Friday, Feb 28 2020 | Time 09:50 Hrs(IST)
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಇರಾಕ್‍ ನ ಸಲಾಹುದ್ದೀನ್‍ ಪ್ರಾಂತ್ಯದಲ್ಲಿ ಅಮೆರಿಕ ಸೇನಾ ನೆಲೆ ಮೇಲೆ ರಾಕೆಟ್‍ ದಾಳಿ

ಬಾಗ್ದಾದ್‍, ಜ 12(ಯುಎನ್‍ಐ)- ಅಮೆರಿಕ-ಇರಾನ್‍ ನಡುವಿನ ಸಂಘರ್ಷ ತಾರಕ್ಕೇರಿದ್ದು, ಇರಾನ್‍ ಮತ್ತೊಮ್ಮೆ ಇರಾಕ್‍ ನಲ್ಲಿರುವ ಅಮೆರಿಕ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಇರಾಕ್‍ ನ ರಾಜಧಾನಿ ಬಾಗ್ದಾದ್‍ ನಿಂದ 90 ಕಿ.ಮೀ ದೂರದ ಸಲಾಹುದ್ದೀನ್‍ ಪ್ರಾಂತ್ಯದಲ್ಲಿ ಅಮೆರಿಕ ಸೇನಾ ಪಡೆಗಳು ಇರುವ ನೆಲೆಯನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸಿದ ರಾಕೆಟ್‍ ದಾಳಿಯಲ್ಲಿ ಕನಿಷ್ಟ ಇಬ್ಬರು ಇರಾಕ್‍ ಯೋಧರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಭದ್ರತಾ ಮೂಲಗಳು ತಿಳಿಸಿವೆ.ರಾಕೆಟ್‍ ದಾಳಿಯಿಂದ ಕೆಲವರು ಗಾಯಗೊಂಡಿರುವುದು ಮಾತ್ರವಲ್ಲದೆ, ಹತ್ತಿರದ ಕಟ್ಟಡಗಳೂ ಹಾನಿಗೊಂಡಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಕ್ಸಿನುವಾ ವರದಿ ಮಾಡಿದೆ.

ಕೆಲ ದಿನಗಳ ಹಿಂದೆಯಷ್ಟೇ ಇರಾಕ್‍ ನಲ್ಲಿರುವ ಅಮೆರಿಕ ಪಡೆಗಳನ್ನು ಗುರಿಯಾಗಿಸಿಕೊಂಡು ಇರಾನ್‍ ನಡೆಸಿದ ಕ್ಷಿಪಣಿ ದಾಳಿಯಲ್ಲಿ 35ಕ್ಕೂ ಹೆಚ್ಚು ಅಮೆರಿಕ ಯೋಧರು ಮೃತಪಟ್ಟಿದ್ದರು.

ಈ ಮಧ್ಯೆ, ಅಮೆರಿಕ-ಇರಾನ್‍ ನಡುವಿನ ಸಂಘರ್ಷದಲ್ಲಿ ಇರಾಕ್‍ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಇರಾಕ್‍ ಅನ್ನು ಗಾಳವಾಗಿಸಿಕೊಂಡು ಇರಾನ್‍ ನಡೆಸುತ್ತಿರುವ ದಾಳಿಯಿಂದ ಮೊದಲೇ ಆಂತರಿಕ ಸಂಘರ್ಷ, ಭಯೋತ್ಪಾದನೆಯಿಂದ ನಲುಗಿರುವ ಇರಾಕ್‍ ಮತ್ತಷ್ಟು ಕ್ಷೋಭೆಗೆ ಒಳಗಾಗಿದೆ. ಸದ್ದಾಂ ಹುಸೇನ್‍ ನಂತರ ಇರಾಕ್‍ ಒಂದು ರೀತಿ ನತದೃಷ್ಟ ದೇಶವೆಂದೇ ಹೇಳಬೇಕಾಗಿದೆ. ಅಮೆರಿಕ ಮತ್ತು ನೆರೆಯ ಇರಾನ್‍ ಈ ದೇಶವನ್ನು ಯುದ್ಧ ಭೂಮಿಯನ್ನಾಗಿ ಪರಿಗಣಿಸಿವೆ.

ವಿಚಿತ್ರವೆಂದರೆ, ದಶಕಗಳ ಹಿಂದೆ, ಇದೇ ಇರಾನ್‍ -ಇರಾಕ್‍ ನಡುವೆ ನಡೆದಿದ್ದ ಯುದ್ಧ, ಜಾಗತಿಕ ಯದ್ಧವೆಂದೇ ಪರಿಗಣಿತವಾಗಿತ್ತು.

ಎಸ್‍ಎಲ್‍ಎಸ್‍ ಯುಎನ್‍ಐ 2314