Friday, Dec 6 2019 | Time 21:04 Hrs(IST)
  • ಹೆಟ್ಮೇರ್, ಲೆವಿಸ್ ಸ್ಫೋಟಕ ಬ್ಯಾಟಿಂಗ್: ಭಾರತಕ್ಕೆೆ 208 ರನ್ ಕಠಿಣ ಗುರಿ
  • ಚಿತ್ರೋತ್ಸವ;; ಎರಡನೇ ದಿನದಂದು 43 ಚಿತ್ರಗಳ ಪ್ರದರ್ಶನ
  • ಅಯೋಧ್ಯಾ ಭೂ ವಿವಾದ; ನಾಲ್ಕು ಮರುಪರಿಶೀಲನಾ ಅರ್ಜಿ ಸಲ್ಲಿಕೆ
  • ಸೈನಿಕರಿಗಾಗಿ ಭವನ ನಿರ್ಮಾಣ,ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮ:ಮುಖ್ಯಮಂತ್ರಿ
  • “ಕೈಲಾಸ” ದೇಶ ಸೃಷ್ಟಿಸುವುದು ವೆಬ್ ಸೈಟ್ ಆರಂಭಿಸಿದಷ್ಟು ಸುಲಭವಲ್ಲ !
  • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧಿವಶ
  • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧವಶ
  • ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ 1023 ತ್ವರಿತ ನ್ಯಾಯಾಲಯ ಸ್ಥಾಪನೆ
  • ಇಂತಹ ಎನ್ ಕೌಂಟರ್ ಯುಪಿ, ದೆಹಲಿಯಲ್ಲೂ ನಡೆಯಲಿ : ಮಾಯಾವತಿ
  • ಮಂಡ್ಯ ವಿ ಸಿ ಫಾರಂನಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಆರಂಭ
  • ದಕ್ಷಿಣ ಏಷ್ಯಾ ಕ್ರೀಡಾಕೂಟ: ಕರ್ನಾಟಕದ ಶ್ರೀಹರಿ, ಲಿಖಿತ್ ಗೆ ಚಿನ್ನ
  • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿರಿಲ್, ಅಶ್ಮಿತಾಗೆ ಚಿನ್ನದ ಪದಕ
  • ರಾಷ್ಟ್ರೀಯ ಪೊಲೀಸ್ ಸಮಾವೇಶ: ಪುಣೆಗೆ ಆಗಮಿಸಿದ ಅಮಿತ್ ಶಾ
  • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆೆ ಚಿನ್ನ, ಬೆಳ್ಳಿ
  • ಡುಮ್ಕಾ ಖಜಾನೆ ಪ್ರಕರಣ: ಜಾರ್ಖಂಡ್ ಹೈ ಕೋರ್ಟ್‍ನಿಂದ ಲಾಲು ಪ್ರಸಾದ್ ಯಾದವ್‍ ಜಾಮೀನು ಅರ್ಜಿ ನಿರಾಕರಣೆ
Parliament Share

