SportsPosted at: Jul 14 2019 11:25AM Shareಇಂಗ್ಲೆಂಡ್ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ: ವಿಲಿಯಮ್ಸನ್ಲಂಡನ್, ಜು 14 (ಯುಎನ್ಐ) ಇಂದು ನಡೆಯುವ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ಗೆಲ್ಲುವಲ್ಲಿ ಆತಿಥೇಯ ಇಂಗ್ಲೆಂಡ್ ಫೇವರಿಟ್ ತಂಡವಾಗಿದೆ. ಆದರೆ, ನಾವು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ತೋರುತ್ತೇವೆ ಎಂದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ. ರೌಂಡ್ ರಾಬಿನ್ ಹಂತದಲ್ಲಿ ಒಂದು ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆತಿಥೇಯರ ವಿರುದ್ಧ 119 ರನ್ ಭಾರಿ ಅಂತರದಲ್ಲಿ ನ್ಯೂಜಿಲೆಂಡ್ ಸೋಲು ಅನುಭವಿಸಿತ್ತು. ಇದೇ ಲಯವನ್ನು ಇಂದಿನ ಫೈನಲ್ ಹಣಾಹಣಿಯಲ್ಲಿ ಮುಂದುವರಿಸುವ ತುಡಿತದಲ್ಲಿ ಇದೆ. "ಇಂಗ್ಲೆಂಡ್ ಈ ಬಾರಿ ವಿಶ್ವಕಪ್ ಗೆಲ್ಲುವ ತಂಡವೆಂದು ಎಲ್ಲ ಕಡೆಯಿಂದ ಕೇಳಿಬರುತ್ತಿದೆ. ನಿಜಕ್ಕೂ ಆತಿಥೇಯರು ವಿಶ್ವಕಪ್ ಗೆಲ್ಲುವ ಫೇವರಿಟ್ಗೆ ಅರ್ಹರಾಗಿದ್ದಾರೆ" ಎಂದು ಅವರು ಸುದ್ದಿಗಾರರೊಂದಿಗೆ ಹೇಳಿದ್ದಾರೆ. " ಟೂರ್ನಿ ಆರಂಭದಲ್ಲಿ ಇಂಗ್ಲೆಂಡ್ ತಂಡವನ್ನು ಫೇವರಿಟ್ ತಂಡದ ಹಣೆಪಟ್ಟಿಯೊಂದಿಗೆ ಅದ್ಭುತ ಪ್ರದರ್ಶನ ತೋರಿತ್ತು. ಆದರೆ, ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ. ಯಾರೂ ಯಾವ ತಂಡವನ್ನೂ ಬೇಕಾದರೂ ಸೋಲಿಸಬಹುದು. ಹಾಗಾಗಿ, ನಾವು ವಿಶ್ವಾಸದೊಂದಿಗೆ ಇಂಗ್ಲೆಂಡ್ ತಂಡವನ್ನು ಎದುರಿಸುತ್ತೇವೆ" ಎಂದು ಹೇಳಿದ್ದಾರೆ. "ಕಳೆದ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ ಫೈನಲ್ಗೆ ನ್ಯೂಜಿಲೆಂಡ್ ತಂಡ ಫೈನಲ್ ತಲುಪಿತ್ತು. ಇದು ಇಡೀ ರಾಷ್ಟ್ರಾದ್ಯಂತ ಕ್ರಿಕೆಟ್ನಲ್ಲಿ ಸಾಕಷ್ಟು ಪರಿಣಾಮ ಬೀರಿತ್ತು. ಸಾಕಷ್ಟು ಮಕ್ಕಳು ಕ್ರಿಕೆಟ್ಗೆ ಹಚ್ಚು ಪ್ರಾಧಾನ್ಯತೆ ನೀಡಿದ್ದರು. ಇದೀಗ ನಾವು ಸತತ ಎರಡನೇ ಬಾರಿ ಫೈನಲ್ ತಲುಪಿದ್ದೇವೆ. ಇದು ನಮ್ಮ ರಾಷ್ಟ್ರದಲ್ಲಿ ಹಲವರಿಗೆ ಸ್ಫೂರ್ತಿ ತುಂಬಲಿದೆ ಎಂದು ತಿಳಿಸಿದ್ದಾರೆ. ಯುಎನ್ಐ ಆರ್ಕೆ ಎಎಚ್ 1118