Friday, Dec 6 2019 | Time 21:07 Hrs(IST)
 • ಹೆಟ್ಮೇರ್, ಲೆವಿಸ್ ಸ್ಫೋಟಕ ಬ್ಯಾಟಿಂಗ್: ಭಾರತಕ್ಕೆೆ 208 ರನ್ ಕಠಿಣ ಗುರಿ
 • ಚಿತ್ರೋತ್ಸವ;; ಎರಡನೇ ದಿನದಂದು 43 ಚಿತ್ರಗಳ ಪ್ರದರ್ಶನ
 • ಅಯೋಧ್ಯಾ ಭೂ ವಿವಾದ; ನಾಲ್ಕು ಮರುಪರಿಶೀಲನಾ ಅರ್ಜಿ ಸಲ್ಲಿಕೆ
 • ಸೈನಿಕರಿಗಾಗಿ ಭವನ ನಿರ್ಮಾಣ,ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮ:ಮುಖ್ಯಮಂತ್ರಿ
 • “ಕೈಲಾಸ” ದೇಶ ಸೃಷ್ಟಿಸುವುದು ವೆಬ್ ಸೈಟ್ ಆರಂಭಿಸಿದಷ್ಟು ಸುಲಭವಲ್ಲ !
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧಿವಶ
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧವಶ
 • ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ 1023 ತ್ವರಿತ ನ್ಯಾಯಾಲಯ ಸ್ಥಾಪನೆ
 • ಇಂತಹ ಎನ್ ಕೌಂಟರ್ ಯುಪಿ, ದೆಹಲಿಯಲ್ಲೂ ನಡೆಯಲಿ : ಮಾಯಾವತಿ
 • ಮಂಡ್ಯ ವಿ ಸಿ ಫಾರಂನಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಆರಂಭ
 • ದಕ್ಷಿಣ ಏಷ್ಯಾ ಕ್ರೀಡಾಕೂಟ: ಕರ್ನಾಟಕದ ಶ್ರೀಹರಿ, ಲಿಖಿತ್ ಗೆ ಚಿನ್ನ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿರಿಲ್, ಅಶ್ಮಿತಾಗೆ ಚಿನ್ನದ ಪದಕ
 • ರಾಷ್ಟ್ರೀಯ ಪೊಲೀಸ್ ಸಮಾವೇಶ: ಪುಣೆಗೆ ಆಗಮಿಸಿದ ಅಮಿತ್ ಶಾ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆೆ ಚಿನ್ನ, ಬೆಳ್ಳಿ
 • ಡುಮ್ಕಾ ಖಜಾನೆ ಪ್ರಕರಣ: ಜಾರ್ಖಂಡ್ ಹೈ ಕೋರ್ಟ್‍ನಿಂದ ಲಾಲು ಪ್ರಸಾದ್ ಯಾದವ್‍ ಜಾಮೀನು ಅರ್ಜಿ ನಿರಾಕರಣೆ
Karnataka Share

ಈಗ ನಿಂಬೆಹಣ್ಣು ಬೇಕಿಲ್ಲ : ಹೆಚ್.ಡಿ.ರೇವಣ್ಣ

ಬೆಂಗಳೂರು, ಜು 17 (ಯುಎನ್‍ಐ) ನಿಂಬೆಹಣ್ಣು ಎಂದರೆ, ಹೆಚ್.ಡಿ.ರೇವಣ್ಣ, ರೇವಣ್ಣ ಎಂದರೆ ನಿಂಬೆಹಣ್ಣು ಎನ್ನುವ ಮಾತು ರಾಜ್ಯದಲ್ಲಿ ಜನಜನಿತವಾಗಿದೆ. ಸಭೆ ಸಮಾರಂಭಗಳಲ್ಲಿ ಅಥವಾ ವಿಧಾನಸೌಧ ಪ್ರವೇಶಿಸಲೀ, ಇನ್ನು ರಾಜಕೀಯ ಚಟುವಟಿಕೆಗಳೇ ಇರಲಿ, ರೇವಣ್ಣ ತಮ್ಮ ಕೈಯಲ್ಲಿ, ಜೇಬಿನಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಓಡಾಡುವುದು ಸಹಜ.
ರೇವಣ್ಣ ಅವರ ನಿಂಬೆಹಣ್ಣು ವಿಚಾರ ಮಾಧ್ಯಮಗಳಲ್ಲಿ ಬಹುಚರ್ಚಿತ ವಿಷಯವೂ ಹೌದು. ಸಂಕಷ್ಟ ಬಂದಾಗಲೆಲ್ಲ ದೇವರಲ್ಲಿ ಮೊರೆಹೋಗಿ ನಿಂಬೆಹಣ್ಣನ್ನು ಮಂತ್ರಿಸಿಕೊಂಡು ಬರುವುದು ಅವರ ನಂಬಿಕೆ. ದೈವಭಕ್ತ ಎನ್ನುವ ಕಾರಣಕ್ಕೆ ನಿಂಬೆಹಣ್ಣನ್ನು ಸದಾ ಇಟ್ಟುಕೊಂಡು ಓಡಾಡುವ ರೇವಣ್ಣ ಹಲವು ಬಾರಿ ಹಾಸ್ಯ, ಟೀಕೆ, ವ್ಯಂಗ್ಯಕ್ಕೂ ಗುರಿಯಾಗುತ್ತಿದ್ದಾರೆ.
