Monday, Sep 21 2020 | Time 12:39 Hrs(IST)
  • ವಾಷಿಂಗ್ಟನ್‌ ಸುಂದರ್‌ಗೆ ಆರಂಭಿಕ ಸ್ಥಾನ ನೀಡುವಂತೆ ಗೌತಮ್‌ ಗಂಭೀರ್‌ ಸಲಹೆ
  • ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ; ಹಾರಂಗಿ ಜಲಾಶಯದ ನೀರಿನ ಮಟ್ಟ ಏರಿಕೆ
  • ಕೊರೊನಾ ಆತಂಕದ ಮಧ್ಯೆ ವಿಧಾನಮಂಡಲ ಅಧಿವೇಶನ4 ಆರಂಭ: ಇತ್ತೀಚೆಗೆ ಮೃತರಾದ ಗಣ್ಯರಿಗೆ ಸಂತಾಪ
  • ಎತ್ತಿನ ಬಂಡಿ ಸಮೇತ ಇಬ್ಬರು ಯುವಕರು ನದಿ ಪಾಲು: ಮುಂದುವರೆದ ಶೋಧ ಕಾರ್ಯ
  • ಸಚಿವ ಸಂಪುಟ ವಿಸ್ತರಣೆಗಾಗಿ ವರಿಷ್ಠರ ಸಂದೇಶಕ್ಕಾಗಿ ಕಾಯುತ್ತಿದ್ದೇನೆ: ಯಡಿಯೂರಪ್ಪ
  • ಕೊರೋನಾ ಆರ್ಭಟ, 24 ಗಂಟೆಯಲ್ಲಿ 1,130 ಮಂದಿ ಸಾವು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ಕೊವಿಡ್‍-19: ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1,36,895 ಕ್ಕೆ ಏರಿಕೆ
  • ಬ್ರೆಜಿಲ್‌ನಲ್ಲಿ ಹೆದ್ದಾರಿ ಅಪಘಾತ: 12 ಮಂದಿ ಸಾವು
  • ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ
  • ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ
  • ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
Sports Share

ಇಂಗ್ಲೆಂಡ್ ಕ್ರಿಕೆಟ್ ತಂಡದ ಭಾರತ ಪ್ರವಾಸ ಮುಂದೂಡಿಕೆ

ಮ್ಯಾಂಚೆಸ್ಟರ್, ಆಗಸ್ಟ್ 7 (ಯುಎನ್ಐ)
ಕೊರೊನಾ ಸೋಂಕಿನ ಪಿಡುಗಿನಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಭಾರತ ಪ್ರವಾಸವನ್ನು ಮುಂದೂಡಲಾಗಿದೆ.
ನಿಗದಿಯಂತೆ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳ ಸರಣಿಗಳ ಪ್ರವಾಸ ಆರಂಭವಾಗಬೇಕಿತ್ತು. ಆದರೆ ಇದೇ ಸಮಯದಲ್ಲಿ ಯುಎಇನಲ್ಲಿ ಐಪಿಎಲ್ ನಿಗದಿಯಾಗಿರುವುದು ಸಹ ಸರಣಿ ಮುಂದೂಡಿಕೆಗೆ ಕಾರಣವಾಗಿದೆ.
ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಸಲು ಉದ್ದೇಶಿಸಿದ್ದ ಐಸಿಸಿ ಟಿ20 ವಿಶ್ವ ಕಪ್ ಗೆ ಸಜ್ಜಾಗಲು ಈ ಸರಣಿ ಅತ್ಯುತ್ತಮ ವೇದಿಕೆ ಎಂದು ಪರಿಗಣಿಸಲಾಗಿತ್ತು. ಆದರೆ ವಿಶ್ವ ಕಪ್ ಟೂರ್ನಿಯನ್ನು ಮುಂದೂಡಲಾಗಿದೆ. ಈ ಮಧ್ಯೆ ಭಾರತದಲ್ಲಿ ಕೋವಿಡ್-19 ತಡೆಗಟ್ಟಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಪ್ರವಾಸವನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐ ಶುಕ್ರವಾರ ತಿಳಿಸಿವೆ.
ಯುಎನ್ಐಆರ್ ಕೆ 2046