Friday, Dec 6 2019 | Time 01:55 Hrs(IST)
Karnataka Share

ಇಂದಿನಿಂದ ಕಾಂಗ್ರೆಸ್ ಚುನಾವಣಾ ಪ್ರಚಾರ: ಪಕ್ಷಾಂತರಿಗಳ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ

ಇಂದಿನಿಂದ ಕಾಂಗ್ರೆಸ್ ಚುನಾವಣಾ ಪ್ರಚಾರ: ಪಕ್ಷಾಂತರಿಗಳ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ
ಇಂದಿನಿಂದ ಕಾಂಗ್ರೆಸ್ ಚುನಾವಣಾ ಪ್ರಚಾರ: ಪಕ್ಷಾಂತರಿಗಳ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ

ಮೈಸೂರು, ನ.20(ಯುಎನ್ಐ) ರಾಜ್ಯದ ಉಪಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಇಂದಿನಿಂದ ಅಧಿಕೃತ ಪ್ರಚಾರ ಆರಂಭಿಸಿದ್ದು, ಹದಿನೈದು ಕ್ಷೇತ್ರಗಳ ಪೈಕಿ ಹನ್ನೆರಡು ಕ್ಷೇತ್ರಗಳನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್ ಗಿದ್ದು, ಇಂದಿನಿಂದ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿದೆ.

ಹುಣಸೂರಿನಲ್ಲಿ ಪ್ರಚಾರ ಆರಂಭಿಸುವ ಮುನ್ನ ಇಲ್ಲಿನ ಸುದ್ದಿಗಾರರೊಂದಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಮಹಾರಾಷ್ಟ್ರ, ಹರಿಯಾಣಗಳಲ್ಲಿ ನಡೆದ ಚುನಾವಣೆಯಲ್ಲಿ ಮತದಾರರು ಪಕ್ಷಾಂತರಿಗಳಿಗೆ ತಕ್ಕಪಾಠ ಕಲಿಸಿದ್ದಾರೆ. ರಾಜ್ಯದಲ್ಲಿ ಆಯಾರಾಮ್ ಗಯಾರಾಮ್ ಸಂಸ್ಕೃತಿ ನಿಲ್ಲಬೇಕು. ಸರ್ವೋಚ್ಛ ನ್ಯಾಯಾಲಯವೇ ಇವರನ್ನು ಅನರ್ಹರು ಎಂದು ಹೇಳುವ ಮೂಲಕ ಸ್ಪೀಕರ್ ಆದೇಶವನ್ನು ಎತ್ತಿಹಿಡಿದಿದೆ. ನ್ಯಾಯಾಲಯವೇ ಇವರನ್ನು ಅನರ್ಹರು ಎಂದ ಮೇಲೆ ತಮ್ಮನ್ನು ಅನರ್ಹರು ಎನ್ನಬೇಡಿ ಎಂದು ಪಕ್ಷಾಂತರಿಗಳು ಹೇಳುತ್ತಿರುವುದು ಸರಿಯೇ? ಎಂದು ತಿರುಗೇಟು ನೀಡಿದ ಅವರು, ಪಕ್ಷಕ್ಕೆ ದ್ರೋಹವೆಸಗಿ ಬಿಜೆಪಿಗೆ ಹೋಗಿರುವ ಪಕ್ಷಾಂತರಿಗಳಿಗೆ ಜನರು ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದು, ಹದಿನೈದೂ ಕ್ಷೇತ್ರಗಳಲ್ಲಿಯೂ ಪಕ್ಷ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ತೋರಿಸುತ್ತೇನೆ ಎಂದು ಸವಾಲು ಹಾಕಿರುವ ಸಚಿವ ಶ್ರೀರಾಮುಲುಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅವರು ಬಹಳ ಜನಪ್ರಿಯ ನಾಯಕರು. ಅವರಿಗಿರುವಂತಹ ಜನಪ್ರಿಯತೆ ನಮಗೆ ಇಲ್ಲ. ಅವರಂತೆ ತೊಡೆತಟ್ಟಲೂ ನಮ್ಮಿಂದ ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ಲಕ್ಷಾಂತರ ನೆರೆಸಂತ್ರಸ್ತರು ಇನ್ನೂ ಸಹ ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿದ್ದಾರೆ. ಕೇಂದ್ರ ಕೇವಲ 1200 ಕೋಟಿ ಘೋಷಿಸಿ ಕೈತೊಳೆದುಕೊಂಡು ಬಿಟ್ಟಿದೆ. ಯಡಿಯೂರಪ್ಪ ಕೇಂದ್ರದಿಂದ ಹೆಚ್ಚಿನ ನೆರವು ತರುತ್ತಾರೆ ಎಂಬ ಭರವಸೆಯೂ ಸುಳ್ಳಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸುವುದಕ್ಕಿಂತ ಬಿಜೆಪಿಯ ನಾಯಕರಿಗೆ ರಾಜಕೀಯವೇ ಮುಖ್ಯವಾಗಿದೆ ಎಂದು ಟೀಕಾಪ್ರಹಾರ ನಡೆಸಿದರು.