ಇದೀಗ ಮೈತ್ರಿ ಸರ್ಕಾರಕ್ಕೆ ಅಸ್ಥಿರತೆ ಎದುರಾಗಿದ್ದು, ರೇವಣ್ಣ ಅವರ ನಿಂಬೆಹಣ್ಣು ಸರ್ಕಾರ ಉಳಿಸಲು ಮೋಡಿ ಮಾಡಬಲ್ಲದೇ.. ! ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಆದರೆ ಇಂತಹ ಸಂದರ್ಭದಲ್ಲಿ ತಮಗೆ ನಿಂಬೆಹಣ್ಣು ಇಟ್ಟುಕೊಳ್ಳುವ ಅವಶ್ಯಕತೆಯೇ ಇಲ್ಲ ಎಂದು ಹೆಚ್.ಡಿ.ರೇವಣ್ಣ ಖುದ್ದು ಮಾಧ್ಯಮದವರಿಗೆ ಸ್ಪಷ್ಟಪಡಿಸಿದ್ದಾರೆ. ನಿಂಬೆಹಣ್ಣಿನ ಅವಶ್ಯಕತೆಯೂ ತಮಗಿಲ್ಲ. ಅದನ್ನು ಇಟ್ಟುಕೊಳ್ಳುವುದೂ ಇಲ್ಲ. ತಾಯಿ ಮಹಾಲಕ್ಷ್ಮೀಯ ಅನುಗ್ರಹವಿರುವುದರಿಂದ ನಿಂಬೆಹಣ್ಣು ಬೇಕಿಲ್ಲ ಎಂದು ನುಡಿದರು.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂದೆತಾಯಿಯ ಆಶೀರ್ವಾದ, ಮನೆದೇವರುಗಳಾದ ಈಶ್ವರ, ರಂಗನಾಥ ಸ್ವಾಮಿ ಕೃಪೆಯೇ ತಾವು ಇಷ್ಟರಮಟ್ಟಿಗೆ ಬೆಳೆಯಲು ಕಾರಣ ಎಂದರು.
ಶೃಂಗೇರಿ ಗುರುಗಳ ಆಶೀರ್ವಾದ ತಮ್ಮ ಕುಟುಂಬದ ಮೇಲೆ ಸದಾ ಇದೆ. ಶ್ರೀ ಮಠಕ್ಕೆ ಸರ್ಕಾರದ ಹಣದ ಅವಶ್ಯಕತೆಯಿಲ್ಲ. ಮಠದ ಭಕ್ತಾದಿಗಳ ಸಹಾಯವೇ ಮಠದ ಉದ್ಧಾರಕ್ಕೆ ಸಾಕು ಎಂದರು.
ತಮಗೆ ಹೊಲಗದ್ದೆಗಳಲ್ಲಿ ದುಡಿಯುವುದು ಗೊತ್ತು. ಆಲೂಗಡ್ಡೆ ಚೀಲಗಳನ್ನು ಹೊತ್ತುಕೊಂಡು ಬದುಕು ಸಾಗಿಸಿದ ತಮಗೆ ಜೀವನದ ಸರಳತೆಯೂ ಗೊತ್ತು. ಫೈವ್ ಸ್ಟಾರ್ ಹೊಟೇಲ್ ಆಗಲೀ, ಐಷಾರಾಮಿ ಬದುಕಾಗಲಿ ಬೇಕಿಲ್ಲ. ಒಂದು ತುತ್ತು ಅನ್ನ ತಿನ್ನುವುದಕ್ಕೆ ಅಧಿಕಾರವೇ ಬೇಕೆಂದಿಲ್ಲ ಎಂದು ರೇವಣ್ಣ ವೇದಾಂತದ ಮಾತುಗಳನ್ನಾಡಿದರು.
ಇದು ದೇವರು ಕೊಟ್ಟ ಸರ್ಕಾರ. ದೇವರ ಆಶೀರ್ವಾದವಿರುವವರೆಗೂ ಇರುತ್ತದೆ ಎಂದು ರೇವಣ್ಣ ಮಾರ್ಮಿಕವಾಗಿ ನುಡಿದರು.
ಮಹಾಲಕ್ಷ್ಮೀ ತಾಯಿಯ ಮೇಲೆ ಆಣೆ .ಮಹಾಲಕ್ಷ್ಮೀ ತಾಯಿ ಸನ್ನಿಧಿಯಲ್ಲಿ ತಾವು ಒಬ್ಬರನ್ನು ಈ ಹಿಂದೆ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದು, ಅವರೇ ಈಗ ನಮ್ಮ ಬಗ್ಗೆ ಮಾತನಾಡುವಂತಾಗಿದ್ದಾರೆ. ಆ ತಾಯಿಯೇ ಅವರನ್ನು ನೋಡಿಕೊಳ್ಳಲಿ. ಎಂದು ರಾಜ್ಯಸಭಾ ಸದಸ್ಯರ ಹೆಸರನ್ನು ಹೇಳದೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಹಾಗೂ ರೇವಣ್ಣ ಕಚ್ಚಾಡುತ್ತಾರೆ ಎಂದು ಯಾರಾದರೂ ಭಾವಿಸಿದಲ್ಲಿ ಅದು ಅವರ ಮೂರ್ಖತನ. ತಂದೆ ದೇವೇಗೌಡ ಬದುಕಿರುವವರೆಗೂ ಒಗ್ಗಟ್ಟಾಗಿಯೇ ಇರುತ್ತೇವೆ ಎಂದು ರೇವಣ್ಣ ಹೇಳಿದರು.
ಯುಎನ್‍ಐ ಯುಎಲ್ ಕೆಎಸ್‍ಆರ್ 1615
More News