Saturday, Aug 8 2020 | Time 05:49 Hrs(IST)
Sports Share

ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಗಿಲ್ಲ ಕೊರೊನಾ ವೈರಸ್

ಸೌತಾಂಪ್ಟನ್, ಜುಲೈ 3 (ಯುಎನ್ಐ)- ಅನಾರೋಗ್ಯದಿಂದಾಗಿ ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಇಲ್ಲಿನ ತಮ್ಮ ಹೊಟೇಲ್ ನಲ್ಲಿ ಪ್ರತೇಕವಾಗಿ ಇದ್ದು, ಇವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಾಲಗಿದ್ದು, ವರದಿ ನಕಾರಾತ್ಮಕವಾಗಿ ಬಂದಿದೆ ಎಂದು ತಿಳಿದು ಬಂದಿದೆ.

ಬುಧವಾರ ರಾತ್ರಿ ಕರನ್ ಅನಾರೋಗ್ಯಕ್ಕೆ ಒಳಗಾದರು ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಗುರುವಾರ ತಿಳಿಸಿದೆ. ನಂತರ ಅವರು ಏಜಿಸ್ ಬಾಲ್ ನಲ್ಲಿ ಪ್ರತ್ಯೇಕತೆಗೆ ಇದ್ದರು. ಇಲ್ಲಿ ಎರಡು ಇಂಗ್ಲೆಂಡ್ ತಂಡಗಳ ನಡುವೆ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಕರನ್ ಜೋಸ್ ಬಟ್ಲರ್ ತಂಡದ ಭಾಗವಾಗಿದ್ದರು.

ಅಭ್ಯಾಸ ಪಂದ್ಯದ ಮೊದಲ ದಿನದಂದು ಕರನ್ ಮೈದಾನಕ್ಕಿಳಿದ ಔಟ್ ಆಗದೆ 15 ರನ್ ಗಳಿಸಿದರು ಆದರೆ ಅದೇ ರಾತ್ರಿ ಅವರು ಅನಾರೋಗ್ಯಕ್ಕೆ ತುತ್ತಾದರು. ಇಸಿಬಿ ಪ್ರಕಾರ, ಕರನ್ ಗುರುವಾರ ಮಧ್ಯಾಹ್ನ ಚೇತರಿಸಿಕೊಂಡಿದ್ದರು. ಕರನ್‌ ಅವರ ಮೇಲೆ ತಂಡದ ವೈದ್ಯರು ನಿರಂತರವಾಗಿ ನಿಗಾ ವಹಿಸುತ್ತಿದ್ದಾರೆ ಮತ್ತು ಗುರುವಾರ ಕೊರೊನಾ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಇಸಿಬಿ ವರದಿ ಮಾಡಿತ್ತು.

ಕರನ್ ಅವರ ವರದಿ ಬಂದಿದ್ದು ಅವರಲ್ಲಿ ಸೋಂಕು ಇಲ್ಲದೇ ಇರುವುದು ದೃಢ ಪಟ್ಟಿದೆ. 22 ವರ್ಷದ ಕರನ್ ಮುಂದಿನ 24 ರಿಂದ 48 ಗಂಟೆಗಳ ಕಾಲ ತರಬೇತಿಗೆ ಮರಳಲಿದ್ದಾರೆ ಆದರೆ ಇಸಿಬಿ ವೈದ್ಯಕೀಯ ತಂಡವು ಅವರನ್ನು ಮೇಲ್ವಿಚಾರಣೆ ನಡೆಸುತ್ತಿದೆ. ನಿಯಮಿತ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿರುವ ಕರನ್ ಮತ್ತು ಇತರ ತಂಡದ ಸದಸ್ಯರು ಮತ್ತು ಇತರ ಸಿಬ್ಬಂದಿ ಭಾನುವಾರ ಮತ್ತೊಂದು ಪರೀಕ್ಷೆಯನ್ನು ನಡೆಸಲಿದ್ದಾರೆ.

ಯುಎನ್ಐ ವಿಎನ್ಎಲ್ 2122
More News
ಇಂಗ್ಲೆಂಡ್ ಗೆ 107 ರನ್ ಹಿನ್ನಡೆ, ಪಾಕ್ ಬೌಲರ್ ಗಳ ಅಬ್ಬರ

ಇಂಗ್ಲೆಂಡ್ ಗೆ 107 ರನ್ ಹಿನ್ನಡೆ, ಪಾಕ್ ಬೌಲರ್ ಗಳ ಅಬ್ಬರ

07 Aug 2020 | 9:55 PM

ಮ್ಯಾಂಚೆಸ್ಟರ್, ಆ.7 (ಯುಎನ್ಐ)- ಪಾಕ್ ಸ್ಪಿನ್ ಬೌಲರ್ ಯಾಸೀರ್ ಶಾ ಅವರ ಬಿಗುವಿನ ದಾಳಿಗೆ ನಲುಗಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 219 ರನ್ ಗಳಿಗೆ ಆಲೌಟ್ ಆಯಿತು.

 Sharesee more..

ಯಾಸೀರ್ ಮಾರಕ ದಾಳಿ, ಪಾಕ್ ಗೆ ಇನಿಂಗ್ಸ್ ಮುನ್ನಡೆ

07 Aug 2020 | 9:06 PM

 Sharesee more..