ಇಂಧನ ದರ ಹೆಚ್ಚಳಕ್ಕೆ ವಿರೋಧ; ಕಾಂಗ್ರೆಸ್, ಟಿಎಂಸಿ ಸದಸ್ಯರಿಂದ ಸಭಾತ್ಯಾಗ

ನವದೆಹಲಿ, ಜುಲೈ 10 (ಯುಎನ್ಐ) ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡಿದ ಉತ್ತರದಿಂದ ತೃಪ್ತಿ ಹೊಂದದ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಸದಸ್ಯರು ಬುಧವಾರ ಲೋಕಸಭಾ ಕಲಾಪವನ್ನು ಬಹಿಷ್ಕರಿಸಿ ಹೊರ ನಡೆದರು.
ಸದನದಲ್ಲಿ ಬುಧವಾರ ಬಜೆಟ್ ಕುರಿತ ಚರ್ಚೆಯಲ್ಲಿ ನಿರ್ಮಲಾ ಸೀತಾರಾಮನ್ ಅವರ ಸಮರ್ಥನೆಯಿಂದ ತಾವು ಸಮಾಧಾನ ಹೊಂದಿಲ್ಲ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹಾಗೂ ಇತರರು ಸಭಾತ್ಯಾಗ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟಿಎಂಸಿ ನಾಯಕ ಸುದೀಪ್ ಬಂಡೋಪಾಧ್ಯಾಯ, ಬಜೆಟ್ ನಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಹೆಚ್ಚಿಸಿರುವುದನ್ನು ವಿರೋಧಿಸಿ ಸಭಾತ್ಯಾಗ ಮಾಡುತ್ತಿರುವುದಾಗಿ ತಿಳಿಸಿದರು.
ಸೋಮವಾರ ಸುದೀರ್ಘ ಬಜೆಟ್ ಮಂಡಿಸಿದ್ದ ಸಚಿವರು, ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮುಂಬರುವ ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಅಮೆರಿಕನ್ ಡಾಲರ್ ಗೆ ಏರಿಸಲು ಬದ್ಧವಾಗಿದ್ದು, ಇದಕ್ಕೆ ಸಾಗರೋತ್ತರ ಹೂಡಿಕೆ ಸೇರಿದಂತೆ ಇತರ ಎಲ್ಲಾ ಮಾರ್ಗಗಳನ್ನು ಅನುಸರಿಸಲಾಗುವುದು ಎಂದಿದ್ದರು.
ಸಾಮಾಜಿಕ ಕಲ್ಯಾಣ ಯೋಜನೆಗಳ ಜಾರಿಯಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಹಾಗೂ ರೈತರು ಹಾಗೂ ಬಡವರಿಗೆ ನೆರವು ಒದಗಿಸಲು ಸಂಪನ್ಮೂಲ ಕ್ರೋಢಿಕರಣ ಹಾಗೂ ತಾರ್ಕಿಕ ವೆಚ್ಚದಂತಹ ಕ್ರಮಗಳನ್ನಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.
ಯುಎನ್ ಐ ಎಸ್ಎಚ್ ಎಎಚ್ 1839
More News
ಮಹಿಳಾ ಸುರಕ್ಷತೆಗೆ ದೇಶಾದ್ಯಂತ ಆಂದೋಲನ : ರಾಜ್ಯಸಭೆಯಲ್ಲಿ  ಪರ್ವಿನ್ ಸಲಹೆ

ಮಹಿಳಾ ಸುರಕ್ಷತೆಗೆ ದೇಶಾದ್ಯಂತ ಆಂದೋಲನ : ರಾಜ್ಯಸಭೆಯಲ್ಲಿ ಪರ್ವಿನ್ ಸಲಹೆ

06 Dec 2019 | 6:53 PM

ನವದೆಹಲಿ, ಡಿ 6 (ಯುಎನ್ಐ) ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಲೈಂಗಿಕ ಕಿರುಕುಳ ತಪ್ಪಿಸಿ ಇದರ ಬಗ್ಗೆ ಜನಜಾಗೃತಿ ಮೂಡಿಸಲು ಮಹಿಳಾ ಸುರಕ್ಷತಾ ದಿನ ಇಲ್ಲವೇ ಮಹಿಳಾ ಸುರಕ್ಷತಾ ಸಪ್ತಾಹ ಆಚರಣೆ ಮಾಡಬೇಕೆಂದು ರಾಜ್ಯಸಭೆಯಲ್ಲಿ ಶುಕ್ರವಾರ ಪ್ರಬಲ ಕೂಗು ಕೇಳಿಬಂದಿದೆ.

 Sharesee more..

ಸಚಿವರ ಗೈರು; ರಾಜ್ಯಸಭಾ ಕಲಾಪ ಮುಂದೂಡಿಕೆ

06 Dec 2019 | 4:49 PM

 Sharesee more..
ರಾಜ್ಯಸಭೆ ಕಲಾಪ ನುಂಗಿಹಾಕಿದ ಉನ್ನಾವ್ ಘಟನೆ

ರಾಜ್ಯಸಭೆ ಕಲಾಪ ನುಂಗಿಹಾಕಿದ ಉನ್ನಾವ್ ಘಟನೆ

05 Dec 2019 | 6:17 PM

ನವದೆಹಲಿ, ಡಿಸೆಂಬರ್ 5 (ಯುಎನ್ಐ) ಉತ್ತರಪ್ರದೇಶದ ಉನ್ನಾವ್ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿದ ಘಟನೆ ರಾಜ್ಯಸಭೆಯಲ್ಲಿ ಗುರುವಾರ ಪ್ರತಿದ್ವನಿಸಿ, ಆಡಳಿತ ಮತ್ತು ವಿರೋಧಿ ಸದಸ್ಯರ ನಡುವೆ ಭಾರಿ ಕೋಲಹಲ,ಗದ್ದಲದ ಕಾರಣ ಕಲಾಪವನ್ನು ಎರಡು ಭಾರಿ ಮುಂದೂಡಿದ ಘಟನೆ ಜರುಗಿತು.

 Sharesee more..