Friday, Dec 13 2019 | Time 11:04 Hrs(IST)
  • ಭಾರತ, ಚೀನಾ, ಇರಾನ್ ಹಾಗೂ ಇಥಿಯೋಪಿಯಾ ದೇಶಗಳಲ್ಲಿ ಅಂತರ್ಜಾಲ ಸ್ಥಗಿತ ಪ್ರವೃತ್ತಿ ಹೆಚ್ಚು; ಸಮೀಕ್ಷೆ
  • ಡಯಾಲಿಸಿಸ್ ಉತ್ಪನ್ನ ಪೂರೈಕೆ: ಮೆಡಿಕಾಬಜಾರ್ - ಪ್ರೋ ಮೆಡಿಕಲ್ ಇಂಡಿಯಾ ಒಪ್ಪಂದ
  • ಪೌರತ್ವ ಮಸೂದೆ, ಕೇಂದ್ರದ ವಿರುದ್ಧ ಕೇರಳ, ಪಂಜಾಬ್ ಬಹಿರಂಗ ಸೆಡ್ಡು
  • ಪ್ರಧಾನಿ ಜಾನ್ಸನ್‌ಗೆ 'ದೊಡ್ಡ ಜಯ': ಟ್ರಂಪ್
  • ಚುನಾವಣಾ ಕಣದಲ್ಲಿ ಕ್ರಿಮಿನಲ್ ಗಳು , ಕೋಟ್ಯಾಧಿಪತಿಗಳು
  • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ 19ರಂದು ದೇಶಾದ್ಯಂತ ಪ್ರತಿಭಟನೆಗೆ ಎಡ ಪಕ್ಷಗಳ ಕರೆ
  • ಫಿಲಿಪೈನ್ಸ್‌ನಲ್ಲಿ ರಸ್ತೆ ಅಪಘಾತ: ಕನಿಷ್ಠ 6 ಸಾವು
  • ಕನ್ಸರ್ವೇಟಿವ್ ಪಕ್ಷಕ್ಕೆ ವಿಜಯ : ಎಕ್ಸಿಟ್ ಪೋಲ್ ಸಮೀಕ್ಷೆ
Karnataka Share

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಉಚಿತ ಕೌಶಲ್ಯ ತರಬೇತಿ

ಬೆಂಗಳೂರು, ಜುಲೈ 17 (ಯುಎನ್ಐ) ಪದವಿ ಪೂರ್ಣಗೊಂಡ ಮತ್ತು ಅಂತಿಮ ವರ್ಷದ ಇಂಜಿನಿಯರಿಂಗ್ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ TEQIP (ಟೆಕ್ಯಿಪ್) ಪ್ರಾಯೋಜಿತ ಎರಡು ವಾರಗಳ ಉಚಿತ ಕೌಶಲ್ಯ ತರಬೇತಿ ನೀಡಲು ಶ್ರೀ ಕೃಷ್ಣ ತಾಂತ್ರಿಕ ಮಹಾ ವಿದ್ಯಾಲಯ‌ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ನಿರ್ಧರಿಸಿದೆ ಎಂದು ವಿದ್ಯಾಲಯದ ಪ್ರಾಂಶುಪಾಲ ಡಾ.ಮಂಜುನಾಥ ತಿಳಿಸಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಜಿನಿಯರಿಂಗ್ ನ 40 ರಿಂದ 50 ವಿದ್ಯಾರ್ಥಿಗಳಿಗೆ ಎರಡು ವಾರಗಳ ಉಚಿತ ತರಬೇತಿಯನ್ನು ಜುಲೈ 22 ರಿಂದ ಆಗಸ್ಟ್ 2 ರವರೆಗೆ ವಿಶ್ವವಿದ್ಯಾಲಯದ ಎಸ್.ಕೆ.ಐ.ಟಿ. ಸಭಾಂಗಣದಲ್ಲಿ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಿದ್ದಾರೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಆರ್.ಒ.ಬಿ ನ ನಿರ್ದೇಶಕಿ ಡಾ.ಗಾಯತ್ರಿ ನೆರವೇರಿಸಲಿದ್ದು, ಎಂ.ಎಸ್.ಎಂ.ಇ ನಿರ್ದೇಶಕ ಕೆ.ದೇವರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ www.vtu.ac.in ಮತ್ತು www.skit.org.in ಭೇಟಿ ನೀಡಬಹುದು ಹಾಗೂ ಡಾ.ಶ್ರೀಶೈಲ್ ಮಠ್ ಪ್ರಾಧ್ಯಾಪಕರು ಮೊ.ನಂ.9008235126 ಗೆ ಸಂಪರ್ಕಿಸಲು ಕೋರಿದ್ದಾರೆ.

ಯುಎನ್ಐ ಡಿಸಿ ಎಸ್ಎ1556
More News
ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಚೇತರಿಕೆ : ಮುಖ್ಯಮಂತ್ರಿ,ಸಚಿವರು ಹಾಗೂ ಕೈ ನಾಯಕರಿಂದ ಆರೋಗ್ಯ ವಿಚಾರಣೆ

ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಚೇತರಿಕೆ : ಮುಖ್ಯಮಂತ್ರಿ,ಸಚಿವರು ಹಾಗೂ ಕೈ ನಾಯಕರಿಂದ ಆರೋಗ್ಯ ವಿಚಾರಣೆ

12 Dec 2019 | 10:14 PM

ಬೆಂಗಳೂರು,ಡಿ 12(ಯುಎನ್ಐ) ಆಂಜಿಯೋಪ್ಲಾಸ್ಟ್ ಚಿಕಿತ್ಸೆ ಪಡೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಇಂದು ಅವರ ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ,ಕೆ.ಎಸ್.ಈಶ್ವರಪ್ಪ ಸೇರಿದಂತೆ ಕಾಂಗ್ರೆಸ್ ನಾಯಕರು ಖಾಸಗಿ ಆಸ್ಪತ್ರೆಗೆ ಬೇಟಿ ನೀಡಿ ಬೇಗ ಗುಣಮುಖರಾಗ ವಂತೆ ಹಾರೈಸಿದರು.

 Sharesee more..