶ್ ಹೀಗೆ ಬಹಳಷ್ಟು ಸ್ಟಾರ್ ಗಳು ಕಿರುತೆರೆಯಲ್ಲಿ‌ ಮಿಂಚಿದ್ದಾರೆ.
ಆದರೆ ದರ್ಶನ್ ಅವರು ಮಾತ್ರ ಸಿನಿಮಾ ಬಿಟ್ಟು ಮತ್ತೆಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ.. ಜಾಹೀರಾತಿನಲ್ಲಿಯೂ ಕೂಡ ದರ್ಶನ್ ಕಾಣಿಸಿಕೊಳ್ಳುತ್ತಿರಲಿಲ್ಲ.. ಕೆಲ ದಿನಗಳ ಹಿಂದೆ ವಾಹಿನಿಯೊಂದರ ಒಂದೇ ಒಂದು ಜಾಹಿರಾತಿನಲ್ಲಿ ಮಾತ್ರ ಕಾಣಿಸಿಕೊಂಡಿದ್ದರಷ್ಟೇ.. ಅದನ್ನು ಹೊರತು ಪಡಿಸಿ ಕಿರುತೆರೆಗೂ ದರ್ಶನ್ ರಿಗೂ ಅಜಗಜಾಂತರವೆಂದೇ ಹೇಳಬಹುದು..
ಆದರೆ ಈಗ ಕಿರುತೆರೆಯಲ್ಲಿಯೂ ದರ್ಶನ್ ಅವರ ಆರ್ಭಟ ಶುರುವಾಗಲಿದೆ ಎಂಬ ಮಾಹಿತಿ ತಿಳಿದುಬಂದಿದೆ.. ಹೌದು ಖಾಸಗಿ ವಾಹಿನಿಯೊಂದರ ಶೋ ವೊಂದನ್ನು ದರ್ಶನ್ ಅವರು ನಿರೂಪಣೆ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.. ಆದರೆ ಯಾವ ವಾಹಿನಿ? ಯಾವ ಶೋ? ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ.
ದರ್ಶನ್ ಅವರು ಶೋ ನಿರೂಪಣೆ ಮಾಡೋದು ಬಹುತೇಕ ಖಚಿತವೆಂದೇ ಹೇಳಲಾಗುತ್ತಿದ್ದು, ಡಿ ಬಾಸ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
ಯುಎನ್ಐ ಎಸ್ಎ ವಿಎನ್ 1641
More News
‘ಕಸ್ತೂರಿ ಮಹಲ್’ ಒಡತಿಯಾಗಿ ಶಾನ್ವಿ ಶ್ರೀವಾಸ್ತವ್

‘ಕಸ್ತೂರಿ ಮಹಲ್’ ಒಡತಿಯಾಗಿ ಶಾನ್ವಿ ಶ್ರೀವಾಸ್ತವ್

26 Sep 2020 | 8:33 PM

ಬೆಂಗಳೂರು, ಸೆ 26 (ಯುಎನ್‍ಐ) ಕಸ್ತೂರಿ ಮಹಲ್ ಚಿತ್ರಕ್ಕೆ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ಆಯ್ಕೆಯಾಗಿದ್ದಾರೆ.

 Sharesee more..

ಹೊಟ್ಟೆನೋವು : ನಟ ಶರಣ್ ಆಸ್ಪತ್ರೆಗೆ ದಾಖಲು

26 Sep 2020 | 4:07 PM

 Sharesee more..

ಗಾನ ಸರಸ್ವತಿಯ ಮಡಿಲು ಸೇರಿದ ಸ್ವರ ಮಾಂತ್ರಿಕ

26 Sep 2020 | 12:47 PM

 Sharesee more..