ಪಕ್ಷಾಂತರ ಕಾಯಿದೆಯ ಉದ್ದೇಶವೇನು? ಪಕ್ಷಾಂತರಿಗಳಿಂದ ಪ್ರಜಾಪ್ರಭುತ್ವಕ್ಕೆ ಅಪಾಯದ ಬಗ್ಗೆ ಬಿಜೆಪಿ ನಾಯಕರು ಉತ್ತರಿಸಬೇಕು. ಅಮಿತ್ ಶಾ ಹಾಗೂ ಯಡಿಯೂರಪ್ಪ ಸೇರಿ ಪಕ್ಷಾಂತರ ಆರಂಭಿಸಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂದು ಕಟುವಾಗಿ ಟೀಕಿಸಿದರು.

ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ತಮ್ಮನ್ನು ಕಂಡರೆ ಭಯ ಇರಬಹುದೇನೋ. ಹೀಗಾಗಿ ಕಾಂಗ್ರೆಸ್ ನಲ್ಲಿ ತಮ್ಮನ್ನು ಮಾತ್ರ ಗುರಿಯಾಗಿಸಿಕೊಂಡು ಟೀಕಿಸುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಏಕಾಂಗಿ ಅಲ್ಲ. ಯಡಿಯೂರಪ್ಪಗೆ ತಾವು ಏಕಾಂಗಿಯಾಗಲಿ ಎಂಬ ಆಶಯವಿರಬಹುದು. ನೂರ ಮೂವತ್ತು ವರ್ಷಗಳ ಇತಿಹಾಸವುಳ್ಳ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವ ಪಕ್ಷದಲ್ಲಿ ಯಾರೊಬ್ಬರದ್ದೇ ನಾಯಕತ್ವವೂ ಇಲ್ಲ, ದೇಶದಲ್ಲಿ ಪ್ರಜಾಪ್ರಭುತ್ವ ಏನಾದರೂ ಉಳಿದಿದೆ ಎಂದರೆ ಅದು ಕಾಂಗ್ರೆಸ್ ನಿಂದ ಮಾತ್ರ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಅವರು ಜೆಡಿಎಸ್ ನ ಜಿ.ಟಿ.ದೇವೇಗೌಡ ಅವರ ಬೆಂಬಲ ಕೇಳಿದಂತೆ ತಾವು ಅವರ ಬೆಂಬಲ ಕೇಳಲು ಹೋಗುವುದಿಲ್ಲ ಎಂದರು.

ಮಾಧುಸ್ವಾಮಿ ಕುರುಬ ಸಮಾಜದ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕಿತ್ತು. ಮೊದಲು ಮಾತನಾಡಿ ಈಗ ಕ್ಷಮೆ ಕೇಳುವುದು ಎಂದರೆ ಏನರ್ಥ? ಸುಳ್ಳನ್ನು ಸತ್ಯ ಮಾಡುವುದು, ಸತ್ಯವನ್ನು ಸುಳ್ಳು ಮಾಡುವುದೇ ಬಿಜೆಪಿಯ ಪ್ಯಾಸಿಸಂನ ತತ್ವ.

ಸಂಘಪರಿವಾರವಾಗಲೀ ಅಥವಾ ಕೋಮುವಾದ ಯಾರೇ ಮಾಡಲಿ ಅದನ್ನು ಕಾಂಗ್ರೆಸ್ ಖಂಡತುಂಡವಾಗಿ ಖಂಡಿಸುತ್ತದೆ. ಸಮಾಜದಲ್ಲಿ ಸ್ವಾಸ್ಥ್ಯ ಕದಡುವ ಯಾವುದೇ ಸಂಘಟನೆಯನ್ನು ನಾನು ಬೆಂಬಲಿಸುವುದಿಲ್ಲ. ಯಡಿಯೂರಪ್ಪ ರಾಜಕೀಯಕ್ಕಾಗಿ ಮನಸಿಗೆ ಬಂದಂತೆ ಹೇಳಿಕೆ ಕೊಡಬಾರದು. ಸಂಘಟನೆಗಳ ಬಗ್ಗೆ ಸರಿಯಾಗಿ ತಿಳಿದು ಮಾತನಾಡಬೇಕು ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಯುಎನ್‌ಐ ಯುಎಲ್ ಎಎಚ್ 1204

More News
ಉಪ ಚುನಾವಣೆ: ಹೊಸಕೋಟೆಯಲ್ಲಿ ಶೇ 86 77, ಕೆ ಆರ್ ಪುರದಲ್ಲಿ ಶೇ 43 25: ಒಟ್ಟಾರೆ ಶೇ 66 25 ರಷ್ಟು ಮತದಾನ

ಉಪ ಚುನಾವಣೆ: ಹೊಸಕೋಟೆಯಲ್ಲಿ ಶೇ 86 77, ಕೆ ಆರ್ ಪುರದಲ್ಲಿ ಶೇ 43 25: ಒಟ್ಟಾರೆ ಶೇ 66 25 ರಷ್ಟು ಮತದಾನ

05 Dec 2019 | 8:49 PM

ಬೆಂಗಳೂರು, ಡಿ 5 [ಯುಎನ್ಐ] ರಾಜ್ಯ ರಾಜಕೀಯದಲ್ಲಿ ಹಲವು ಮಹತ್ವದ ತಿರುವುಗಳನ್ನು ನೀಡುವ ನಿರೀಕ್ಷೆ ಹೊಂದಿರುವ 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾರರು ಉತ್ಸಾಹಭರಿತವಾಗಿ ಮತ ಚಲಾಯಿಸಿದ್ದು, ಒಟ್ಟಾರೆ ಶೇ 66.

 Sharesee more..