Monday, Jul 13 2020 | Time 04:24 Hrs(IST)
Entertainment Share

ಈದ್ ಪ್ರಯುಕ್ತ ಅಭಿಮಾನಿಗಳಿಗಾಗಿ ‘ಭಾಯ್ ಭಾಯ್’ ಶೀರ್ಷಿಕೆಯ ಹೊಸ ಹಾಡು ಬಿಡುಗಡೆಗೊಳಿಸಿದ ಸಲ್ಮಾನ್

ನವದೆಹಲಿ, ಮೇ 26 (ಯುಎನ್‌ಐ) ಈದ್ ಉಡುಗೊರೆಯಾಗಿ ನಟ ಸಲ್ಮಾನ್ ಖಾನ್ ‘ಭಾಯ್ ಭಾಯ್‍’ ಶೀರ್ಷಿಕೆ ಹಾಡು ಬಿಡುಗಡೆಗೊಳಿಸಿ ಅವರ ಅಭಿಮಾನಿಗಳ ಆನಂದಕ್ಕೆ ಕಾರಣರಾಗಿದ್ದಾರೆ.
‘ಭಾಯ್ ಭಾಯ್’ ಹಾಡು ಸಹೋದರತೆ ಹಾಗೂ ಭಾವೈಕ್ಯತೆಯನ್ನು ಬಿಂಬಿಸುವ ಗೀತೆಯಾಗಿದ್ದು, ನಾವೆಲ್ಲರೂ ಎಂಬ ನೀತಿಯನ್ನು ಒಳಗೊಂಡಿದೆ.

ಸಲ್ಮಾನ್ ಅಭಿನಯದ ಚಲನಚಿತ್ರಗಳು ಈದ್ ಸಂದರ್ಭದಲ್ಲಿ ನಿಯಮಿತವಾಗಿ ಬಿಡುಗಡೆಯಾಗುತ್ತಿದ್ದು, ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಸುಮಾರು 100 ಪ್ರತಿಶತದಷ್ಟು ಯಶಸ್ಸಿನ ಅನುಪಾತವನ್ನು ಹೊಂದಿವೆ.

ಈದ್ 2020 ರ ಸಮಯದಲ್ಲಿ ‘ರಾಧೆ’ ಬಿಡುಗಡೆಯಾಗಬೇಕಿತ್ತು ಆದರೆ ಕೊರೋನಾ ಸಾಂಕ್ರಾಮಿಕದಿಂದಾಗಿ, ಭಾರತೀಯ ಚಿತ್ರಮಂದಿರಗಳು ಅನಿರ್ದಿಷ್ಟಾವಧಿ ಸ್ಥಗಿತಗೊಂಡಿವೆ. ಹೀಗಾಗಿ ಈ ಬಾರಿ ಸಲ್ಮಾನ್ ತಮ್ಮ ಅಭಿಮಾನಿಗಳಿಗೆ ಹಾಡಿನ ರೂಪದಲ್ಲಿ ಅಚ್ಚರಿಯ ಉಡುಗೊರೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ “ ಎಲ್ಲರಿಗೂ ಈದ್ ಮುಬಾರಕ್. ಈ ವರ್ಷ ಸಾಂಕ್ರಾಮಿಕ ರೋಗವನ್ನು ಎದುರಿಸುವ ಶಕ್ತಿ, ಆಶೀರ್ವಾದ ಎಲ್ಲರಿಗೂ ಸಿಗಲಿ” ಎಂದಿರುವ ಸಲ್ಮಾನ್, "ಈ ವರ್ಷದ ಈದ್ ಹಬ್ಬಕ್ಕೆ ನಮ್ಮ ಚಲನಚಿತ್ರವನ್ನು ಬಿಡುಗಡೆ ಮಾಡಲು ನಮಗೆ ಸಾಧ್ಯವಾಗದ ಕಾರಣ, ನನ್ನ ಎಲ್ಲ ಅಭಿಮಾನಿಗಳಿಗಾಗಿ ವಿಶೇಷ ಹಾಡಿನಲ್ಲಿ ಕೆಲಸ ಮಾಡಿದ್ದೇನೆ. ಇದು ಸಹೋದರತ್ವ ಮತ್ತು ಏಕತೆಯ ಮನೋಭಾವವನ್ನು ಸೂಚಿಸುವ ಕಾರಣ ‘ಭಾಯ್ ಭಾಯ್’ ಎಂಬ ಶೀರ್ಷಿಕೆ ನೀಡಲಾಗಿದೆ” ಎಂದಿದ್ದಾರೆ.
ಕೊರೋನಾ ಬಿಕ್ಕಟ್ಟಿನ ನಡುವೆಯೂ ಸಲ್ಮಾನ್, ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಲು ಇಚ್ಛಿಸದೆ, ಪನ್ವೆಲ್‌ನಲ್ಲಿರುವ ತಮ್ಮ ತೋಟದ ಮನೆಯಲ್ಲಿ ಕನಿಷ್ಠ ಸಿಬ್ಬಂದಿ ಮತ್ತು ಸಂಪನ್ಮೂಲಗಳೊಂದಿಗೆ ‘ಭಾಯ್ ಭಾಯ್’ ಚಿತ್ರೀಕರಣ ಮಾಡಿದ್ದಾರೆ.
‘ಪ್ಯಾರ್ ಕರೋನಾ’ ಮತ್ತು ‘ತೇರೆ ಬಿನಾ’ ಚಿತ್ರದ ನಂತರ ಲಾಕ್‌ಡೌನ್ ನಡುವೆ ಸೂಪರ್‌ಸ್ಟಾರ್ ಬಿಡುಗಡೆ ಮಾಡಿದ ಮೂರನೇ ಹಾಡು ಇದಾಗಿದ್ದು, ಸ್ವತಃ ದನಿಯಾಗಿದ್ದಾರೆ.
ಯುಎನ್ಐ ಎಸ್‍ಎ ವಿಎನ್ 1344
More News

ಬಾಲಿವುಡ್ ಹಾಸ್ಯ ನಟ ಜಗದೀಪ್ ಜಾಫ್ರಿ ನಿಧನ

08 Jul 2020 | 11:30 PM

 Sharesee more..
ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

08 Jul 2020 | 6:18 PM

ಬೆಂಗಳೂರು, ಜುಲೈ 08 (ಯುಎನ್‍ಐ) ಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೊರೋನಾ ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

 Sharesee more..