Tuesday, Sep 22 2020 | Time 06:34 Hrs(IST)
Sports Share

ಇಂಗ್ಲೆಂಡ್ ವಿಶ್ವಕಪ್ ಗೆಲುವಿಗೆ 242 ರನ್ ಗುರಿ ನೀಡಿದ ನ್ಯೂಜಿಲೆಂಡ್

ಲಂಡನ್, ಜು 14 (ಯುಎನ್ಐ)- ಆತಿಥೇಯ ತಂಡದ ಬಿಗುವಿನ ದಾಳಿಯ ನಡುವೆಯೂ ಹ್ಯಾನ್ರಿ ನಿಕೋಲ್ಸ್ ಹಾಗೂ ಟಾಮ್ ಲಾಥಮ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಗೆ ಸ್ಪರ್ಧಾತ್ಮಕ ಗುರಿ ನೀಡಿದೆ.

ನ್ಯೂಜಿಲೆಂಡ್ ತಂಡದ ನಾಯಕ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಮುಂದಾದರು. ನಾಯಕ ನಿರ್ಣಯವನ್ನು ಸಮರ್ಥಿಸಿಕೊಳ್ಳುವಲ್ಲಿ ಆರಂಭಿಕ ಮಾರ್ಟಿನ್ ಗಪ್ಟಿಲ್ (19) ವಿಫಲರಾದರು.

ಎರಡನೇ ವಿಕೆಟ್ ಗೆ ಹ್ಯಾನ್ರಿ ಜೊತೆಗೂಡಿದ ನಾಯಕ ಕೇನ್ ವಿಲಯಮ್ಸನ್ ತಂಡಕ್ಕೆ ಚೇತರಿಕೆ ನೀಡುವ ಸೂಚನೆ ನೀಡಿದರು. ಈ ಜೋಡಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿ, ಇಂಗ್ಲೆಂಡ್ ಬೌಲರ್ ಗಳನ್ನು ಕಾಡಿತು. ವಿಕೆಟ್ ಕಾಯ್ದುಕೊಂಡು, ಬದಿ ಬದಲಿಸುತ್ತಾ ಬ್ಯಾಟ್ ಮಾಡಿದ ಆಟಗಾರರು ರನ್ ಗಳನ್ನು ಗುಡ್ಡೆ ಹಾಕಿದರು.

ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಇಂಗ್ಲೆಂಡ್ ನಾಯಕ ತಲೆ ಕೆಡಿಸಿಕೊಂಡರು. ಬಳಿಕ ಚೆಂಡನ್ನು ಪ್ಲಂಕೇಟ್ ಕೈಗೆ ನೀಡಿದರು. ಪ್ಲಂಕೇಟ್ 23ನೇ ಓವರ್ ನ ನಾಲ್ಕನೇ ಎಸೆತವನ್ನು ಆಫ್ ಸ್ಟಂಪ್ ಆಚೆ ಎಸೆದರು. ಪರಿಣಾಮ ಕೇನ್ ಕೆಣಕಲು ಹೋಗಿ ಬಟ್ಲರ್ ಗೆ ಕ್ಯಾಚ್ ನೀಡಿದರು. ಎರಡನೇ ವಿಕೆಟ್ ಗೆ ಹ್ಯಾನ್ರಿ ಹಾಗೂ ಕೇನ್ 74 ರನ್ ಗಳ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು.

ಕೇನ್ ಔಟಾಗುತ್ತಿದ್ದಂತೆ, ಹ್ಯಾನ್ರಿ ನಿಕೋಲ್ಸ್ 55 ರನ್ ಗಳಿಸಿ ಮುನ್ನುಗುತ್ತಿದ್ದಾಗ ಪ್ಲಂಕೇಟ್ ಎಸೆತವನ್ನು ತಪ್ಪಾಗಿ ಅರ್ಥಹಿಸಿಕೊಂಡು ಬೋಲ್ಡ್ ಆದರು.

ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್ ಮನ್ ರಾಸ್ ಟೇಲರ್ (15), ಆಲ್ ರೌಂಡರ್ ಜೇಮ್ ನೀಶಾಮ್ (19), ಕಾಲಿನ್ ಡಿ ಗ್ರ್ಯಾಂಡ್ ಹೋಮ್ (16) ರನ್ ಕಲೆ ಹಾಕುವಲ್ಲಿ ಎಡವಿದರು.

ಭರವಸೆಯ ಆಟಗಾರ ಟಾಮ್ ಲಾಥಮ್ 56 ಎಸೆತಗಳಲ್ಲಿ 47 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 8 ವಿಕೆಟ್ ಗೆ 241 ರನ್ ಕಲೆ ಹಾಕಿತು. ಇಂಗ್ಲೆಂಡ್ ಪರ ಕ್ರೀಸ್ ವೋಕ್ಸ್ ಹಾಗೂ ಲಿಯಾಮ್ ಪ್ಲಂಕೇಟ್ ತಲಾ ಮೂರು ವಿಕೆಟ್ ಕಬಳಿಸಿದರು.
ಯುಎನ್ಐ ವಿಎನ್ಎಲ್ ಎಸ್ಎಚ್ 1918
More News

ವಿರಾಟ್ ಪಡೆಯ ಶುಭಾರಂಭ

21 Sep 2020 | 11:43 PM

 Sharesee more..

ಇಟಾಲಿಯನ್ ಓಪನ್: ಹಾಲೆಪ್ ಚಾಂಪಿಯನ್

21 Sep 2020 | 9:51 PM

 Sharesee more..

ಬೆಂಗಳೂರು ಸ್ಕೋರ್ ಬೋರ್ಡ್

21 Sep 2020 | 9:40 PM

 Sharesee more..
ವಿಶಿಷ್ಠ ದಾಖಲೆಯ ಸನಿಹದಲ್ಲಿ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ

ವಿಶಿಷ್ಠ ದಾಖಲೆಯ ಸನಿಹದಲ್ಲಿ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ

21 Sep 2020 | 8:13 PM

ನವದೆಹಲಿ, ಸೆ 21 (ಯುಎನ್‌ಐ) ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸೋಮವಾರ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ತನ್ನ ಮೊದಲನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧ ಸೆಣಸಲಿದೆ.

 Sharesee more..