Monday, Sep 16 2019 | Time 12:10 Hrs(IST)
  • ತ್ರಿಪುರಾದಲ್ಲಿ ಅಗ್ಗದ ದರದಲ್ಲಿ ಈರುಳ್ಳಿ ಪೂರೈಕೆ: ಮನೋಜ್ ಕಾಂತಿ ದೇಬ್
  • ಭಾರತದಲ್ಲಿ ಎಸ್ -400 ವಾಯು ರಕ್ಷಣಾ ವ್ಯವಸ್ಥೆ ಉತ್ಪಾದನೆ ಬಗ್ಗೆ ರಷ್ಯಾ ಪರಿಶೀಲನೆ-ರೋಸ್ಟೆಕ್ ಸಿಇಒ
  • ಕೆ ಎಸ್‍ ಈಶ್ವರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ: ಎಸ್‍ಡಿಪಿಐ
  • ಬಲವಂತದ ಭಾಷೆ ಹೇರಿಕೆ ಸಲ್ಲದು: ಸಿದ್ದರಾಮಯ್ಯ
  • ದೇಶದಲ್ಲಿ ಮಳೆಯಿಂದ ಈ ವರ್ಷ 1,422 ಜನರ ಸಾವು: ವರದಿ
  • ಪಂಕಜ್ ಅಡ್ವಾನಿಯ ಸ್ಥಿರ ಪ್ರದರ್ಶನ ಶ್ಲಾಘನೀಯ: ಮೋದಿ
  • ಬೇಗೂರು ಪೊಲೀಸರಿಂದ ರೌಡಿ ಶೀಟರ್ ಓಣಿ ಶ್ರೀಧರ್ ಕಾಲಿಗೆ ಗುಂಡೇಟು
  • ಪಾಕಿಸ್ತಾನದಲ್ಲಿ ಭದ್ರತೆ ಪರಿಶೀಲಿಸಿದ ನಂತರ ಪಂದ್ಯದ ಅಧಿಕಾರಿಗಳ ನೇಮಕ: ಐಸಿಸಿ
  • 47 ವರ್ಷಗಳ ಬಳಿಕ ಆ್ಯಷಸ್‌ ಟೆಸ್ಟ್ ಸರಣಿ ಡ್ರಾ
  • ಬಂಜಾ ಲುಕಾ ಚಾಲೆಂಜರ್‌: ರನ್ನರ್ ಅಪ್‌ಗೆ ತೃಪ್ತಿಪಟ್ಟ ಸುಮಿತ್‌ ನಗಾಲ್‌
  • ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ನಾಲ್ವರು ಯೋಧರಿಗೆ ಗಾಯ
Sports Share

ಇಂಗ್ಲೆಂಡ್ ಫ್ಲೈಟ್ ಹತ್ತಿದ ರಿಷಭ್ ಪಂತ್

ಇಂಗ್ಲೆಂಡ್ ಫ್ಲೈಟ್ ಹತ್ತಿದ ರಿಷಭ್ ಪಂತ್
ಇಂಗ್ಲೆಂಡ್ ಫ್ಲೈಟ್ ಹತ್ತಿದ ರಿಷಭ್ ಪಂತ್

ನವದೆಹಲಿ, ಜೂನ್ 12 (ಯುಎನ್ಐ)- ಹೆಬ್ಬೆರಳಿನ ಗಾಯದಿಂದ ಬಳಲುತ್ತಿರುವ ಶಿಖರ್ ಧವನ್ ಅವರ ಬದಲಿಗೆ ತಂಡ ಸೇರಿಕೊಳ್ಳಲು ರಿಷಭ್ ಪಂತ್ ಇಂಗ್ಲೆಂಡ್ ನ ವಿಮಾನವನ್ನು ಹತ್ತಿದ್ದು, ಇನ್ನು ಹದಿನೈದು ಜನರ ತಂಡ ಸೇರಲು ಕಾಯುವ ಅವಶ್ಯಕತೆ ಇದೆ.

