Friday, Feb 28 2020 | Time 07:24 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಇರಾನ್ ವಿದೇಶಾಂಗ ಸಚಿವ ಜಾವೆದ್ ಝರಿಪ್ ಭಾರತ ಭೇಟಿ

ನವದೆಹಲಿ, ಜ 14 (ಯುಎನ್ಐ) ಇರಾನ್ ನ ವಿದೇಶಾಂಗ ಸಚಿವ ಜಾವೆದ್ ಝರಿಪ್ ಮೂರು ದಿನಗಳ ಭಾರತ ಭೇಟಿಗಾಗಿ ಮಂಗಳವಾರ ನವದೆಹಲಿಗೆ ಆಗಮಿಸಿದ್ದಾರೆ.

ಅಮೆರಿಕದೊಂದಿಗಿನ ಇರಾನ್ ಸಂಬಂಧ ಹದಗೆಡುತ್ತಿರುವ ಈ ಹೊತ್ತಿನಲ್ಲಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬುಧವಾರ ಮಾತುಕತೆ ನಡೆಸಲಿದ್ದಾರೆ.

ಜರೀಫ್ ಹಾಗೂ ಭಾರತದ ವಿದೇಶಾಂಗ ಸಚಿವ ಡಾ||ಎಸ್.ಜೈಶಂಕರ್ ಅವರೊಂದಿಗೆ ಸಹ ಬೆಳಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬುಧವಾರದ ಮಾತುಕತೆ ವೇಳೆ ಇರಾನ್ ಸಚಿವರು ಭಾಷಣ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯುಎನ್ಐ ಜಿಎಸ್ಆರ್ 2201