ಭಾರತ, ನ್ಯೂಜಿಲೆಂಡ್ ವಿರುದ್ಧ ಗುರುವಾರ ನಾಟಿಂಗ್ ಹ್ಯಾಮ್ ನಲ್ಲಿ ಪಂದ್ಯವನ್ನು ಆಡಲಿದ್ದು, ಪಂತ್ ಇದರೊಳಗೆ ಇಂಗ್ಲೆಂಡ್ ತಲುಪುತ್ತಾರೆ. ಆದರೆ, ಟೀಮ್ ಮ್ಯಾನೇಜ್ಮೆಂಟ್ ನಿರ್ಣಯದ ವರೆಗೂ ಅವರು ಕಾಯಲೇ ಬೇಕಾಗುತ್ತದೆ.

ಐಸಿಸಿ ನಿಯಮದಂತೆ ಗಾಯಾಳು ಆಟಗಾರ ತಂಡದಿಂದ ಹೊರ ನಡೆದರೆ, ಆತನ ಗಾಯ ಚೇತರಿಕೆ ಗುಣಮುಖವಾದ ಮೇಲೆ ಅವನನ್ನು ತಂಡದಲ್ಲಿ ಸೇರಿಸಿಕೊಳ್ಳಲು ಆಗುವುದಿಲ್ಲ. ಹೀಗೇನಾದರು ಆಗಬೇಕಾದಲ್ಲಿ ಇನ್ನೋರ್ವ ಆಟಗಾರ ಗಾಯದಿಂದ ಹೊರ ನಡೆಯುವ ಅವಶ್ಯಕತೆ ಇದೆ.

ಸದ್ಯ ಧವನ್ ಅವರನ್ನು ಟೀಮ್ ಮ್ಯಾನೇಜ್ಮೆಂಟ್ ವೀಕ್ಷಣೆಯಲ್ಲಿ ಇಟ್ಟಿದ್ದು, ಕಾದು ನೋಡುವ ತಂತ್ರಕ್ಕೆ ಮಣೆ ಹಾಕಿದೆ. ಧವನ್ ಅವರು ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿ, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಮಂಗಳವಾರ ಮೊದಲು ಧವನ್ ಗೆ ಮೂರು ವಾರಗಳ ವಿಶ್ರಾಂತಿಯ ಅವಶ್ಯಕತೆ ಇದೆ ಎಂದು ತಿಳಿಸಲಾಗಿತ್ತು. ಆದರೆ, ನಂತರ ಬಂದ ಸುದ್ದಿಯ ಅನುಸಾರ ಧವನ್ ಅವರಿಗೆ ಎರಡು ಪಂದ್ಯ ಹೊರಗಿಟ್ಟು ಕಾದು ನೋಡುವ ತಂತ್ರಕ್ಕೆ ಮ್ಯಾನೇಜ್ಮೆಂಟ್ ಮಣೆ ಹಾಕಿದೆ.

ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಧವನ್ ಅನುಪಸ್ಥಿತಿಯಲ್ಲಿ ಕೆ.ಎಲ್ ರಾಹುಲ್ ಆರಂಭಿಕರಾಗಿ ರೋಹಿತ್ ಶರ್ಮಾ ಅವರಿಗೆ ಸಾಥ್ ನೀಡುವುದನ್ನು ನಿರೀಕ್ಷಿಸಲಾಗಿದೆ. ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್ 4ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಭಾರತ ನಾಳೆ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದ್ದು, ಮುಂದಿನ ಭಾನುವಾರ ಪಾಕಿಸ್ತಾನದ ವಿರುದ್ಧ ಕಾದಾಟ ನಡೆಸಲಿದೆ.

ಯುಎನ್ಐ ವಿಎನ್ಎಲ್ ಕೆಎಸ್ವಿ 1825